ಚಿದುರ್ಗದ ಪ್ರತಿ ವಾರ್ಡನಲ್ಲೂ ಹಸಿ, ಒಣ ಕಸ ಸಂಗ್ರಹಣೆ

KannadaprabhaNewsNetwork |  
Published : Aug 10, 2025, 01:30 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ | Kannada Prabha

ಸಾರಾಂಶ

ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿನ ಕಸ ಸಂಗ್ರಹಣೆ ಸಂಬಂಧ ಖರೀದಿಸಲಾದ ವಾಹನದ ಕೀ ಅನ್ನು ಶಾಸಕ ವೀರೇಂದ್ರ ಪಪ್ಪಿ ಸೋಮವಾರ ಚಾಲಕರಿಗೆ ವಿತರಿಸಿದರು. ನಗರಸಭೆ ಅಧ್ಯಕ್ಷ ಬಿ.ಎನ್. ಸುಮಿತಾ ಇದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ನಗರದ ಪ್ರತಿ ವಾರ್ಡ್‍ಗೂ ಸಹ ಮುಂದಿನ ವಾರದಿಂದ ಕಸ ಸಂಗ್ರಹಣೆ ವಾಹನ ಬರಲಿದ್ದು, ನಗರದ ನಾಗರೀಕರು ಮನೆಯಲ್ಲಿಯೇ ಹಸಿ ಕಸ-ಒಣ ಕಸ ವಿಂಗಡಿಸಿ, ನಗರಸಭೆ ವಾಹನಗಳಿಗೆ ನೀಡಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ನಗರದ ನಗರಸಭೆ ಕಚೇರಿ ಆವರಣದಲ್ಲಿ ಶನಿವಾರ ಚಿತ್ರದುರ್ಗ ನಗರಸಭೆಗೆ ವಿವಿಧ ಯೋಜನೆಗಳಡಿ ಖರೀದಿಸಿರುವ ವಾಹನಗಳ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾರ್ವಜನಿಕರು ಚರಂಡಿ, ಗುಂಡಿ, ರಸ್ತೆ ಸೇರಿದಂತೆ ಅನ್ಯ ಸ್ಥಳಗಳಲ್ಲಿ ಕಸ ಹಾಕದೆ, ಒಂದು ಕಡೆ ಸಂಗ್ರಹಿಸಿ, ನಗರಸಭೆಯ ಕಸ ಸಂಗ್ರಹಣೆಯ ವಾಹನಗಳಿಗೆ ನೀಡಬೇಕು. ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಹೇಳಿದರು.

2023-24ನೇ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನ 1 ಕೋಟಿ ರು. ವೆಚ್ಚದಲ್ಲಿ ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ದಿನನಿತ್ಯದ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ಪ್ರತಿ ಮನೆಯ ಕಸ ಸಂಗ್ರಹಣೆಗಾಗಿ ಮಿನಿ ಟಿಪ್ಪರ್‌ಗಳು 29.16 ಲಕ್ಷ ರು.ವೆಚ್ಚದಲ್ಲಿ ಚಿತ್ರದುರ್ಗ ನಗರಸಭೆ ಕಚೇರಿ ಹಿಂಭಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ವಾಹನಗಳನ್ನು ನಿಲುಗಡೆಗೆ ಶೆಡ್ ನಿರ್ಮಾಣ ಕಾಮಗಾರಿ, 2021-22ನೇ ಅನ್‍ಡಿಸ್ಟ್ರಿಬ್ಯೂಟ್ ಮಿಲಿಯನ್ ಪ್ಲಸ್ ಸಿಟಿ ಅನುದಾನ 24 ಲಕ್ಷ ರು. ವೆಚ್ಚದಲ್ಲಿ ಚಿತ್ರದುರ್ಗ ನಗರಸಭೆಗೆ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ವಹಣೆಗಾಗಿ ಮಿನಿ ಜಟ್ಟಿಂಗ್ ಯಂತ್ರ, 2022-23ನೇ 15ನೇ ಹಣಕಾಸು ಮೂಲ ಅನುದಾನ 18 ಲಕ್ಷ ರು. ವೆಚ್ಚದ ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಜೀಪ್ ಮೌಂಟೆಂಡ್ ಸಿಲ್ಟ್ ತೆಗೆಯುವ ವಾಹನ, ಎಸ್‍ಎಫ್‍ಸಿ ಮತ್ತು ನಗರಸಭೆ ನಿಧಿ 24 ರು. ಲಕ್ಷ ವೆಚ್ಚದಲ್ಲಿ 2022-23, 2023-24 ಮತ್ತು 2024-25ನೇ ಸಾಲಿನ ಎಸ್‍ಎಫ್‍ಸಿ ಮತ್ತು ನಗರಸಭೆ ನಿಧಿಯಡಿಯಲ್ಲಿ ಶೇ.5ರ ಯೋಜನೆಯಡಿಯಲ್ಲಿ ವಿಕಲ ಚೇತನರಿಗೆ 15 ತ್ರಿಚಕ್ರದ ವಾಹನ, ಸಿಎಸ್‍ಆರ್ ಅನುದಾನದಲ್ಲಿ ಬಿಇಎಲ್ ಸಂಸ್ಥೆಯಿಂದ ಸಿಎಸ್‍ಆರ್ ಅನುದಾನದಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಗೆ ವಿದ್ಯುತ್ ಚಾಲಿತ 18 ತ್ರಿ ಚಕ್ರದ ಆಟೋ ವಾಹನಗಳನ್ನು ಹಾಗೂ 2 ಫಾಗಿಂಗ್ ವಾಹನಗಳನ್ನು ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ ಉದ್ಘಾಟಿಸಿದರು.

ಚಿತ್ರದುರ್ಗ ನಗರದ ಲಿಡ್ಕರ್ ಕಟ್ಟಡದ ಮುಂಭಾಗದಲ್ಲಿ 2025-26ನೇ ಸಾಲಿನ 15ನೇ ಹಣಕಾಸು ಅನುದಾನ ರು.25 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರದ ವಾರ್ಡ್ ನಂ.27ರಲ್ಲಿ ಲಿಡ್ಕರ್ ಪಕ್ಕದ ರಸ್ತೆ ಮತ್ತು ಏರೋಪ್ಲೇನ್ ಬಿಲ್ಡಿಂಗ್ ಹತ್ತಿರ ಸಿ.ಸಿ ರಸ್ತೆ ನಿರ್ಮಾಣ ಹಾಗೂ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿದರು.

ಉದ್ಯಮ ನಿಧಿ ಅನುದಾನ ರು.43 ಲಕ್ಷ ವೆಚ್ಚದಲ್ಲಿ ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನೆಲ ಹಾಗೂ ಮೊದಲ ಅಂತಸ್ತು ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿ ಚಾಲನೆ, ಚಿತ್ರದುರ್ಗ ನಗರದ ಮಾರುತಿ ನಗರದ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ರು.30 ಲಕ್ಷ ವೆಚ್ಚದಲ್ಲಿ ವಾರ್ಡ್ ನಂ.19ರ ಮೆದೇಹಳ್ಳಿ ರಸ್ತೆಯ ರೈಲ್ವೆ ಟ್ರಾಕ್ ಬಲಭಾಗ ಮಾರುತಿ ನಗರದಲ್ಲಿ ಸಿ.ಸಿ.ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ, ಉಪಾಧ್ಯಕ್ಷೆ ಶಕೀಲಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ, ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಸೇರಿದಂತೆ ನಗರಸಭೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ