ಭಟ್ಕಳ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಜ್ ಲೀಡ್ ಎಕ್ಸ್ ಕಾರ್ಯಕ್ರಮ
ಪಟ್ಟಣದ ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿಬಿಎ ವಿಭಾಗವು ಆಯೋಜಿಸಿದ ಬಿಜ್ ಲೀಡ್ ಎಕ್ಸ್ ೨೦೨೫-೨೬ ಕಾರ್ಯಕ್ರಮದ ಗ್ರ‍್ಯಾಂಡ್ ಫಿನಾಲೆಯು ಸಂಭ್ರಮದಿಂದ ನಡೆಯಿತು.
ಬಿಬಿಎ ವಿದ್ಯಾರ್ಥಿಗಳ ಕೌಶಲ್ಯ, ನಾಯಕತ್ವ ಮತ್ತು ವ್ಯವಹಾರ ತಂತ್ರಜ್ಞಾನವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ಆರಂಭದಿಂದಲೂ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟೂ ೪೪ ವಿದ್ಯಾರ್ಥಿಗಳಿದ್ದ ಈ ವಿಶೇಷ ಸ್ಪರ್ಧೆಯಲ್ಲಿ, ೬ ವಿವಿಧ ಸುತ್ತುಗಳ ಮೂಲಕ ನಡೆದು, ಉತ್ತಮ ಸಾಧನೆ ಮಾಡಿದ ೮ ವಿದ್ಯಾರ್ಥಿಗಳು ಗ್ರ‍್ಯಾಂಡ್ ಫಿನಾಲೆಗೆ ಆಯ್ಕೆಯಾಗಿ ಪಾಲ್ಗೊಂಡಿದ್ದರು.ಕುಮಟಾದ ನಿರ್ಮಲಾ ಪಿಯು ಕಾಲೇಜಿನ ಇಂಗ್ಲಿಷ್ ಉಪನ್ಯಾಸಕಿ ಜೇನ್ ರೋಡ್ರಿಗಿಸ್ ಮತ್ತು ಬೆಂಗಳೂರಿನ ಸ್ಟ್ರೀಟ್ ಸ್ಟೇಟ್ ಗ್ಲೋಬಲ್ ಅಡ್ವೆಂಚರ್ಸ್ ಕಂಪೆನಿಯ ಪ್ರಾಜೆಕ್ಟ್ ಮ್ಯಾನೇಜರ್ ನಂದೀಶ್ ಶೆಟ್ಟಿ ಅವರು ಜ್ಯೂರಿ ಸದಸ್ಯರಾಗಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರಸ್ತುತಿಯನ್ನು ಮೌಲ್ಯಮಾಪನ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೇನ್ ರೋಡ್ರಿಗಿಸ್ ಮಾತನಾಡಿ, ಈ ರೀತಿಯ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ, ತಂಡ ಕಾರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ಅತಿ ಅವಶ್ಯಕ ಎಂದರು.ನಂದೀಶ್ ಶೆಟ್ಟಿ ಮಾತನಾಡಿದರು. ಬಿಬಿಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ, ಪ್ರಾಂಶುಪಾಲ ಶ್ರೀನಾಥ ಪೈ, ಸಂಯೋಜಕಿ ಬಿಬಿಎ ವಿಭಾಗದ ಉಪನ್ಯಾಸಕಿ ಐಶ್ವರ್ಯಾ ಐಗೋಡ್ ಉಪಸ್ಥಿತರಿದ್ದರು. ಬಿಜ್ ಲೀಡ್ ಎಕ್ಸ್ ೨೦೨೫-೨೬ರ ವಿಜೇತರಾಗಿ ಸತ್ಯೇಶ ಕಾಮತ್, ಪ್ರಥಮ ರನ್ನರ್ ಅಪ್ ಆಗಿ ಶ್ರೀನಿಧಿ ಶೆಟ್ಟಿ ಹಾಗೂ ದ್ವಿತೀಯ ರನ್ಸರ್ ಅಪ್ ಆಗಿ ಶ್ರಿಯಾ ಪುರಾಣಿಕ್ ಅಯ್ಕೆಯಾದರು. ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.