ಅಂಕ ಶಿಕ್ಷಣಕ್ಕಿಂತ ಸ್ಪರ್ಧಾತ್ಮಕ ಶಿಕ್ಷಣ ಅಗತ್ಯ

KannadaprabhaNewsNetwork |  
Published : Apr 05, 2025, 12:47 AM IST
ಸುದ್ದಿ ಚಿತ್ರ  ೧    ನಗರದ  ಡಾಲ್ಫಿನ್ಸ್  ಪದವಿ  ಪೂರ್ವ  ಕಾಲೇಜಿನಲ್ಲಿ ನೀಟ್ ಮತ್ತು ಸಿಇಟಿ ತರಬೇತಿ ಕೇಂದ್ರವಾದ   ಡಾಲ್ಫಿನ್ಸ್ ಎಡುಸೈನ್ಸ್ ಅಕಾಡೆಮಿ ಯನ್ನು ಉದ್ಘಾಟಿಸಿದ ಗಣ್ಯರು | Kannada Prabha

ಸಾರಾಂಶ

18 ವರ್ಷ ತುಂಬುವ ಮೊದಲೇ ವಿವಾಹ ಮಾಡುವುದು ಮತ್ತು ಓದುವ ಮಕ್ಕಳನ್ನು ಅಪಾಯಕಾರಿ ಕೆಲಸಗಳಿಗೆ ನೇಮಕ ಮಾಡಿಕೊಳ್ಳುವುದಕ್ಕಿಂತ ಬೇರೆ ಪಾಪದ ಕೆಲಸ ಮತ್ತೊಂದಿಲ್ಲ. ಈ ರೀತಿಯ ಪ್ರಯತ್ನಗಳು ನಡೆದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರುವ ಮೂಲಕ ಅವುಗಳಿಗೆ ಕಡಿವಾಣ ಹಾಕಿ ಸ್ವಸ್ಥ ಸಮಾಜವನ್ನು ನಿರ್ಮಿಸಲು ಪೋಷಕರು ಕೈಜೋಡಿಸಲಿ

ಕನ್ನಡ ಪ್ರಭ ವಾರ್ತೆ ಶಿಡ್ಲಘಟ್ಟ

ಅಂಕ ಕೇಂದ್ರಿತ ಶಿಕ್ಷಣ ನೀಡುವುದಕ್ಕಿಂತ ಸ್ಪರ್ಧಾ ಕೇಂದ್ರಿತ ಶಿಕ್ಷಣ ನೀಡುವುದು ಇಂದಿನ ಶಿಕ್ಷಣದ ಧ್ಯೇಯವಾಗಬೇಕು. ಅಂಕ ಪಡೆದವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆಲ್ಲುವಲ್ಲಿ ವಿಫಲರಾಗುತ್ತಿದ್ದಾರೆ. ಈ ವೈಫಲ್ಯವನ್ನು ಮೆಟ್ಟಿ ನಿಲ್ಲುವಂತಹ ಸಮರ್ಥ ಶಿಕ್ಷಣ ನೀಡುವುದು ಶಿಕ್ಷಣ ಕೇಂದ್ರಗಳ ಆದ್ಯತೆಯಾಗಬೇಕು ಎಂದು ತಹಸೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.

ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಮತ್ತು ಸಿಇಟಿ ತರಬೇತಿ ಕೇಂದ್ರವಾದ ’ಡಾಲ್ಫಿನ್ಸ್ ಎಡುಸೈನ್ಸ್ ಅಕಾಡೆಮಿ’ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸತತ ಪರಿಶ್ರಮ, ಏಕಾಗ್ರತೆ ಮತ್ತು ಸೂಕ್ತ ಗುರುವಿನ ಮಾರ್ಗದರ್ಶನದಿಂದ ಮಾತ್ರ ನೀಟ್, ಸಿಇಟಿ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು. ಬಾಲ ಕಾರ್ಮಿಕತೆ ಪಾಪ

18 ವರ್ಷ ತುಂಬುವ ಮೊದಲೇ ವಿವಾಹ ಮಾಡುವುದು ಮತ್ತು ಓದುವ ಮಕ್ಕಳನ್ನು ಅಪಾಯಕಾರಿ ಕೆಲಸಗಳಿಗೆ ನೇಮಕ ಮಾಡಿಕೊಳ್ಳುವುದಕ್ಕಿಂತ ಬೇರೆ ಪಾಪದ ಕೆಲಸ ಮತ್ತೊಂದಿಲ್ಲ. ಈ ರೀತಿಯ ಪ್ರಯತ್ನಗಳು ನಡೆದಲ್ಲಿ ಕೂಡಲೇ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತರುವ ಮೂಲಕ ಅವುಗಳಿಗೆ ಕಡಿವಾಣ ಹಾಕಿ ಸ್ವಸ್ಥ ಸಮಾಜವನ್ನು ನಿರ್ಮಿಸಲು ಪೋಷಕರು ಮತ್ತು ಸಾರ್ವಜನಿಕರು ಇಲಾಖೆಗಳ ಜೊತೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು. ಅಧಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್ ಅಶೋಕ್ ಮಾತನಾಡಿ, ಶ್ರಮ ಪಡದ ಯಾರೊಬ್ಬರೂ ಯಶಸ್ವಿ ಯಾಗಲ್ಲ . ಶ್ರಮ ಮತ್ತು ತಾಳ್ಮೆಯಿದ್ದಲ್ಲಿ ಅಗಾಧವಾದುದನ್ನು ಸಾಧಿಸಬಹುದು ಎಂಬುದಕ್ಕೆ ಒಬ್ಬ ಅವಿದ್ಯಾವಂತ ವ್ಯಕ್ತಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಂತಹ ಡಾಲ್ಫಿನ್ಸ್ ಸಂಸ್ಥೆಯನ್ನು ಹುಟ್ಟುಹಾಕಿರುವುದು ನಿದರ್ಶನ ಎಂದರು.

ಸ್ಥಳೀಯವಾಗಿ ತರಬೇತಿ

ಇನ್ನು ಮುಂದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವೈದ್ಯರು ಮತ್ತು ಇಂಜಿನಿಯರ್ ಗಳಾಗಲು ತರಬೇತಿಗಾಗಿ ನಗರಗಳೆಡೆಗೆ ಹೋಗಬೇಕಿಲ್ಲ. ನಗರಗಳಿಂದ ಅನುಭವಿ ಉಪನ್ಯಾಸಕರುಗಳನ್ನು ನೇಮಿಸಿಕೊಂಡು ಗ್ರಾಮೀಣ ವಿದ್ಯಾರ್ಥಿಗಳು ಇದ್ದೆಡೆಯಲ್ಲಿಯೇ ತರಬೇತಿ ಪಡೆಯುವ ಅವಕಾಶವನ್ನು ಹುಟ್ಟುಹಾಕಲಾಗಿದೆ ಎಂದರು. ಜ್ಞಾನ ನಂದಬಾರದು

ಪ್ರಾಂಶುಪಾಲ ಡಾ ಎನ್. ಶ್ರೀನಿವಾಸಮೂರ್ತಿ ಮಾತನಾಡಿ, ಹಚ್ಚಿಟ್ಟ ಹಣತೆ ಮತ್ತು ಪಡೆದ ಜ್ಞಾನ ಎಂದಿಗೂ ನಂದಬಾರದು. ಈ ಎರಡೂ ಸಮಾಜವನ್ನು ಸರಿ ದಾರಿಯಲ್ಲಿ ನಡೆಸುವ ಅದ್ಭುತ ಶಕ್ತಿಗಳು ಎಂದರು. ಈ ಸಂದರ್ಭದಲ್ಲಿ ಉಪನ್ಯಾಸಕರುಗಳಾದ ಡಾ ಸುದರ್ಶನ್, ಮುನಿಕೃಷ್ಣಪ್ಪ, ಆರೀಫ್ ಅಹಮದ್, ಪ್ರೊ. ನಾಗೇಶ್, ಸಂತೋಷ್ ರೆಡ್ಡಿ, ಗಜೇಂದ್ರ, ಜಾನಕಿ ರಾಮ್, ನಾಗೇಶಯ್ಯ, ಖದೀರ್ ಅಹಮದ್, ವಿನಯ್ ಕುಮಾರ್, ಸಂಪತ್ ಕುಮಾರ್ , ಪ್ರವೀಣ್ ಕುಮಾರ್ ಸೇರಿದಂತೆ ಕಚೇರಿ ಅಧೀಕ್ಷಕ ನಾಗೇಶ್, ಆಶಾ, ರಮ್ಯ, ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಶೃತಿ ಪ್ರಾರ್ಥಿಸಿದರು. ಪ್ರೊ ಮಂಜುನಾಥ್ ಎನ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೃಢ ಸಂಕಲ್ಪ, ಅಚಲ ವಿಶ್ವಾಸದಿಂದ ಯಶಸ್ಸು ಸಾಧ್ಯ
ಧಾರ್ಮಿಕ, ಪ್ರಾಚೀನ ಮಾಹಿತಿಯುಳ್ಳ ಕ್ಯಾಲೆಂಡರ್ ಬಿಡುಗಡೆ