ವಿದ್ಯಾರ್ಥಿನಿಲಯ ಕಾಮಗಾರಿ ತ್ವರಿತವಾಗಿ ಮುಗಿಸಿ: ವಿಶ್ವನಾಥ ಹೊಸಮನಿ

KannadaprabhaNewsNetwork |  
Published : Feb 02, 2026, 02:30 AM IST
29ಎಂಡಿಜಿ2, ಮುಂಡರಗಿ ತಾಲೂಕು ಪಂಚಾಯತಿ ಸಮರ್ಥ ಸೌಧದಲ್ಲಿ ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬುಧವಾರ ಸಂಜೆ ಜರುಗಿತು. | Kannada Prabha

ಸಾರಾಂಶ

ಜಂತ್ಲಿ ಶಿರೂರಿಗೆ 2024- 25ರಲ್ಲಿಯೆ ಕಾಮಗಾರಿ ಮಂಜೂರಾಗಿದ್ದು, ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ತ್ವರಿತವಾಗಿ ಪಾರಂಭಿಸಬೇಕು ಎಂದು ವಿಶ್ವನಾಥ ಹೊಸಮನಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗೆ ತಿಳಿಸಿದರು.

ಮುಂಡರಗಿ: ಪಟ್ಟಣದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ಕಟ್ಟಡ ಕಾಮಗಾರಿ ನಮ್ಮ ಅಗ್ರಿಮೆಂಟ್ ಪ್ರಕಾರ ಕೇವಲ ಹನ್ನೊಂದು ತಿಂಗಳು ಅವಧಿಯಲ್ಲಿ ಮುಗಿಸಬೇಕಾಗಿತ್ತು. ಆದರೆ ಇನ್ನೂ ಮುಗಿದಿಲ್ಲ. ಕಾಂಪೌಂಡ್ ಚಿಕ್ಕದಿದೆ. ಅದನ್ನು ಎತ್ತರಕ್ಕೇರಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಸೂಚಿಸಿದರು.

ಬುಧವಾರ ಸಂಜೆ ತಾಲೂಕು ಮಟ್ಟದ ಎಸ್‌ಸಿ,ಎಸ್‌ಪಿ ಮತ್ತು ಟಿಎಸ್‌ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಇಲಾಖೆಗೆ ಹಸ್ತಾಂತರಗೊಳಿಸುವಂತೆ ಎಂದರು.

ಜಂತ್ಲಿ ಶಿರೂರಿಗೆ 2024- 25ರಲ್ಲಿಯೆ ಕಾಮಗಾರಿ ಮಂಜೂರಾಗಿದ್ದು, ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ತ್ವರಿತವಾಗಿ ಪಾರಂಭಿಸಬೇಕು ಎಂದು ವಿಶ್ವನಾಥ ಹೊಸಮನಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿಗೆ ತಿಳಿಸಿದರು. ಪೇಠಾಲೂರು, ಡ.ಸ. ರಾಮೇನಹಳ್ಳಿ, ಹಾಗೂ ಡೋಣಿ ತಾಂಡಾಗಳಲ್ಲಿ ಕಾಮಗಾರಿಗಳ ಎಡಿಎಂ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಅಧಿಕಾರಿ ತಿಳಿಸಿ, ಜಂತ್ಲಿ ಶಿರೂರಿ ಕಾಮಗಾರಿ ಕುರಿತು ಪರಿಶೀಲಿಸಲಾಗುವುದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ, ತಾಲೂಕಿನಲ್ಲಿ 32 ಎಸ್ಸಿ ಮತ್ತು 8 ಎಸ್ಟಿ ಅಂಗನವಾಡಿ ಕೇಂದ್ರಗಳಿವೆ. ಐಸಿಡಿಎಸ್ ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆ ಅಡಿ 3362 ಪರಿಶಿಷ್ಟ ಜಾತಿ, 1006 ಪರಿಶಿಷ್ಟ ಪಂಗಡದ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಇಒ ಹೊಸಮನಿ ಮಾತನಾಡಿ, ಮುಂದಿನ ಸಭೆಗೆ ಬರುವಾಗ ಊರಿನ ಹೆಸರು ಸಮೇತ ಎಲ್ಲ ಅಂಗನವಾಡಿ ಕೇಂದ್ರಗಳ ಯಾದಿ ನೀಡಬೇಕು. ಎಸ್ಸಿ ಮತ್ತು ಎಸ್ಟಿ ಅಂಗವಿಕಲರಿಗೆ ಟಾಕಿಂಗ್ ಲ್ಯಾಪ್ ಟಾಪ್ ಯಂತ್ರ ಚಾಲಿತ ದ್ವಿ ಚಕ್ರವಾಹನ ಹಾಗೂ ಸಾಧನ ಸಲಕರಣೆ ನೀಡಿರುವ ವಿವರವನ್ನು ಎಂಆರ್ ಅವರಿಂದ ಪಡೆದುಕೊಳ್ಳುವಂತೆ ಸಹಾಯ ನಿರ್ದೇಶಕರಿಗೆ ತಿಳಿಸಿದರು.

ಹೆಸ್ಕಾಂ ಅಧಿಕಾರಿ ತಮ್ಮ ಇಲಾಖೆ ಪ್ರಗತಿ ತಿಳಿಸಿ, 2025- 26ನೇ ಸಾಲಿನಲ್ಲಿ ಎಸ್‌ಸಿ, ಎಸ್‌ಪಿ ಯೋಜನೆಯಡಿ ₹38.287 ಲಕ್ಷ ಅನುದಾನದಲ್ಲಿ 12 ಕಾಮಗಾರಿಗಳು ಹಾಗೂ ಟಿಎಸ್‌ಪಿ ಯೋಜನೆಯಡಿ ₹21.666 ಲಕ್ಷ ಅನುದಾನದಲ್ಲಿ 8 ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.

ಇಒ ವಿಶ್ವನಾಥ ಮಾತನಾಡಿ, ಈಗಾಗಲೆ ಮುಕ್ತಾಯವಾಗಿರುವ ಕಾಮಗಾರಿಗಳ ಸ್ಥಳ ಪರಿಶೀಲನೆ ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿ, ಒಂದು ವೇಳೆ ಕಾಮಗಾರಿ ಪೂರ್ಣಗೊಳ್ಳದೇ ಇದ್ದಲ್ಲಿ ಎಲ್ಲ ಹಣ ಮರಳಿ ಸರ್ಕಾರಕ್ಕೆ ಭರಣ ಮಾಡಲು ಬರೆಯಲಾಗುವುದು ಎಂದರು.

ಸಭೆಯಲ್ಲಿ ಕೆಆರ್‌ಐಡಿಎಲ್ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಪಿಆರ್‌ಇಡಿ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಇಲಾಖೆ, ಹೆಸ್ಕಾಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಕ್ಷರ ದಾಸೋಹ, ಸಾಮಜಿಕ ಮತ್ತು ಕಪ್ಪತ್ ಹಿಲ್ಸ್ ಅರಣ್ಯ, ಸಿಡಿಪಿಒ ಮೀನುಗಾರಿಕೆ, ಆರೋಗ್ಯ ಇಲಾಖೆ, ಬಿಸಿಎಂ, ಪುರಸಭೆ, ಶಿಂಗಟಾಲೂರು ಏತ ನೀರಾವರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ