ನಗರ ವ್ಯಾಪ್ತಿಯಲ್ಲಿ ಆಸ್ತಿಯ ಸಂಪೂರ್ಣ ದಾಖಲೆ ನಕ್ಷಾ ಯೋಜನೆ ಪರಿಣಾಮಕಾರಿ

KannadaprabhaNewsNetwork |  
Published : May 09, 2025, 12:44 AM ISTUpdated : May 09, 2025, 10:51 AM IST
ಚಿಕ್ಕಮಗಳೂರು ನಗರದ ಆಸ್ತಿಗಳ ಸಂಪೂರ್ಣ ದಾಖಲೆಗೊಳಿಸಲು ನಕ್ಷಾ ಯೋಜನೆಗೆ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ಚಾಲನೆ ನೀಡಿದರು | Kannada Prabha

ಸಾರಾಂಶ

 ನಾಗರಿಕರ ಎಲ್ಲಾ ರೀತಿಯ ಆಸ್ತಿಗಳನ್ನು ಸ್ಯಾಟಲೈಟ್ ಮೂಲಕ ಸರ್ವೇ ನಡೆಸಿ ಗಣಕೀಕರಣಗೊಳಿಸಿ ಸಂಪೂರ್ಣ ದಾಖಲೆ ಸಿದ್ದಪಡಿಸುವ ಉದ್ದೇಶದೊಂದಿಗೆ ನೂತನವಾಗಿ ಜಾರಿಗೆ ತರಲಾಗಿರುವ ನಕ್ಷಾ ಯೋಜನೆ ದಾಖಲೆಗಳ ಸಂಗ್ರಹದ ಪರಿಣಾಮಕಾರಿ ಯೋಜನೆಯಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.

 ಚಿಕ್ಕಮಗಳೂರು : ನಗರಸಭೆ ವ್ಯಾಪ್ತಿಯಲ್ಲಿ ನಾಗರಿಕರ ಎಲ್ಲಾ ರೀತಿಯ ಆಸ್ತಿಗಳನ್ನು ಸ್ಯಾಟಲೈಟ್ ಮೂಲಕ ಸರ್ವೇ ನಡೆಸಿ ಗಣಕೀಕರಣಗೊಳಿಸಿ ಸಂಪೂರ್ಣ ದಾಖಲೆ ಸಿದ್ದಪಡಿಸುವ ಉದ್ದೇಶದೊಂದಿಗೆ ನೂತನವಾಗಿ ಜಾರಿಗೆ ತರಲಾಗಿರುವ ನಕ್ಷಾ ಯೋಜನೆ ದಾಖಲೆಗಳ ಸಂಗ್ರಹದ ಪರಿಣಾಮಕಾರಿ ಯೋಜನೆಯಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು. 

 ಗುರುವಾರ ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯಲ್ಲಿ ನಕ್ಷಾ ಯೋಜನೆ ಜಾರಿಗೆ ಬಂದಿದ್ದು, ಭಾರತದ ಸುಮಾರು 100 ನಗರಗಳಲ್ಲಿ ಈ ಯೋಜನೆ ಜಾರಿಮಾಡಲಾಗಿದೆ ಎಂದರು.ಕರ್ನಾಟಕ ರಾಜ್ಯದಲ್ಲಿ 10 ಸ್ಥಳೀಯ ಸಂಸ್ಥೆಗಳನ್ನು ಆಯ್ಕೆಮಾಡಲಾಗಿದ್ದು, ಇದರಲ್ಲಿ ಚಿಕ್ಕಮಗಳೂರು ನಗರಸಭೆಯೂ ಒಂದಾಗಿದೆ. ಇ-ಸ್ವತ್ತಿನಲ್ಲಿದ್ದರೂ ಈ ಯೋಜನೆಯಡಿ ನಾಗರಿಕರು ತಮ್ಮ ಆಸ್ತಿಗಳನ್ನು ಗಣಕೀಕೃತಗೊಳಿಸಿದಾಗ ಮಾತ್ರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. 

ಈ ಕುರಿತು ಸಂಬಂಧಪಟ್ಟ ಖಾತೆದಾರರಿಗೆ ಎಟಿಎಂ ಮಾದರಿ ಕಾರ್ಡನ್ನು ವಿತರಿಸು ತ್ತೇವೆ ಎಂದು ಹೇಳಿದರು.ಸರ್ವೇ ಇಲಾಖೆ ಅಧಿಕಾರಿಗಳು ಮತ್ತು ನಗರಸಭೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಬಂದಾಗ ಸಾರ್ವಜನಿಕರು ಸ್ವತ್ತಿನ ಸಂಪೂರ್ಣ ವಿವರಗಳ ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ದೊರೆತಾಗ ಸರ್ಕಾರ ನೀಡಿದ 6 ತಿಂಗಳ ಗಡುವಿನೊಳಗೆ ಪೂರ್ಣ ಪ್ರಮಾಣದ ಕೆಲಸ ಆಗುತ್ತದೆ. ವಿಳಂಭ ಮಾಡಿದರೆ ಖಾತೆದಾರರೇ ಹೊಣೆಯಾಗುತ್ತಾರೆಂದು ವಿವರಿಸಿದರು.

ಈ ಸಂಬಂಧ ನಕ್ಷಾ ಯೋಜನೆಯಡಿ ದಾಖಲೆ ಸಂಗ್ರಹಿಸಲು ಸಂಬಂಧಿಸಿದ ಖಾತೆದಾರರಿಗೆ ಸೂಚನೆ ಪತ್ರ ರವಾನಿಸಲಿದ್ದು, ಪತ್ರದಲ್ಲಿ ತಿಳಿಸಿದ ದಿನಾಂಕದಂದು ಮನೆಯಲ್ಲೇ ಇದ್ದು, ಬರುವ ಸಿಬ್ಬಂದಿಗೆ ತಮ್ಮ ಆಸ್ತಿ ಪೂರ್ಣ ವಿವರಗಳನ್ನು ಒದಗಿಸುವ ಮೂಲಕ ಯೋಜನೆ ಯಶಸ್ವಿಯಾಗಲು ಬೆಂಬಲ ಅಗತ್ಯ ಎಂದರು.ಭೂದಾಖಲೆಗಳ ಸಹಾಯಕ ನಿರ್ದೇಶಕ ರುದ್ರೇಶ್ ಮಾತನಾಡಿ, ನಕ್ಷಾ ಯೋಜನೆ ಭಾರತದ ೧೦೦ ನಗರಗಳಲ್ಲಿ ಜಾರಿಗೆ ಬಂದಿದ್ದು, ಇದರಲ್ಲಿ ನಗರಸಭೆಯೂ ಆಯ್ಕೆಯಾಗಿದೆ. ಪ್ರತಿಯೊಂದು ಸ್ವತ್ತುಗಳನ್ನು ಸರ್ವೆ ಮಾಡಿ ಗುರುತಿನ ಚೀಟಿಯಲ್ಲಿ ಆಸ್ತಿಯ ಸಂಪೂರ್ಣ ವಿವರವನ್ನು ಲಗತ್ತಿಸಿ ಸಂಬಂಧಪಟ್ಟವರಿಗೆ ವಿತರಿಸುತ್ತೇವೆಂದು ಹೇಳಿದರು

.ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತೀ ಬಿಲ್ಡಿಂಗ್, ರಸ್ತೆ, ವಿದ್ಯುತ್ ಕಂಬ, ಒಳ ಚರಂಡಿ, ಸ್ಮಶಾನ, ಕೆರೆ ಸೇರಿದಂತೆ ಎಲ್ಲವು ಗಳನ್ನು ಸರ್ವೆ ಮಾಡಿ ಡಿಜಿಟಲೀಕರಣಗೊಳಿಸಿ ಮಾಲೀಕರ ಹೆಸರು ಸಹಿತ ಸಂಪೂರ್ಣ ಮಾಹಿತಿಯುಳ್ಳ ೩ಡಿ ಫಿಲಂನ್ನು ವಿತರಿಸುತ್ತೇವೆ ಎಂದರು.ನಗರಸಭೆ ವ್ಯಾಪ್ತಿ ನಿವಾಸಿಗಳಿಗೆ ತಮ್ಮ ಮನೆ, ನಿವೇಶನ ಸೇರಿದಂತೆ ಸ್ವತ್ತುಗಳ ಎಲ್ಲಾ ಸಂಪೂರ್ಣ ದಾಖಲಾತಿಗಳನ್ನು ಒದಗಿಸಲು ಈ ಯೋಜನೆ ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.ಸರ್ವೇ ಕಾರ್ಯದಲ್ಲಿ ನಗರಾಭಿವೃದ್ಧಿ ಇಲಾಖೆ, ಸರ್ವೇ ಇಲಾಖೆ, ಸರ್ವೇ ಆಫ್ ಇಂಡಿಯಾ ಸಹಿತ ಒಟ್ಟು ೫ ಇಲಾಖೆಗಳು ಈ ಕಾರ್ಯ ನಡೆಸಲು ನಿಯೋಜನೆಗೊಂಡಿದ್ದು, ಮುಂದಿನ ೬ ತಿಂಗಳ ಒಳಗೆ ಈ ಕಾರ್ಯ ಅಂತಿಮಗೊಳಿಸುವಂತೆ ಗಡುವು ನೀಡಿದ್ದಾರೆಂದು ವಿವರಿಸಿದರು.ಈ ಸಂದರ್ಭದಲ್ಲಿ ಭೂ ದಾಖಲೆಗಳ ಉಪನಿರ್ದೇಶಕ ಲೋಹಿತ್, ಮೇಲ್ವಿಚಾರಕಿ ಗೀತಾ, ಧರ್ಮಪಾಲ್, ಪ್ರಕಾಶ್, ಅಧೀಕ್ಷಕ ನಂಜುಂಡಪ್ಪ, ಕಲ್ಲೇಶಪ್ಪ ಸೇರಿದಂತೆ ಎಲ್ಲಾ ಭೂಮಾಪಕರು, ನಗರಸಭೆ ಇಂಜಿನಿಯರ್ ಲೋಕೇಶ್, ಕಂದಾಯ ವಿಭಾಗದ ರಾಜಸ್ವ ನಿರೀಕ್ಷಕ ಶಿವಾನಂದ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪ ಕ್ರಿಸ್ ಮಸ್ ಪ್ರಯುಕ್ತ ೨೧ರಂದು ಸೌಹಾರ್ದ ರ‍್ಯಾಲಿ
ಪ್ರತಿ ಮಹಿಳೆ ಸಮತೋಲನ ಆಹಾರ ಸೇವಿಸಬೇಕು: ಸೋನಾ ಮ್ಯಾಥ್ಯೂ