ಕನ್ನಡಪ್ರಭ ವಾರ್ತೆ ಬಾಗಲಕೋಟೆ
103 ಅಂಕಗಳನ್ನು ಗಳಿಸಿದ ಬೆಂಗಳೂರು ತಂಡ ದ್ವಿತೀಯ ಸ್ಥಾನ ಹಾಗೂ 64 ಅಂಕಗಳನ್ನು ಪಡೆದ ಮಂಡ್ಯ ಜಿಲ್ಲೆ ಕ್ರೀಡಾಪಟುಗಳು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಅತಿಥೆಯ ಬಾಗಲಕೋಟೆ ತಂಡ 29 ಅಂಕಗಳನ್ನು ಗಳಿಸುವ ಮೂಲಕ 7ನೇ ಸ್ಥಾನ ಪಡೆಯಿತು.
ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟದ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ ಕಿವುಡರ ಸಂಘ ಸೆ.27ರಿಂದ ಮೂರು ದಿನಗಳ ಕಾಲ ಕ್ರೀಡಾಕೂಟ ಆಯೋಜಿಸಲಾಗಿತ್ತು. 12 ವರ್ಷದಿಂದ 18 ವರ್ಷ ಮೇಲ್ಪಟ್ಟ 126 ವಿದ್ಯಾರ್ಥಿನಿಯರು ಸೇರಿ ಒಟ್ಟು ರಾಜ್ಯದ 20 ಜಿಲ್ಲೆಗಳ 465 ಕ್ರೀಡಾಪಟುಗಳು ಭಾಗವಹಿಸಿದ್ದರು. ಸಂಜ್ಞೆ ಭಾಷೆ ಹಾಗೂ ಧ್ವಜದ ಚಿಹ್ನೆಗಳನ್ನು ನೋಡುವ ಮೂಲಕ ಕ್ರೀಡೆಗಳಲ್ಲಿ ಸೆಣಸಾಟ ಆರಂಭಿಸುತ್ತಿದ್ದ ಕ್ರೀಡಾಪಟುಗಳು ಕೊನೆಯ ಕ್ಷಣದವರೆಗೂ ರೋಚಕವಾಗಿ ಹೋರಾಟ ನಡೆಸಿ ಗಮನ ಸೆಳೆದರು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಎಲ್ಲ ಕ್ರೀಡಾಪಟುಗಳಿಗೂ ಬಾಗಲಕೋಟೆ ಜಿಲ್ಲಾ ಉಡರ ಸಂಘದ ವತಿಯಿಂದ ಊಟ ಹಾಗೂ ಪ್ರತ್ಯೇಕ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೊಸ ದಾಖಲೆ:18 ವರ್ಷ ಮೇಲ್ಪಟ್ಟ ಮಹಿಳೆಯರ ಎತ್ತರ ಜಿಗಿತದಲ್ಲಿ ಉತ್ತರ ಕನ್ನಡದ ಪ್ರೀತಿ ಹೆಗಡೆ 1.10ಮೀ ಜಿಗಿಯುವ ಮೂಲಕ ಹೊಸ ದಾಖಲೆ ಬರೆದರು. 18 ವರ್ಷದೊಳಗಿನ ಪುರುಷರ ಎತ್ತರ ಜಿಗಿತದಲ್ಲಿ ತುಮಕೂರಿನ ಗೋವಿಂದರಾಜು 1.50ಮೀ ಜಿಗಿಯುವ ಮೂಲಕ ನೂತನ ದಾಖಲೆ ಬರೆದರು. 18 ವರ್ಷದೊಳಗಿನ ಮಹಿಳೆಯರ ಎತ್ತರ ಜಿಗಿತದಲ್ಲಿ ತುಮಕೂರಿನ ಮೋಹಿತಾ ಆರ್. 1.20ಮೀ.ಜಿಗಿಯುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.ನ್ಯಾಷನಲ್ ಗೇಮ್ಸ್‌ನಲ್ಲೂ ಮಿಂಚಲಿ
ಬಾಗಲಕೋಟೆ ಜಿಲ್ಲಾ ಕಿವುಡರ ಸಂಘದವರು ಎಲ್ಲ ಕ್ರೀಡೆಗಳನ್ನು ಉತ್ತಮವಾಗಿ ಆಯೋಜನೆ ಮಾಡಿದ್ದಾರೆ. ಇಲ್ಲಿ ವಿಜಯಶಾಲಿಯಾದ ಕ್ರೀಡಾಪಟುಗಳು 2025 ಮಾರ್ಚ್‌ನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಸೆಣಸಲಿದ್ದಾರೆ.
- ವಿ.ಕುಮಾರ್, ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟದ ಅಧ್ಯಕ್ಷ, ಹೊಸದಿಲ್ಲಿ.