ಮನೆಗಳ ಹಂಚಿಕೆ ಹೆಸರಲ್ಲಿ ಹಣ ವಸೂಲಿ: ನಾಟಿಕಾರ

KannadaprabhaNewsNetwork |  
Published : Jul 26, 2024, 01:35 AM IST
ಅಫಜಲ್ಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಜೆಡಿಎಸ್ ಮುಖಂಡ ಶಿವಕುಮಾರ ನಾಟಿಕಾರ ಸುದ್ದಿಗೋಷ್ಠಿ ನಡೆಸಿದರು.  | Kannada Prabha

ಸಾರಾಂಶ

ರಾಜ್ಯ ಸರ್ಕಾರದ ವಸತಿ ಸಚಿವಾಲಯದಿಂದ ಅಫಜಲ್ಪುರ ತಾಲೂಕಿಗೆ ಸುಮಾರು 2500 ಸಾವಿರ ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದು ಮನೆಗಳ ಹಂಚಿಕೆ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚವಡಾಪುರ

ರಾಜ್ಯ ಸರ್ಕಾರದ ವಸತಿ ಸಚಿವಾಲಯದಿಂದ ಅಫಜಲ್ಪುರ ತಾಲೂಕಿಗೆ ಸುಮಾರು 2500 ಸಾವಿರ ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದು ಮನೆಗಳ ಹಂಚಿಕೆ ಹೆಸರಿನಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ಆರೋಪಿಸಿದ್ದಾರೆ.

ಅಫಜಲ್ಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ತಾಲೂಕಿನ ಬಡದಾಳ, ಬಂದರವಾಡ, ಮಣೂರ, ಕರ್ಜಗಿ, ನಂದರಗಾ, ದೇಸಾಯಿ ಕಲ್ಲೂರ, ಹಸರಗುಂಡಗಿ ಸೇರಿದಂತೆ 28 ಗ್ರಾಪಂಗಳ ಪೈಕಿ 12 ಗ್ರಾಪಂಗಳಲ್ಲಿ ಮನೆಗಳ ಹಂಚಿಕೆ ಹೆಸರಿಲ್ಲಿ ಹಣ ವಸೂಲಾತಿ ಬಹಳ ಜೋರಾಗಿ ನಡೆಯುತ್ತಿದೆ. ಯಾವುದೇ ಗ್ರಾಮ ಸಭೆ ನಡೆಸದೆ, ಪಿಡಿಒ, ತಾ.ಪಂ ಇಒ ಅವರ ಗಮನಕ್ಕಿಲ್ಲದೆ ಶಾಸಕರ ಬೆಂಬಲಿಗರು ಮನೆಗಳ ಹಂಚಿಕೆಗೆ ಇಳಿದಿದ್ದಾರೆ. ಬಿಪಿಎಲ್ ಕಾರ್ಡದಾರರಿಗೂ ಮನೆಗಳಿಲ್ಲ ಯಾರು ಹಣ ನೀಡುತ್ತಾರೋ ಅವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ಮನೆಗೆ 20 ಸಾವಿರದಂತೆ ಹಣ ವಸೂಲಿ ಮಾಡಲಾಗುತ್ತಿದ್ದು ಇದು ಅಂದಾಜು 5 ಕೋಟಿಯಷ್ಟು ಹಗರಣವಾಗಿದೆ. ಈ ಹಗರಣದಲ್ಲಿ ಶಾಸಕ ಎಂ.ವೈ ಪಾಟೀಲ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೂ ಪಾಲು ಹೋಗಲಿದೆ ಎಂದ ಅವರು ಈ ಹಗರಣ ಸಂಬಂಧ ಪಟ್ಟಂತೆ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದರೂ ಕೂಡ ಅಧಿಕಾರಿಗಳು ನಿಸ್ಸಾಯಕರಾಗಿದ್ದಾರೆ. ಅಧಿಕಾರದ ಮದದಲ್ಲಿ ಶಾಸಕರು ಮತ್ತು ಅವರ ಚೇಲಾಗಳು ಆಡಿದ್ದೇ ಆಟ ಎನ್ನುವಂತಾಗಿದೆ. ಇನ್ನೊಂದು ಕಡೆ ಪಿಡ್ಬ್ಲೂಡಿ ಇಲಾಖೆಯಿಂದ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳ ದುರಸ್ತಿ ಹೆಸರಿನಲ್ಲಿ ಸುಮಾರು 2 ಕೋಟಿಯಷ್ಟು ಅನುದಾನದ ದುರ್ಬಳಕೆ ಮಾಡಿ ನುಂಗಿ ಹಾಕಲಾಗಿದೆ. ಈ ಎರಡು ಪ್ರಕರಣಗಳ ಸಮಗ್ರ ತನಿಖೆ ನಡೆಯಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಶಾಸಕರ ವಿರುದ್ದ, ಸರ್ಕಾರದ ವಿರುದ್ದ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜಮೀಲ ಗೌಂಡಿ, ರಾಜು ಉಕ್ಕಲಿ, ಶ್ರೀಶೈಲ್, ನಿಂಗು ಹೂಗಾರ ಇದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ