ಬೆಳೆ ನಷ್ಟಕ್ಕೆ ಎಕರೆಗೆ ₹25 ಸಾವಿರ ಪರಿಹಾರ ನೀಡಲೇಬೇಕು: ತೇಲ್ಕೂರ್

KannadaprabhaNewsNetwork |  
Published : Sep 29, 2026, 01:30 AM IST
ಫೋಟೋ- ತೇಲ್ಕೂರ್‌ ಸೇಡಂ | Kannada Prabha

ಸಾರಾಂಶ

ವಿಶೇಷ ಅಧಿವೇಶನದ ಹೆಸರಿನಲ್ಲಿ ರೈತರ ಭಾವನೆಗಳ ಜೊತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡಿದೆ. ತಿಪ್ಪೆ ಸಾರಿಸಿದಂತೆ ₹2,500 ಪರಿಹಾರ ಘೋಷಿಸಿ ಅನ್ನದಾತನನ್ನು ಭಿಕ್ಷುಕನಂತೆ ಕಾಣುವ ಹೀನ ಕೆಲಸ ಮಾಡಿದೆ ಎಂದು ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ: ವಿಶೇಷ ಅಧಿವೇಶನದ ಹೆಸರಿನಲ್ಲಿ ರೈತರ ಭಾವನೆಗಳ ಜೊತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟವಾಡಿದೆ. ತಿಪ್ಪೆ ಸಾರಿಸಿದಂತೆ ₹2,500 ಪರಿಹಾರ ಘೋಷಿಸಿ ಅನ್ನದಾತನನ್ನು ಭಿಕ್ಷುಕನಂತೆ ಕಾಣುವ ಹೀನ ಕೆಲಸ ಮಾಡಿದೆ ಎಂದು ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರೈತರ ಸಂಕಷ್ಟಕ್ಕೆ ಸ್ಪಂದಿಸಿ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ಪರಿಹಾರ ಅಥವಾ ಬೆಳೆ ಸಾಲ ಮನ್ನಾ ಘೋಷಣೆಯಾಗುತ್ತದೆ ಎಂದು ರಾಜ್ಯದ ರೈತ ಸಮುದಾಯ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಕೇವಲ ₹2,500 ಪರಿಹಾರ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ರೈತರ ನಿರೀಕ್ಷೆಗೆ ತಣ್ಣೀರು ಎರಚಿದೆ. ಇದು ಪರಿಹಾರವಲ್ಲ, ರೈತರ ಸ್ವಾಭಿಮಾನಕ್ಕೆ ಮಾಡಿದ ಅಪಮಾನ ಎಂದು ಅಸಮಾದಾನ ಹೊರಹಾಕಿದ್ದಾರೆ.

ಎನ್‌ಡಿಆರ್‌ಎಫ್ ಮಾರ್ಗಸೂಚಿಯ ಪ್ರಕಾರವೇ ಬರ ಪರಿಹಾರ ಎಕರೆಗೆ ಕನಿಷ್ಠ ₹8,000 ನೀಡಬೇಕಾಗುತ್ತದೆ. ಕೋವಿಡ್ ಸಾಂಕ್ರಾಮಿಕ, ಯುದ್ಧದಂತಹ ತುರ್ತು ಪರಿಸ್ಥಿತಿ ಇಲ್ಲದಿದ್ದರೂ ಬೊಕ್ಕಸ ಖಾಲಿ ನೆಪ ಹೇಳುತ್ತಿರುವುದು ಹಾಸ್ಯಾಸ್ಪದ. ರೈತ ಸಂಕಷ್ಟದಲ್ಲಿ ಇರುವಾಗ ಅವರ ಕೈ ಹಿಡಿಯಬೇಕಾದ ಸರ್ಕಾರ, ಕೈಗೆ ಚೊಂಬು ನೀಡಿದೆ. ರೈತರು ಪರಿಹಾರಕ್ಕಾಗಿ ಭಿಕ್ಷೆ ಬೇಡುತ್ತಿಲ್ಲ, ತಮ್ಮ ಹಕ್ಕನ್ನು ಕೇಳುತ್ತಿದ್ದಾರೆಂದು ತೇಲ್ಕೂರ್ ಹೇಳಿದ್ದಾರೆ.

ಬೇರೆ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಮುಂದೂಡಿ, ಆ ಹಣವನ್ನು ರೈತರಿಗೆ ಎಕರೆಗೆ ₹25,000 ಪರಿಹಾರವಾಗಿ ನೀಡಬೇಕು. ಇಲ್ಲದಿದ್ದರೆ ಈ ಜನವಿರೋಧಿ ನಡೆಯನ್ನು ನಾವು ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತೇವೆ. ರೈತರಿಗೆ ದ್ರೋಹ ಬಗೆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 25 ಸ್ಥಾನಗಳು ಕೂಡ ಉಳಿಯುವುದಿಲ್ಲ. ಈಗಾಗಲೇ ಆಡಳಿತ ಪಕ್ಷದ ಶಾಸಕರೇ ಬಂಡಾಯ ಎದ್ದಿದ್ದಾರೆ. ರೈತರ ಪರ ನಿಲ್ಲಲು ಇದು ಸಿಎಂಗೆ ಇರುವ ಕೊನೆಯ ಅವಕಾಶ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದೂ ಪರ ಸಂಘಟನೆಗಳ ಬೆಂಬಲದೊಂದಿಗೆ ಗಣೇಶ ಮೂರ್ತಿಗಳ ವಿಸರ್ಜನೆ
ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ