ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬದ್ಧರಾಗಿ: ಸಿ.ಎಸ್. ಅರಸನಾಳ

KannadaprabhaNewsNetwork |  
Published : Oct 01, 2026, 02:30 AM IST
ಕಾರ್ಯಕ್ರಮ ಉದ್ಘಾಟಿಸಿದ ಪ್ರೊ. ಸಿ.ಎಸ್. ಅರಸನಾಳ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಯುವಕರು ಬದ್ಧರಾಗಬೇಕು. ಭಾರತದಲ್ಲಿ ಶೇ.70ಕ್ಕಿಂತಲೂ ಹೆಚ್ಚು ಯುವಕರಿದ್ದಾರೆ. ಇದರಲ್ಲಿ ಅನೇಕರು ವ್ಯಸನಯುಕ್ತರಾಗಿ ತಮ್ಮ ಆರೋಗ್ಯ ಮತ್ತು ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆ, ವ್ಯಸನಮುಕ್ತ ಭಾರತ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮುಂಡರಗಿ

ವ್ಯಸನ ಮುಕ್ತ ಸಮಾಜದ ನಿರ್ಮಾಣಕ್ಕೆ ಯುವಕರು ಬದ್ಧರಾಗಬೇಕು. ಭಾರತದಲ್ಲಿ ಶೇ.70ಕ್ಕಿಂತಲೂ ಹೆಚ್ಚು ಯುವಕರಿದ್ದಾರೆ. ಇದರಲ್ಲಿ ಅನೇಕರು ವ್ಯಸನಯುಕ್ತರಾಗಿ ತಮ್ಮ ಆರೋಗ್ಯ ಮತ್ತು ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಎನ್ಎಸ್ಎಸ್ ಸ್ವಯಂ ಸೇವಕರು ಇಂತಹ ಯುವಕರನ್ನು ಗುರುತಿಸಿ ಅವರನ್ನು ವ್ಯಸನದಿಂದ ಹೊರಬರುವಂತೆ ಜಾಗೃತಿ ಮಾಡಬೇಕು ಎಂದು ಶ್ರೀ ಜ.ಅ. ಶಿಕ್ಷಣ ಮಹಾವಿದ್ಯಾಲಯದ ಮೇಲ್ವಿಚಾರಣಾ ಸಮಿತಿಯ ಕಾರ್ಯಾಧ್ಯಕ್ಷ ಸಿ.ಎಸ್. ಅರಸನಾಳ ಹೇಳಿದರು.

ಇಲ್ಲಿಯ ಶ್ರೀ ಜ.ಅ.ವಿ. ಸಮಿತಿಯ ಶ್ರೀ ಜ.ಅ. ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಜರುಗಿದ ಯೋಜನೆಯ ಸಂಸ್ಥಾಪನಾ ದಿನಾಚರಣೆ ಮತ್ತು ವ್ಯಸನಮುಕ್ತ ಭಾರತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಟ್ಟ ಚಟಗಳ ದಾಸರಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳದೇ ಸೇವಾಮನೋಭಾವನೆ, ರಾಷ್ಟ್ರಭಕ್ತಿ, ಮಾನವೀಯತೆ ಮುಂತಾದ ವಿಷಯಗಳ ಅಳವಡಿಸಿಕೊಂಡು ಸಮಾಜಕ್ಕೆನಾದರೂ ಕೊಡುವ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ. ಎಸ್.ಕೆ. ಹೊಳೆಯಣ್ಣವರ ಮಾತನಾಡಿ, ವ್ಯಸನಕ್ಕೆ ನೂರೆಂಟು ದಾರಿಗಳಿವೆ. ಅನೇಕ ವ್ಯಸನಗಳು ಗೆಳೆಯರ ಸಹವಾಸದಿಂದ ಬಂದು ಆಕ್ರಮಿಸಿಬಿಡುತ್ತವೆ. ಯುವಕ-ಯುವತಿಯರು ಕೆಟ್ಟ ಚಟಗಳಿಗೆ ದಾಸರಾಗಿ ತಮ್ಮ ವ್ಯಕ್ತಿತ್ವವನ್ನೆ ಶೂನ್ಯ ಮಾಡಿಕೊಳ್ಳುತ್ತಿದ್ದಾರೆ. ವ್ಯಸನಗಳಿಗೆ ದಾಸರಾಗಿ ತಮ್ಮ ವ್ಯಕ್ತತ್ವವನ್ನು ಹಾಳುಮಾಡಿಕೊಳ್ಳುವುದಕ್ಕಿಂತ ಅಂತಹ ಚಟಗಳಿಂದ ದೂರ ಉಳಿಯುವುದು ಒಳ್ಳೆಯದು ಎಂದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಎಂ.ವಿ. ಕುಲಕರ್ಣಿ ಮಾತನಾಡಿದರು. ಪ್ರಶಿಕ್ಷಣಾರ್ಥಿ ಮೌಲನಬಿ ಕೊರ್ಲಹಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ. ಶ್ವೇತಾ ಬೆಲ್ಲದ, ಪ್ರೊ. ಆರ್.ಜಿ. ರೇಖಾ ಉಪಸ್ಥಿತರಿದ್ದರು.

ಸ್ವಯಂ ಸೇವಕ ದೇವೇಂದ್ರ ಖೇತಾವತ ಸ್ವಾಗತಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ರಾಜಶೇಖರ ಹುಲ್ಯಾಳ ಪ್ರಾಸ್ತಾವಿಸಿದರು. ಸ್ವಯಂ ಸೇವಕ ಗೋಣಿಸ್ವಾಮಿ ನಿರೂಪಿಸಿದರು. ಬಿಂದು ಹಕ್ಕಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೂತನ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಒತ್ತಾಯ
ಡಾ. ಐ.ಆರ್. ಭಟ್ಟರ ಮಾನವೀಯ ಗುಣ ಸ್ಮರಿಸಿದ ಒಡನಾಡಿಗಳು