ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ದೂರು

KannadaprabhaNewsNetwork |  
Published : Jan 17, 2024, 01:48 AM IST
ಫೋಟೋ: 16ಜಿಎಲ್ಡಿ1- ಗುಳೇದಗುಡ್ಡದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಸಂಸದ ಅನಂತಕುಮಾರ ಹೆಗಡೆ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ಸಲ್ಲಿಸಿದರು.  | Kannada Prabha

ಸಾರಾಂಶ

ಗುಳೇದಗುಡ್ಡ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್‌ ಹೆಗಡೆ ಮುಖ್ಯಮಂತ್ರಿಗಳಿಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಮಂಗಳವಾರ ಇಲ್ಲಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದರು. ಕಾಂಗ್ರೆಸ್‌ ಕಾರ್ಯಕರ್ತರು ಅನಂತಕುಮಾರ್‌ ಹೆಗಡೆ ದೇಶದ್ರೋಹಿ ಮುಂತಾದ ಘೋಷಣೆಗಳನ್ನು ಕೂಗಿ, ಸಿದ್ದರಾಮಯ್ಯನವರಿಗೆ, ರಾಹುಲ್ ಗಾಂಧಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡ

ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್‌ ಹೆಗಡೆ ಮುಖ್ಯಮಂತ್ರಿಗಳಿಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಮಂಗಳವಾರ ಇಲ್ಲಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಅನಂತಕುಮಾರ್‌ ಹೆಗಡೆ ದೇಶದ್ರೋಹಿ ಮುಂತಾದ ಘೋಷಣೆಗಳನ್ನು ಕೂಗಿ, ಸಿದ್ದರಾಮಯ್ಯನವರಿಗೆ, ರಾಹುಲ್ ಗಾಂಧಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.

ದೂರಿನಲ್ಲಿ ಏನಿದೆ?: ಸಂಸದ ಅನಂತಕುಮಾರ್ ಬಾಬರಿ ಮಸೀದಿ ರೀತಿ ಚಿನ್ನದ ಪಳ್ಳಿ ಮಸೀದಿಯನ್ನೂ ಒಡೆದು ಹಾಕುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಇಂತಹ ಪ್ರಚೋದನಕಾರಿ ಹೇಳಿಕೆಯಿಂದ ಸಾಮಾಜಿಕ ಸಾಮರಸ್ಯ ಧಕ್ಕೆ ಬರುವ ಸಾಧ್ಯತೆ ಇದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯದ ಮುಖ್ಯಮಂತ್ರಿಗೆ ಏಕವಚನದಲ್ಲಿ ಅಸಂವಿಧಾನಾತ್ಮಕ ಪದ ಬಳಸಿರುವುದು ಕಾನೂನುಬಾಹಿರ. ಧಾರ್ಮಿಕ ವಿರೋಧಿ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ ಸಂಸದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಬ್ಲಾಕ್ ಅಧ್ಯಕ್ಷ ಸಂಜಯ ಬರಗುಂಡಿ ಮನವಿ ಸಲ್ಲಿಸಿದರು. ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ರಾಜು ಹೆಬ್ಬಳ್ಳಿ, ಮುಖಂಡರಾದ ರಾಜು ತಾಪಡಿಯಾ, ವೈ.ಆರ್.ಹೆಬ್ಬಳ್ಳಿ, ಲೆಂಕೆಪ್ಪ ಹಿರೇಕುರುಬರ್, ರಮೇಶ ಬೂದಿಹಾಳ, ಜಮೀರ್‌ ಮೌಲ್ವಿ, ಗೋಪಾಲ ಜಾಧವ, ಸಲೀಂ ಮೋಮಿನ್, ಬಿ.ಎಂ.ಸಂಕನೂರ, ನಾಗೇಶ ಪಾಗಿ, ವಿಠ್ಠಲ ಕಾವಡೆ, ಎಚ್.ಕೆ.ಪತ್ತಾರ, ಡಾ.ನಾಗರಾಜ ಹಳ್ಳಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ