ಕನ್ನಡಪ್ರಭ ವಾರ್ತೆ ಪಾವಗಡ ಸಂಘದ ಹೋರಾಟದ ಫಲವಾಗಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಪಡಿತರ ವಿತರಕರಿಗೆ ಸರ್ಕಾರದ ಕೆ2 ಮೂಲಕವೇ ಕಮೀಷನ್ ಜಮೆಯಾಗಲಿದೆ ಎಂದು ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದರು. ಮಂಗಳವಾರ ಪಟ್ಟಣದ ಅಲಂಕಾರ ಚಿತ್ರ ಮಂದಿರದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇನ್ನೂ ಮುಂದೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗೆ ಹೋಗುವ ಅಗತ್ಯವಿಲ್ಲ. 10ದಿನದ ಒಳಗೆ ನೇರವಾಗಿ ಕೆ 2ಮೂಲಕ ನಿಮ್ಮ ಖಾತೆಗೆ ಕಮಿಷನ್ ಜಮಾವಾಗಲಿದೆ.ಇಡೀ ದೇಶದಲ್ಲಿ ಇಂತಹ ಅತ್ಯುತ್ತಮ ಕೆಲಸ ಎಲ್ಲೂ ಯಾರು ಮಾಡಿಲ್ಲ. ಸಮಸ್ಯೆ ಎನೇ ಇದ್ದರೂ ನಿರ್ವಹಣೆ ಮಾಡಿಕೊಡುವ ಭರವಸೆ ಅವರು ವ್ಯಕ್ತಪಡಿಸಿದರು.ನಟಿ ರಾಗಿಣಿ ಮಾತನಾಡಿ, ಸರ್ಕಾರದ ನ್ಯಾಯಬೆಲೆ ಅಂಗಡಿ ಸಿನಿಮಾದಲ್ಲಿ ಒಂದು ಒಳ್ಳೆಯ ಸಂದೇಶವಿದೆ. ವಿತರಕರು ಹಾಗೂ ಪಡಿತರರ ಸಮಸ್ಯೆಯ ಬಗ್ಗೆ ಮಾಹಿತಿ ಇದ್ದು ಎಲ್ಲರೂ ಈ ಸಿನಿಮಾ ವೀಕ್ಷಿಸಿ ಆಶೀರ್ವದಿಸಿ ಎಂದು ಮನವಿ ಮಾಡಿದರು. ಇದೇ ವೇಳೆ ನಿಸಿಮಾ ನಿರ್ಮಾಪಕರಾದ ಬಾಮಾ ಹರೀಶ್, ಚೆಲುವಮೂರ್ತಿ,ತಾಲೂಕು ಅಧ್ಯಕ್ಷರಾದ ನಾಗರಾಜು, ಬೆಂಗಳೂರು ಗ್ರಾಮಾ೦ತರ ಅಧ್ಯಕ್ಷರಾದ ಲಕ್ಷ್ಮಣ ಗೌಡ್ರು, ಕಾರ್ಯದರ್ಶಿ ರಾಮಕೃಷ್ಣಪ್ಪ, ಗೊವಿಂದರೆಡ್ಡಿ, ಪ್ರಕಾಶಪ್ಪ,ಸುಬ್ಬರಾಯಪ್ಪ,ಯತೀಶ್ ಕುಮಾರ್, ನಾಗರಾಜು, ಯೋಗಿಶ್, ಸೂರಪ್ಪ,ಲಿಂಗದಹಳ್ಳಿ ಕದುರಪ್ಪ,ಓಬಳಾಪುರ ಲಿಂಗಮೂರ್ತಿ,ಸುಬ್ರಮಣಿ, ಹಾಗೂ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಜರಿದ್ದರು.