ಸಂಘಸಂಸ್ಥೆಗಳ ಸಮಾಜಮುಖಿ ಕಾರ್ಯಕ್ರಮ ಶ್ಲಾಘನೀಯ: ಬದನಗುಪ್ಪೆ ಬಿ.ಪಿ.ನಾಗರಾಜಮೂರ್ತಿ

KannadaprabhaNewsNetwork |  
Published : Aug 17, 2024, 12:52 AM IST
’ಸಂಘಸಂಸ್ಥೆಗಳ ಸಮಾಜಮುಖಿ ಕಾರ್ಯಕ್ರಮ ಶ್ಲಾಘನೀಯ- ಉಮೇಶ್ | Kannada Prabha

ಸಾರಾಂಶ

ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೭ ನೇ ಹುಟ್ಟುಹಬ್ಬ ಹಾಗೂ ೭೮ ನೇ ಸ್ವಾತಂತ್ರೋತ್ಸವದ ಅಂಗವಾಗಿ ಆತ್ಮತೃಪ್ತಿ ಟ್ರಸ್ಟ್ ಸಹಯೋಗದಲ್ಲಿ ಆರೋಗ್ಯ ತಪಾಸಣೆ, ಶಿಬಿರ, ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಮುತ್ತಿಗೆ ಗ್ರಾಮದಲ್ಲಿ ಸಂಭ್ರಮದ ೭೮ ನೇ ಸ್ವಾತಂತ್ರೋತ್ಸವ । ಉಚಿತ ಆರೋಗ್ಯ ಶಿಬಿರ, ಸಿಎಂ ೭೭ ನೇ ಹುಟ್ಟುಹಬ್ಬ ಆಚರಣೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಮುತ್ತಿಗೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೭ ನೇ ಹುಟ್ಟುಹಬ್ಬ ಹಾಗೂ ೭೮ ನೇ ಸ್ವಾತಂತ್ರೋತ್ಸವದ ಅಂಗವಾಗಿ ಆತ್ಮತೃಪ್ತಿ ಟ್ರಸ್ಟ್ ಸಹಯೋಗದಲ್ಲಿ ಆರೋಗ್ಯ ತಪಾಸಣೆ, ಶಿಬಿರ, ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ಶಾಲಾಮಕ್ಕಳಿಗೆ ಕಲಿಕಾಸಾಮಾಗ್ರಿಗಳ ವಿತರಣೆ, ಇದೇ ವೇಳೆ ಶಾಲೆಗೆ ಅಡುಗೆ ಪಾತ್ರೆ, ತಟ್ಟೆ, ಲೋಟ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿಅಧ್ಯಕ್ಷ, ಚಾಮರಾಜನಗರ ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ, ಸಂಘಸಂಸ್ಥೆಗಳು ಶಾಲಾವಿದಾರ್ಥಿಗಳಿಗೆ ಕಲಿಕಾಪರಿಕರವಿತರಣೆ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ತಪಾಸಣೆ ಹಮ್ಮಿಕೊಂಡಿರುವುದು ಶ್ಲಾಘನೀಯ, ಸಂಘಸಂಸ್ಥೆಗಳ ಸಮಾಜಮುಖಿ ಕಾರ್ಯಕ್ರಮಗಳು ಮುಂದಿನದಿನಗಳಲ್ಲಿ ಮುಂದುವರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಮುಖಂಡರಾದ ಬದನಗುಪ್ಪೆ ಬಿ.ಪಿ.ನಾಗರಾಜಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ೪೦ವರ್ಷದ ರಾಜಕಾರಣದಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೇ ರಾಜಕಾರಣ ಮಾಡಿಕೊಂಡುಬಂದಿದ್ದಾರೆ.

೨೦೧೩ರಿಂದ ೨೦೧೮ರವರಗೆ ಉತ್ತಮ ಜನಪರ ಆಡಳಿತ ನೀಡಿದ್ದಾರೆ. ಎರಡನೇ ಅವಧಿಯಲ್ಲೂ ಜನಪರ ಕಾರ್ಯಕ್ರಮ ನೀಡಿದ್ದಾರೆ. ಇವರ ರಾಜಕೀಯ ಏಳಿಗೆ ಸಹಿಸದ ವಿರೋಧಪಕ್ಷದವರು ಸಿದ್ದರಾಮಯ್ಯ ಅವರ ಕಾಲೆಳೆಯಲು ಮುಂದಾಗಿದ್ದಾರೆ. ಎಂದಿಗೂ ಅವರ ಪ್ರಯತ್ನಫಲಿಸುವುದಿಲ್ಲ ಎಂದರು.

ಆತ್ಮತೃಪ್ತಿ ಟಸ್ಟ್ ಕಾರ್ಯದರ್ಶಿ ಪ್ರಿಯದರ್ಶಿನಿ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ಹಲವಾರು ವರ್ಷಗಳಿಂದ ಆರೋಗ್ಯ ತಪಾಸಣೆ, ಶಿಬಿರ, ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ಸೇರಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ ಎಂದರು.

ಹೆಗ್ಗೋಠಾರ ಗ್ರಾಪಂ ಅಧ್ಯಕ್ಷೆ ಅಂಬಿಕಾ,. ಬದನಗುಪ್ಪೆ ಗ್ರಾಪಂ ಅಧ್ಯಕ್ಷ ಕುಮಾರ್, ಉಪಾಧ್ಯಕ್ಷೆ ಗೌರಮ್ಮ, ಎಪಿಎಂಸಿ ಸದಸ್ಯ ಗುರುಸ್ವಾಮಿ, ಗ್ರಾ,ಪಂ ಸದಸ್ಯರಾದ ನಾಗನಾಯಕ, ರಮೇಶ್, ಕುಮಾರ್, ಸುರೇಶ್,ಡಾ,ರೇಣುಕಾದೇವಿ, ಚಾಮರಾಜನಗರ ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಮಹದೇವಸ್ವಾಮಿ,, ಮುಖಂಡರಾದ ಚಿನ್ನಸ್ವಾಮಿ, ಮಂಜು, ಮುತ್ತಿಗೆ ದೂರೆ, ವೀರತ್ತೇಗೌಡ, ಮಹಾಲಿಂಗೇಗೌಡ, ಮಂಜಣ್ಣ, ಹಳೇಪುರಮಂಜು, ಡಾ,ಪ್ರವೀಣ್, ಮಹೇಶ್‌ಗೌಡ, ಶಿವಕುಮಾರ್, ಗ್ರಾಮಸ್ಥರು ಹಾಜರಿದ್ದರು. 16ಸಿಎಚ್‌ಎನ್17

ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. 16ಸಿಎಚ್‌ಎನ್16

ಚಾಮರಾಜನಗರ ತಾಲೂಕಿನ ಮುತ್ತಿಗೆ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಕಲಿಕಾ ಸಾಮಾಗ್ರಿಗಳ ವಿತರಣೆ ನಡೆಯಿತು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ