ಗದಗ: ಸರ್ಕಾರಿ ಶಾಲೆಗಳು ಸಬಲೀಕರಣವಾಗಲು ಸಮುದಾಯದ ಸಹಭಾಗಿತ್ವ ಅವಶ್ಯ. ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಪ್ರಗತಿಗೆ ಕೈ ಜೋಡಿಸಬೇಕು ಎಂದು ಹಿರಿಯ ತೆರಿಗೆ ಸಲಹೆಗಾರ ಮುಕುಂದ ಪೋತ್ನೀಸ್ ಹೇಳಿದರು.
ದಾನಿಗಳು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ಶಿಕ್ಷಕರೊಂದಿಗೆ ಮುಂದೆ ಹೆಜ್ಜೆ ಇಡಬೇಕು. ಗದುಗಿನ ಎಂ.ಜಿ. ಕವಾಡ ಎಜ್ಯುಕೇಶನ್ ಟ್ರಸ್ಟ್ ಮುಲ್ತಾನಮಲಜಿ ಗುಮಾನಮಲಜಿ ಕವಾಡ ನೆನಪಿನಲ್ಲಿ ಈ ಕಾರ್ಯಕ್ಕೆ ಮುಂದಾಗಿದ್ದು ಅಭಿನಂದನೀಯ ಎಂದರು.
ದಾನಿಗಳಾದ ಜಯಂತಿಲಾಲ್ ಕವಾಡ ಮಾತನಾಡಿ, ಶತಮಾನೋತ್ಸವ ಶಾಲೆಗಳು ನಮ್ಮೆಲ್ಲರ ಹೆಮ್ಮೆ. ಗದುಗಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲೆ ಹಾಗೂ ಗಂಡು ಮಕ್ಕಳ ಶಾಲೆ ನಂ. 1 ಹಾಗೂ ಶಾಲೆ ನಂ. 11ರ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ನಮ್ಮ ಕುಟುಂಬದಿಂದ ಸ್ಕೂಲ್ ಬ್ಯಾಗ್ ವಿತರಿಸಿದ್ದು, ಅವುಗಳು ಸದುಪಯೋಗ ಆಗಬೇಕು ಎಂದರು.ಗದಗ ಶಹರ ಬಿಇಒ ಜಿ.ಎಂ. ಮುಂದಿನಮನಿ, ಸಮನ್ವಯ ಅಧಿಕಾರಿ ಎಸ್.ಪಿ. ಪ್ರಭಯ್ಯನಮಠ, ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪೂರ, ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ, ಹೇಮಾದೇವಿ ಕವಾಡ ಹಾಗೂ ಪ್ರಥ್ವಿರಾಜ್ ಬಾಫಣಾ, ಬಾವೇಶ, ಪ್ರಿಯಲ್ ಕವಾಡ, ಶೈಲೇಶ್ ಬಾಗಮಾರ, ಪರವೀನ್ ಸಂಕಲೇಚಾ, ಮೋಹಿತ್, ಅಕ್ಷತಾ ಕವಾಡ ಉಪಸ್ಥಿತರಿದ್ದರು.
ಶಿಕ್ಷಕಿ ಸುನಂದಾ ಕುಂಟೋಜಿ ವಂದಿಸಿದರು.