ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಅವರೇಗುಂದ ಬಸವನಹಳ್ಳಿ ನಿವಾಸಿ ಕೃಷಿಕ ಸುಳ್ಯ ಕೋಡಿ ಚಿಣ್ಣಪ್ಪ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ನೀಡುವ ಪರಿಹಾರ 10 ಲಕ್ಷ ರು. ಅನ್ನು ಶಾಸಕ ಪೊನ್ನಣ್ಣ ನೀಡಿದರು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಇತ್ತೀಚೆಗೆ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದ ಅವರೇಗುಂದ ಬಸವನಹಳ್ಳಿ ನಿವಾಸಿ ಕೃಷಿಕ ಸುಳ್ಯ ಕೋಡಿ ಚಿಣ್ಣಪ್ಪ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ನೀಡುವ ಪರಿಹಾರ 10 ಲಕ್ಷ ರು. ವನ್ನು ಶಾಸಕ ಪೊನ್ನಣ್ಣ ಅವರು ನೀಡಿದರು.
ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ತುರ್ತು ಪರಿಹಾರವಾಗಿ 5 ಲಕ್ಷ ರು. ವನ್ನು ನೀಡಿದ್ದು ಒಟ್ಟು 15 ಲಕ್ಷ ನೀಡಲಾಗಿದೆ ಎಂದು ಪೊನ್ನಣ್ಣ ಮಾಹಿತಿ ನೀಡಿದರು.
ಇದೇ ಸಂದರ್ಭ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ, ಕಾಂಗ್ರೆಸ್ ವಲಯ ಅಧ್ಯಕ್ಷ ಎಸ್ ಬಿ ಪ್ರತೀಶ್ ಇದ್ದರು.
-------------------------------------------
ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಿ.ಆರ್.ಸದಾಶಿವ ರೈ
ಮಡಿಕೇರಿ : ಮಡಿಕೇರಿ ತಾಲೂಕು ಬಂಟರ ಸಂಘದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಬಿ.ಆರ್.ಸದಾಶಿವ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ್ ರೈ ಕತ್ತಲೆಕಾಡು, ಖಜಾಂಚಿಯಾಗಿ ಬಿ.ಕೆ.ದಿನೇಶ್ ರೈ, ಗೌರವಾಧ್ಯಕ್ಷರಾಗಿ ರಮೇಶ್ ರೈ, ಉಪಾಧ್ಯಕ್ಷರಾಗಿ ಬಿ.ಕೆ.ವಿಠಲ್ ರೈ, ಗಿರೀಶ್ ರೈ ಮೂರ್ನಾಡು, ಸಹ ಖಜಾಂಚಿಯಾಗಿ ಬಿ.ಕೆ.ಸುರೇಶ್ ರೈ, ಸಹ ಕಾರ್ಯದರ್ಶಿಯಾಗಿ ವಿದ್ಯಾಧರ ರೈ ಗಾಳಿಬೀಡು ಹಾಗೂ ಗೌರವ ಸಲಹೆಗಾರರಾಗಿ ಬಿ.ಸಿ.ಹರೀಶ್ ರೈ ಆಯ್ಕೆಯಾದರು.
ತಾಲೂಕು ಸಂಘದ ನಿರ್ಗಮಿತ ಅಧ್ಯಕ್ಷ ರಮೇಶ್ ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.