ರೈತರಿಗೆ ನಿರಂತರ 8 ಗಂಟೆ ವಿದ್ಯುತ್ ಒದಗಿಸುವ ಸಂಕಲ್ಪ

KannadaprabhaNewsNetwork |  
Published : Jun 10, 2026, 03:00 AM IST
ಅಥಣಿ05 | Kannada Prabha

ಸಾರಾಂಶ

ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ರೈತರಿಗೆ ಹಗಲು ವೇಳೆ ನಿರಂತರ 8 ಗಂಟೆ ವಿದ್ಯುತ್ ಒದಗಿಸುವ ಸಂಕಲ್ಪ ಹೊಂದಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಜೊತೆಗೆ ರೈತರಿಗೆ ಹಗಲು ವೇಳೆ ನಿರಂತರ 8 ಗಂಟೆ ವಿದ್ಯುತ್ ಒದಗಿಸುವ ಸಂಕಲ್ಪ ಹೊಂದಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ₹21.52 ಕೋಟಿ ವೆಚ್ಚದ 110 ಕೆವಿ ವಿದ್ಯುತ್ ಘಟಕ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿದ್ಯುತ್ ವ್ಯವಸ್ಥೆಯ ಅಭಿವೃದ್ಧಿಯು ಪ್ರದೇಶದ ಸಮಗ್ರ ಪ್ರಗತಿಗೆ ಅತ್ಯಂತ ಅಗತ್ಯವಾಗಿದೆ. ರೈತರು, ಕೈಗಾರಿಕೆಗಳು ಹಾಗೂ ಸಾರ್ವಜನಿಕರಿಗೆ ಗುಣಮಟ್ಟದ ಮತ್ತು ನಿರಂತರ ವಿದ್ಯುತ್ ಪೂರೈಕೆ ಒದಗಿಸುವ ನಿಟ್ಟಿನಲ್ಲಿ ಅಥಣಿ ಮತಕ್ಷೇತ್ರದ ಸಮಗ್ರ ವಿದ್ಯುತ್ ಸಮಸ್ಯೆ ಪರಿಹರಿಸಲು ರೈತರಿಗೆ ಹಗಲು 8 ಗಂಟೆಗಳ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಕ್ಷೇತ್ರದಲ್ಲಿ 5 ನೂತನ ವಿದ್ಯುತ್ ಪ್ರಸರಣ ಘಟಕಗಳನ್ನು ಸ್ಥಾಪಿಸಿ ರೈತರ ವಿದ್ಯುತ್ ಸಮಸ್ಯೆ ಪರಿಸಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ ಸಂಪಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಮುಖಂಡರಾದ ಸದಾಶಿವ ಮುಗಳಖೋಡ, ಬಸಯ್ಯ ಅವರವಾಡ, ಆನಂದ ದೇಶಪಾಂಡೆ, ಅಶೋಕ ಕೌಜಲಗಿ, ರಾಮಣ್ಣ ಧರಿಗೌಡರ, ಮಲ್ಲು ಕುಳ್ಳೊಳ್ಳಿ, ಕಲ್ಲಪ್ಪ ಅಸ್ಕಿ, ದುಂಡಪ್ಪ ಗುಮಚಿ, ಅಧಿಕಾರಿಗಳಾದ ಸಂಜಯ ಗೊಣಜಾಲ, ಜಿ.ವಿ.ಸಂಪಣ್ಣವರ, ಎಸ್.ಎ.ಪಾರ್ಥನಹಳ್ಳಿ, ಅಶೋಕ ಸನಾಳ, ರಾಹುಲ್ ನಾಯಿಕ, ಮುತ್ತು ಮೊಕಾಸಿ, ಗುತ್ತಿಗೆದಾರ ಅಜಯ ದೇಶಪಾಂಡೆ, ಅನಿಲ ದೇಶಪಾಂಡೆ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಮತ್ತು ಗಣ್ಯರು ಉಪಸ್ಥಿತರಿದ್ದರು.ಆರೋಗ್ಯವಂತ ಬದುಕಿಗೆ ನಿತ್ಯ ಯೋಗ ರೂಢಿಸಿಕೊಳ್ಳಿ: ಶಾಸಕ ಲಕ್ಷ್ಮಣ

​ಅಥಣಿ: ಆರೋಗ್ಯವಂತ ಸಮಾಜವನ್ನು ಕಟ್ಟಲು ಪ್ರತಿನಿತ್ಯ ಯೋಗ ಮತ್ತು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಅಥಣಿ ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ಪತಂಜಲಿ ಯೋಗ ಸಮಿತಿಯಿಂದ ಆಯೋಜಿಸಲಾಗುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಾತಿ, ಮತ, ಪಂಥ, ಪಕ್ಷಭೇದ ಮರೆತು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು. ಅವರು ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ತಾಲೂಕ ಆಡಳಿತದಿಂದ ಹಮ್ಮಿಕೊಳ್ಳುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಗ ಮತ್ತು ಧ್ಯಾನ, ಪ್ರಾಣಾಯಾಮಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಜೂನ್ 21ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ತಾಲೂಕಿನಲ್ಲಿ ಆಚರಿಸಲಾಗುವ ಯೋಗ ದಿನಾಚರಣೆ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಜರುಗಬೇಕು. ಕಳೆದ ಬಾರಿ ನಾಲ್ಕು ಸಾವಿರ ಜನರ ಸಹಯೋಗದೊಂದಿಗೆ ಬೃಹತ್ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಂಡಿದ್ದೆವು. ಈ ವರ್ಷವೂ ಕೂಡ ಕಾರ್ಯಕ್ರಮಕ್ಕೆ ಅಗತ್ಯವಿರುವ ವೇದಿಕೆ ಸಿದ್ಧತೆ, ಧ್ವನಿವರ್ಧಕ, ಎಲ್ಇಡಿ ಸ್ಕ್ರೀನ್ ಅಳವಡಿಕೆ ವಿವಿಧ ರೀತಿಯ ಉಪಹಾರ ವ್ಯವಸ್ಥೆ ಚಹಾ ಪಾನೀಯ ಸಂಪೂರ್ಣ ಸಹಕಾರವನ್ನು ನಾನು ನೀಡುತ್ತೇನೆ. ಇನ್ನುಳಿದ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಯೋಗ ದಿನಾಚರಣೆಯ ಬಗ್ಗೆ ಯುವಜನತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳು,ತಾಲೂಕು ಪತ್ರಕರ್ತರ ಸಂಘ, ಶಿಕ್ಷಣ, ಕಂದಾಯ, ಪೊಲೀಸ್, ಸೇರಿದಂತೆ ತಾಲೂಕ ಆಡಳಿತದ ಎಲ್ಲ ಇಲಾಖೆಗಳು ಸಹಭಾಗಿತ್ವ ಜೊತೆಗೆ ಬ್ಯಾಂಕುಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಒತ್ತು ನೀಡಬೇಕು. ಕಾರ್ಯಕ್ರಮದ ಸುಗಮ ನಿರ್ವಹಣೆಗಾಗಿ ವಿವಿಧ ಸಮಿತಿಗಳನ್ನು ರಚಿಸಬೇಕು ಎಂದು ಸಲಹೆ ನೀಡಿದರು.ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ ಎಸ್.ಕೆ.ಹೊಳೆಪ್ಪನವರ ಮಾತನಾಡಿ, ಯೋಗ ದಿನಾಚರಣೆಯ ಅಂಗವಾಗಿ ತರಬೇತಿ ಶಿಬಿರಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಿತಿಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.ಈ ವೇಳೆ ಸುರೇಶ ಚಿಕ್ಕಟ್ಟಿ, ಸಂಜಯ ಕುಸ್ತಿಗಾರ, ಶಿವಾನಂದ ಬುರ್ಲಿ, ನಾಗೇಂದ್ರ ಭಟ್, ಶಂಕರ ಮಟ್ಟೆಪ್ಪನವರ ಮಾತನಾಡಿದರು. ಈ ಸಭೆಯಲ್ಲಿ ಯುವ ಪ್ರಭಾರಿ ಶ್ರೀಶೈಲ ಪಾಟೀಲ, ಡಾ.ವಿನಾಯಕ ಚಿಂಚೋಳಿಮಠ, ಸುರೇಶ ಚಿಕ್ಕಟ್ಟಿ, ರಾಮಣ್ಣ ಧರಿಗೌಡರ, ಎಸ್.ಎಸ್.ಗೊರಜನಾಳ, ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ, ವಿಕಾಸ ತಾಂಬಟ ಸೇರಿದಂತೆ ಅನೇಕ ಮುಖಂಡರು ಮತ್ತು ಪತಂಜಲಿ ಯೋಗಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಕ್ಷಿತಾ ವೇಣುಗೋಪಾಲ್‌ ರಂಗಪ್ರವೇಶ
ಬತ್ತಿದ್ದ ಸೋಮನಹಳ್ಳಿ, ಮರದೂರು ಕೆರೆಗಳಿಗೆ ಜೀವ ಕಳೆ