ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ

KannadaprabhaNewsNetwork |  
Published : Sep 03, 2024, 01:30 AM ISTUpdated : Sep 03, 2024, 01:31 AM IST
ಗಜೇಂದ್ರಗಡ ಮೈಸೂರು ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಗುಡ್ಡಾಪೂರ ದಾನಮ್ಮದೇವಿ ಪುರಾಣ ಮಹಾಮಂಗಲೋತ್ಸವದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮದಲ್ಲಿ ದಾನಮ್ಮದೇವಿ ತೊಟ್ಟಿಲೋತ್ಸವ ನಡೆಯಿತು. | Kannada Prabha

ಸಾರಾಂಶ

ಪುರಾಣ, ಪ್ರವಚನದಲ್ಲಿ ಬರುವ ಸಂದರ್ಭ,ಸನ್ನಿವೇಶವನ್ನು ಇಂದಿನ ಕಾಲದ ಜನರಿಗೆ ತೋರಿಸುವ ಸಲುವಾಗಿ ಶ್ರೀಮಠದಲ್ಲಿ ಪುರಾಣ ನಡೆಸಲಾಗುತ್ತಿದೆ

ಗಜೇಂದ್ರಗಡ: ದೇವರನ್ನು ಭಕ್ತಿ ಪೂರ್ವಕವಾಗಿ ಪೂಜಿಸಿದಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುವುದರ ಜತೆಗೆ ನೀವು ಕೈಗೊಳ್ಳುವ ಕಾರ್ಯಗಳಲ್ಲಿ ಯಶಸ್ಸು ದೊರೆಯಲು ಸಾಧ್ಯ ಎಂದು ಮೈಸೂರು ಮಠದ ವಿಜಯಮಹಾಂತ ಸ್ವಾಮೀಜಿ ಹೇಳಿದರು.

ಸ್ಥಳೀಯ ಮೈಸೂರು ಮಠದಲ್ಲಿ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಶ್ರಾವಣ ಮಾಸದ ನಿಮಿತ್ತ ಗುಡ್ಡಾಪೂರ ದಾನಮ್ಮದೇವಿ ಪುರಾಣ ಕಾರ್ಯಕ್ರಮದಲ್ಲಿ ದಾನಮ್ಮದೇವಿ ತೊಟ್ಟಿಲೋತ್ಸವ ಹಾಗೂ ಉಡಿತುಂಬುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪುರಾಣ, ಪ್ರವಚನದಲ್ಲಿ ಬರುವ ಸಂದರ್ಭ,ಸನ್ನಿವೇಶವನ್ನು ಇಂದಿನ ಕಾಲದ ಜನರಿಗೆ ತೋರಿಸುವ ಸಲುವಾಗಿ ಶ್ರೀಮಠದಲ್ಲಿ ಪುರಾಣ ನಡೆಸಲಾಗುತ್ತಿದೆ. ವೀರಶೈವ ಲಿಂಗಾಯತ ಸಮಾಜದವರು ತೊಟ್ಟಿಲೋತ್ಸವ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿರುವುದು ಶ್ಲಾಘನೀಯ ಎಂದರು.

ಕೊಪ್ಪಳ ತಾಲೂಕಿನ ಕಿನ್ಯಾಳ ಗ್ರಾಮದಿಂದ ಸಂಪ್ರದಾಯದಂತೆ ತೊಟ್ಟಿಲನ್ನು ವಿವಿಧ ವಾಧ್ಯಗಳೊಂದಿಗೆ ಶ್ರೀಮಠಕ್ಕೆ ತರಲಾಯಿತು. ವೇದಮೂರ್ತಿಗಳಾದ ಮಲ್ಲಯ್ಯಸ್ವಾಮಿ ಗುರುಸ್ಥಳಮಠ, ಗುರಲಿಂಗಯ್ಯ ಹಿರೇಮಠ, ಶಾಂತಯ್ಯ ಶಾಂತಗೇರಿಮಠ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು.

ವೀರಶ್ಯವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ, ಪುರಾಣ ಸಮಿತಿ ಅಧ್ಯಕ್ಷ ಟಿ.ಎಸ್. ರಾಜೂರ, ಯುವ ಘಟಕದ ಅಧ್ಯಕ್ಷ ಅಪ್ಪು ಮತ್ತಿಕಟ್ಟಿ, ಎ.ಪಿ. ಗಾಣಿಗೇರ, ಡಾ.ಬಿ.ವಿ. ಕಂಬಳ್ಯಾಳ, ಎಸ್.ಎಸ್. ವಾಲಿ, ಪ್ರಭು ಚವಡಿ, ಮಲ್ಲಿಕಾರ್ಜುನ ಹಿರೇಮನಿ, ಶಿವು ಕೋರಧಾನ್ಯಮಠ, ಶರಣಪ್ಪ ರೇವಡಿ, ಮೋಹನ ಕನಕೇರಿ, ಶಿವಪುತ್ರಪ್ಪ ಸಂಕನೂರ, ಬಾಳು ಕುಂಬಾರ, ದೇವಪ್ಪ ಮಡಿವಾಳರ, ಚಿದಾನಂದಪ್ಪ ಹಡಪದ, ಸಂಗಪ್ಪ ಕುಂಬಾರ, ವಿದ್ಯಾ ಬಂಡಿ, ಮಂಜುಳಾ ಕೋರಧಾನ್ಯಮಠ, ಲಲಿತಾ ಗೊಂಗಡಶೆಟ್ಟಿಮಠ, ಅನ್ನಪೂರ್ಣಾ ಗಾಣಿಗೇರ, ಸುಮಾ ಲಕ್ಕುಂಡಿಮಠ, ಶ್ವೇತಾ ಕಾರಡಗಿಮಠ, ಕಸ್ತೂರೆಮ್ಮ ಹಿರೇಮಠ, ಪ್ರೇಮಕ್ಕಾ ವಸ್ತ್ರದ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!