ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಸಭಾಂ ಗಣದಲ್ಲಿ ಭಾನುವಾರ ಸೇಡಂನ ಸಂಸ್ಕೃತಿ ಪ್ರಕಾಶನ ಆಯೋಜಿಸಿದ್ದ ಸಮಾರಂಭದಲ್ಲಿ ಡಾ. ಅಂಬುಜಾ ಮಳಖೇಡಕರ್ ರಚಿಸಿದ ಐದು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ, ಅವರು ಮಾತನಾಡಿದರು.
ಕೇವಲ ಪದಗಳ ಜೋಡಣೆ ಕಾವ್ಯ ವಾಗಲಾರದು. ಬದಲಿಗೆ ಧ್ವನಿಪೂರ್ಣವಾದ ಮಾತುಗಳೇ ಕಾವ್ಯವಾಗುತ್ತದೆ. ಡಾ.ಅಂಬುಜಾ ಅವರ ಎಲ್ಲ ಕವನಗಳಲ್ಲಿ ಈ ರೀತಿಯ ಸಾಲುಗಳು ಹೇರಳವಾಗಿವೆ ಎಂದರು.ಡಾ.ಅಂಬುಜಾ ಮಳಖೇಡಕರ್ ರಚಿಸಿದ ‘ಗೊಂಬೆಯ ಜೀವನ’ ಕೃತಿಯನ್ನು ಕನ್ನಡ ಉಪನ್ಯಾಸಕಿ ಡಾ.ವಿದ್ಯಾವತಿ ಪಾಟೀಲ ಪರಿಚಯಿಸಿದರು.
ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ರಾಜೇಂದ್ರ ಬಿ.ಕೊಂಡ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕಗಳನ್ನು ಪ್ರಕಟಿಸಿದ ಸೇಡಂನ ಸಂಸ್ಕೃತಿ ಪ್ರಕಾಶನದ ಸಂಚಾಲಕ ಪ್ರಭಾಕರ ಜೋಶಿ ಮಾತನಾಡಿ, ತಾಲೂಕು ಕೇಂದ್ರವೊಂದರಲ್ಲಿದ್ದುಕೊಂಡು ನೂರಾರು ಕೃತಿಗಳನ್ನು ಪ್ರಕಟಿಸುವ ಮೂಲಕ ಹಲವಾರು ಯುವ ಲೇಖಕರಿಗೆ ವೇದಿಕೆಯನ್ನು ಒದಗಿಸಿದೆ ಎಂದರು.