ಸಂಗೀತ, ಸಾಹಿತ್ಯ ಪೂಜ್ಯ ಭಾವನೆಯಿಂದ ಕಾಣಿ

KannadaprabhaNewsNetwork |  
Published : Apr 18, 2024, 02:25 AM IST
 ಪ್ರೋ. ಎಸ್.ವಿ.ಸಮಾಳದ ಪ್ರಾಸ್ತಾವಿಕ ಮಾತನಾಡಿದರು. ಪಿ.ಡಗಳಚಂದ ಕಾರ್ಯಕ್ರಮ ನಿರೂಪಿಸಿದರು | Kannada Prabha

ಸಾರಾಂಶ

ಸಂಗೀತ ಮಾತೃ ಸ್ವರೂಪಿ ತಾಯಿ ಇದ್ದಂತೆ, ಸಂಗೀತವನ್ನು ಆಲಿಸುತ್ತಿದ್ದರೆ ಮನಸ್ಸಿನ ದುಖಃ ದುಮ್ಮಾನಗಳು ದೂರವಾಗಿ ಆರೋಗ್ಯವೂ ಸುಧಾರಣೆಯಾಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಸಂಗೀತ ಮತ್ತು ಸಾಹಿತ್ಯ ಸರಸ್ವತಿಯ ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಅವುಗಳನ್ನು ನಾವು ಪೂಜ್ಯ ಭಾವನೆಯಿಂದ ಕಾಣಬೇಕು ಎಂದು ಇಳಕಲ್ಲ ಶ್ರೀಮಠದ ಗುರುಮಹಾಂತ ಶ್ರೀಗಳು ಅಭಿಪ್ರಾಯ ಪಟ್ಟರು.

ಇಳಕಲ್ಲಿನ ವಿಜಯ ಮಹಾಂತೇಶ್ವರ ಅನುಭವ ಮಂಟಪದ ಆವರಣದಲ್ಲಿ ರವಿಂದ್ರ ದೇವಗಿರಿಕರ ಹಾಗು ಸ್ನೇಹರಂಗ ಸಂಸ್ಥೆ ಆಯೋಜಿಸಿದ್ದ ಡಾ.ಪಿ.ಬಿ.ಶ್ರೀನಿವಾಸರ ಅವರ 11ನೇ ಪುಣ್ಯಸ್ಮರಣೆ ನಿಮಿತ್ತ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಗೀತ ಮಾತೃ ಸ್ವರೂಪಿ ತಾಯಿ ಇದ್ದಂತೆ, ಸಂಗೀತವನ್ನು ಆಲಿಸುತ್ತಿದ್ದರೆ ಮನಸ್ಸಿನ ದುಖಃ ದುಮ್ಮಾನಗಳು ದೂರವಾಗಿ ಆರೋಗ್ಯವೂ ಸುಧಾರಣೆಯಾಗಲಿದೆ ಎಂದರು.

ಇಂಥ ಸಂಗೀತ ಸೇವೆ ನೀಡಿದ ಗಾಯಕ ದಿ. ಪಿ.ಬಿ.ಶ್ರೀನಿವಾಸಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇಳಕಲ್ಲ ನಗರದಲ್ಲಿ ಕಳೆದ 11 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಬೆಂಗಳೂರಿನ ಪಿ.ಬಿ.ಶ್ರೀನಿವಾಸ ಅವರು ಎಲ್ಲಿ, ಪುಣೆ ನಗರವಾಸಿ ರವೀಂದ್ರ ದೇವಗಿರಕರ ಎಲ್ಲಿ. ಆದರೆ ಈ ಕಾರ್ಯಕ್ರಮ ಇಳಕಲ್ಲ ನಗರದಲ್ಲಿ ನಡೆಯುತ್ತಿರುವದು ಪುಣ್ಯ. ರವಿಂದ್ರ ದೇವಗಿರಕರ ಇಳಕಲ್ಲ ನಗರದವರು ಎಂಬುದು ಕೂಡ ಹೆಮ್ಮೆಯೇ. ಇಂಥ ಕಾರ್ಯಕ್ರಮಗಳಿಗೆ ದೂರದಿಂದ ಹಾಡುಗಾರರನ್ನು ಕರೆಸದೇ ಎಳೆಯ ಕುಸುಮಗಳಿಗೆ ಹಾಡುವದನ್ನು ಕಲಿಸಿ ಪ್ರದರ್ಶನ ಮಾಡುತ್ತಿರುವದು ನಿಜಕ್ಕೂ ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿರೂರಿನ ಡಾ.ಬಸವಲಿಂಗ ಶ್ರೀಗಳು ಮಾತನಾಡಿ, ಪಿ.ಬಿ.ಶ್ರೀನಿವಾಸರ ಪರಿವಾರ ಮಾಡುವ ಕಾರ್ಯವನ್ನು ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ರವಿಂದ್ರ ದೇವಗಿರಕರ ಎಲೆಮರೆಯ ಕಾಯಿಯಂತೆ ದಾನ ಮಾಡುವ ಕೈ ಎಂದು ಹೇಳಿದರು.

ಇಳಕಲ್ಲ ನಗರದ ನಟ ಮತ್ತು ನಿರ್ದೆಶಕ ಉಮೇಶ ಟೆಂಕಸಾಲಿಯನ್ನು ಸತ್ಕರಿಸಿ ಅವರಿಗೆ ಧನಸಹಾಯ ನೀಡಿ ಗೌರವಿಸಲಾಯಿತು. ಹಾಗು ಗೋ ಸೇವಾ ಮಾಡುವ ಧನರಾಮ ಚೌದರಿರನ್ನು ಸಹ ಸತ್ಕರಿಸಲಾಯಿತು. ಅಧ್ಯಕ್ಷ ಬಸವರಾಜ ಮಠದ ಉಪಸ್ಥಿತರಿದ್ದರು. ಇಳಕಲ್ಲ ನಗರದ ಗಾಯಕ ಗೋಪಿಕೃಷ್ಣ ಕಠಾರೆ, ಪರುಶರಾಮ ಪವಾರ, ನರಸಿಂಗ ಕಾಟವಾ, ಸುರೇಶ ರಾಯಬಾಗಿ, ಜಗದೀಶ ಕಾಟವಾ, ವಿದ್ಯಾಶ್ರೀ ಗಂಜಿ, ರೇಖಾ ಕಠಾರಿ, ನಿತ್ಯಶ್ರೀ ಸೂಳಿಭಾವಿ, ವೃಷ್ಣವಿ ಗೂಳಿ, ಅಮುನಾ ಕಾಟವಾ ಸಂಗೀತದ ಪಿ.ಬಿ.ಶ್ರೀನಿವಾಸ ಹಾಡುಗಳನ್ನು ಹಾಡಿ ಜನರ ಮನ ತಣಿಸಿದರು. ಗೋವಿಂದ ಕರವಾ ಹಾಗು ಶ್ರಾವಣಿ ಕಟಗಿ ನಿರೂಪಿಸಿದರು. ಮಹಾದೇವ ಕಂಬಾಗಿ ಸ್ವಾಗತಿಸಿದರೆ. ಪ್ರೊ.ಎಸ್.ವಿ.ಸಮಾಳದ ಪ್ರಾಸ್ತಾವಿಕ ಮಾತನಾಡಿದರು.

ಕೋಟ್...ಸಂಗೀತ ಎಂಬುದು ಮಾತೃ ಸ್ವರೂಪಿ ತಾಯಿ ಇದ್ದಂತೆ, ಸಂಗೀತವನ್ನು ಆಲಿಸುತ್ತಿದ್ದರೆ ಮನಸ್ಸಿನ ದುಖಃ ದುಮ್ಮಾನಗಳು ದೂರವಾಗಿ ಆರೋಗ್ಯವೂ ಸುಧಾರಣೆಯಾಗಲಿದೆ.

ಗುರುಮಹಾಂತ ಶ್ರೀ . ಇಳಕಲ್ಲ ಶ್ರೀಮಠ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!