ಪ್ರತಿ ಮನೆ ಮನೆಯಿಂದಲೂ ವಾಲ್ಮೀಕಿ ಜಾತ್ರೆಗೆ ಬನ್ನಿ: ರಾಮನಗೌಡ ಬುನ್ನಟ್ಟಿ

KannadaprabhaNewsNetwork |  
Published : Jan 19, 2024, 01:45 AM IST
೧೭ಕೆಎನ್‌ಕೆ-೧                                                                                  ವಾಲ್ಮೀಕಿ ಜಾತ್ರೆಗೆ ಆಗಮಿಸುವಂತೆ ಸಮಾಜ ಬಾಂಧವರಿಗೆ ಆಮಂತ್ರಣ ನೀಡಿ ಆಹ್ವಾನಿಸಲಾಯಿತು. | Kannada Prabha

ಸಾರಾಂಶ

೧೧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಜಾತ್ರಾ ಸಮಿತಿ ಹಾಗೂ ಅಖಿಲ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಸಂಚರಿಸಿ ವಾಲ್ಮೀಕಿ ಜಾತ್ರೆಗೆ ಆಮಂತ್ರಣ ನೀಡಿ, ಸಭೆ ನಡೆಸಿ ಆಹ್ವಾನಿಸಿದ್ದೇವೆ

ಕನಕಗಿರಿ: ವಾಲ್ಮೀಕಿ/ನಾಯಕ ಸಮಾಜದ ಪ್ರತಿ ಮನೆ-ಮನೆಯಿಂದಲೂ ವಾಲ್ಮೀಕಿ ಜಾತ್ರೆಗೆ ಆಗಮಿಸಿ ಅಭೂತಪೂರ್ವ ಯಶಸ್ವಿಗೆ ಸಹಕರಿಸಬೇಕು ಎಂದು ವಾಲ್ಮೀಕಿ ಜಾತ್ರಾ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ರಾಮನಗೌಡ ಬುನ್ನಟ್ಟಿ ಹೇಳಿದರು.ತಾಲೂಕಿನ ಚಿಕ್ಕಮಾದಿನಾಳದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು. ಫೆ.೮, ೯ರಂದು ವಾಲ್ಮೀಕಿ ಗುರುಪೀಠದಿಂದ ರಾಜೇನಹಳ್ಳಿಯಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ ನಡೆಯಲಿದೆ. ೬ನೇ ವರ್ಷದ ಜಾತ್ರೆ ಇದಾಗಿದ್ದು, ರಥೋತ್ಸವವು ಸಹ ನಡೆಯಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ವಿಪಕ್ಷ ನಾಯಕ ಆರ್.ಅಶೋಕ, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.ತಾಲೂಕಿನ ೧೧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿಯೂ ಜಾತ್ರಾ ಸಮಿತಿ ಹಾಗೂ ಅಖಿಲ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದ ಪದಾಧಿಕಾರಿಗಳು ಸಂಚರಿಸಿ ವಾಲ್ಮೀಕಿ ಜಾತ್ರೆಗೆ ಆಮಂತ್ರಣ ನೀಡಿ, ಸಭೆ ನಡೆಸಿ ಆಹ್ವಾನಿಸಿದ್ದೇವೆ. ಈ ಬಾರಿಯ ಜಾತ್ರೆಗೆ ೩ ರಿಂದ ೪ ಸಾವಿರ ಜನಸಂಖ್ಯೆ ಜಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವೈಚಾರಿಕಾ ಜಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮಾಜದ ಯುವಕರು ಕೂಡ ಹಗಲಿರುಳು ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದರು.ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಘಟಕದ ಗೌರವಾಧ್ಯಕ್ಷ ಮುದಿಯಪ್ಪ ಮಲ್ಲಿಗೆವಾಡ, ಅಧ್ಯಕ್ಷ ನಾಗರಾಜ ಇದ್ಲಾಪುರ, ಉಪಾಧ್ಯಕ್ಷರಾದ ನಿಂಗಪ್ಪ ನಾಯಕ ನವಲಿ, ಹುಲಿಗೆಮ್ಮ ನಾಯಕ, ವೆಂಕಟೇಶ ತೀರ್ಥಭಾವಿ, ಸಮಾಜದ ಮುಖಂಡರಾದ ಹನುಮೇಶ ನಾಯಕ, ಶರಣಪ್ಪ ಸೋಮಸಾಗರ, ಶೇಖರಗೌಡ ಸೋಮಸಾಗರ, ಪಂಪಾಪತಿ ತರ್ಲಕಟ್ಟಿ, ಬಸವರಾಜ ಗಣವಾರಿ, ರಂಗಸ್ವಾಮಿ, ಮಾದಿನಾಳಪ್ಪ, ಮಾರುತಿ ಹಿರೇಮಾದಿನಾಳ, ಕನಕಪ್ಪ ಹುಡೇಜಾಲಿ, ರಮೇಶ ರಾಮದುರ್ಗಾ ಸೇರಿದಂತೆ ಸಮಾಜದವರು ಇದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ