ಕನ್ನಡಪ್ರಭ ವಾರ್ತೆ ಲೋಕಾಪುರ
ಸಮೀಪದ ತಿಮ್ಮಾಪುರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ, ಎಂಪ್ಲಾಯಿಜ್ ಯೂನಿಯನ್ ಬೀಳಗಿ ಶುಗರ್ಸ್ ಮಿಲ್ ಯುನಿಟ್-೨ ಕಾರ್ಖಾನೆ ಪುನರಾರಂಭವಾದ ನಿಮಿತ್ತ ಶುಕ್ರವಾರ ಅಯೋಜಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಳ ದಿನಗಳ ರೈತರ ಹಾಗೂ ಕಾರ್ಮಿಕರ ಬೇಡಿಕೆಯಾಗಿದ್ದ ರನ್ನ ಕಾರ್ಖಾನೆಯ ಮರುಚಾಲನೆ ಕಾರ್ಯಗತಗೊಂಡಿರುವುದು ಅತ್ಯಂತ ಸಂತಸದ ವಿಷಯ. ಸಕ್ಕರೆ ನಾಡಿನ ರೈತರು ಹಾಗೂ ಕಾರ್ಮಿಕರ ಹಿತರಕ್ಷಣೆಗೆ ನಾವು ಸದಾ ಬದ್ಧರಾಗಿದ್ದೇವೆ ಎಂದು ಹೇಳಿದರು.ಮಾಜಿ ಸಚಿವ ಹಾಗೂ ಶಾಸಕ ಆರ್.ಬಿ. ತಿಮ್ಮಾಪುರ ಮಾತನಾಡಿ, ರೈತರ ಮತ್ತು ಕಾರ್ಖಾನೆಗೆ ಕಾರ್ಮಿಕರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಪರಿಶ್ರಮವನ್ನು ನೆನಪು ಮಾಡುವುದು ನಮ್ಮೆಲ್ಲರ ಕರ್ತವ್ಯ. ರೈತರ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಕಾರ್ಖಾನೆ ಪ್ರಾರಂಭಿಸುವುದು ನನ್ನ ಮೊದಲ ಆದ್ಯತೆ ಆಗಿತ್ತು. ನುಡಿದಂತೆ ನಡೆದು ಕಾರ್ಖಾನೆ ಪ್ರಾರಂಭ ಮಾಡೇ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಸ್ಮರಿಸಿದರು.
ಬಾಗಲಕೊಟೆ ಸಹಕಾರ ಸಂಘಗಳ ಉಪನಿಬಂಧಕ ದಾನಯ್ಯ ಹಿರೇಮಠ, ರೈತ ಮುಖಂಡರಾದ ವಿಠ್ಠಲ ತುಮ್ಮರಮಟ್ಟಿ, ವಕೀಲ ಯಲ್ಲಪ್ಪ ಹೆಗಡೆ ಕಾರ್ಖಾನೆ ಪುನರ್ ಪ್ರಾರಂಭಕ್ಕೆ ಹೋರಾಟ, ಅಹೋರಾತ್ರಿ ಧರಣಿ ಹಾಗೂ ಸ್ಥಗಿತಗೊಂಡ ಕಾರ್ಖಾನೆ ಮತ್ತೆ ಪುನತಾರಂಭದ ಸೇರಿ ಹಲವಾರು ವಿಷಯಗಳ ಕುರಿತು ಮಾತನಾಡಿದರು.ಎಸ್.ಆರ್.ಪಾಟೀಲ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಮಾಧವ ಜೋಶಿ ಮಾತನಾಡಿ, ಕಾರ್ಖಾನೆ ಪುನರಾರಂಭಕ್ಕೆ ತೊಂದರೆ, ಲೀಜ್ ಪಡೆದುಕೊಳ್ಳುವಾಗ ಆದ ಪರಿಶ್ರಮ, ನಡೆದು ಬಂದ ದಾರಿ ಎಸ್.ಆರ್.ಪಾಟೀಲ ಅವರ ಸಮಾಜದ ಮುಖಿ ಕಾರ್ಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಖಾನೆ ಆವರಣದಲ್ಲಿ ಪ್ರಕೃತಿ ಚಂದನವನ ಉದ್ಯಾನವನವನ್ನು ಗಣ್ಯರು ಉದ್ಘಾಟಿಸಿದರು.
ನಿಮ್ಮೆಲ್ಲರ ಸಹಾಯ, ಸಹಕಾರದಿಂದ ಈ ಕಾರ್ಖಾನೆ ೩೦ ವರ್ಷಗಳ ಕಾಲ ಸಹಕಾರಿ ಕ್ಷೇತ್ರದಲ್ಲಿ ಉಳಿಯಲಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರತಿದಿವಸ ೧೦ ಸಾವಿರ ಕ್ರಷಿಂಗ್ ಗುರಿ ಇಟ್ಟುಕೊಳ್ಳಲಾಗಿದೆ. ಇದಕ್ಕೆ ತಾಲೂಕಿನ ರೈತರು, ಕಬ್ಬು ಬೆಳೆಗಾರರು, ಕಾರ್ಖಾನೆ ಕಾರ್ಮಿಕರ, ಹೋರಾಟಗಾರರ ಸಹಕಾರ ಅಗತ್ಯ. ಕಾರ್ಮಿಕರ ಸಮಸ್ಯೆಗೆ ಶೀಘ್ರ ಸ್ಪಂದಿಸಿ ತಮಗೆ ಬೇಕಾದ ಸವಲತ್ತು ಒದಗಿಸಲು ಸದಾ ಸಿದ್ಧರಿದ್ದೇವೆ.
೬-ಎಲ್.ಕೆ.ಪಿ-೧ಎ : ಲೋಕಾಪುರ ಸಮೀಪ ತಿಮ್ಮಾಪುರ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಎಂಪ್ಲಾಯಿಜ್ ಯೂನಿಯನ್ ಬೀಳಗಿ ಶುಗರ್ಸ್ ಯುನಿಟ್-೨ ರ ಕಾರ್ಖಾನೆ ಪುನರಾರಂಭವಾದ ನಿಮಿತ್ತ ಅಭಿನಂದಾನ ಸಮಾರಂಭವನ್ನು ಎಸ್.ಆರ್. ಪಾಟೀಲ ಉದ್ಘಾಟಿಸಿದರು. ಈ ವೇಳೆ ಆರ್.ಬಿ.ತಿಮ್ಮಾಪುರ, ವಿಠ್ಠಲ ತುಮ್ಮರಮಟ್ಟಿ, ದಾನಯ್ಯ ಹಿರೇಮಠ, ಮುತ್ತಪ್ಪ ಕೋಮಾರ ಇನ್ನಿತರರು ಇದ್ದರು.