ಹಳಿಯಾಳ: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ 3ನೇ ಮಿನಿ ಒಲಿಂಪಿಕ್(15 ವರ್ಷದೊಳಗಿನ) ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾ ವಸತಿನಿಲಯದ ಕುಸ್ತಿಪಟುಗಳು 10 ಪದಕಗಳೊಂದಿಗೆ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ತಾಲೂಕಿನ ಗರಿಮೆಯನ್ನು ಹೆಚ್ಚಿಸಿದ್ದಾರೆ.
ವೆಲೆನ್ಸಿಯಾ ಫರ್ನಾಂಡೀಸ್(62 ಕೆಜಿ), ಮಾರ್ಷಲಿನಾ ಸಿದ್ದಿ(68 ಕೆಜಿ) ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು ಪಡೆದರೆ, ಬಿಂದುಶ್ರೀ ಪಾಟೀಲ(58 ಕೆಜಿ) ಹಾಗೂ ಶೆರಿನಾ ಕಾಂಬ್ರೆಕರ್(54 ಕೆಜಿ) ತೃತೀಯ ಸ್ಥಾನದೊಂದಿಗೆ ಕಂಚಿನ ಪದಕವನ್ನು ಪಡೆದರು.ಬಾಲಕರ ವಿಭಾಗದಲ್ಲಿ ಶಂಕರಗೌಡ ಪಾಟೀಲ(48 ಕೆಜಿ) ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕವನ್ನು, ಮಹ್ಮದ್ ಜುನೇದ್ ನದಾಫ್ (54 ಕೆಜಿ) ಹಾಗೂ ಮೋಹನ್ ಹಡಪದ(48 ಕೆಜಿ) ತೃತೀಯ ಸ್ಥಾನವನ್ನು ಪಡೆದು ಕಂಚಿನ ಪದಕವನ್ನು ಪಡೆದಿದ್ದಾರೆ. ಈ ಕುಸ್ತಿಪಟುಗಳಿಗೆ ತುಕಾರಾಮ ಗೌಡ ಹಾಗೂ ಮಮತಾ ಕೇಳೋಜಿಯವರು ತರಬೇತಿಯನ್ನು ನೀಡಿದ್ದಾರೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರವಿ ವೈ. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂತರ್ಜಲ ಹೆಚ್ಚಿಸಲು ಚೆಕ್ ಡ್ಯಾಂ, ಕೆರೆಗಳು ಸಹಕಾರಿ
ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ದೊಡ್ಡಬೇಣದ ಸ.ಕಿ.ಪ್ರಾ. ಶಾಲೆಯಲ್ಲಿ ಗ್ರಾಮ ಅರಣ್ಯ ಸಮಿತಿ ಜಕ್ಕೊಳ್ಳಿ(ದೊಡ್ಡಬೇಣ), ಜಕ್ಕೊಳ್ಳಿಯ ಆಶ್ರಯದಲ್ಲಿ ಪಾಲಿಸಿದರೆ ಪಾಲು ಯೋಜನೆಯಡಿ ವಿಎಫ್‌ಸಿ ಸದಸ್ಯರ ಕುಟುಂಬಗಳಿಗೆ ಬೇವಿನ ಸಸಿ ವಿತರಣಾ ಕಾರ್ಯಕ್ರಮ ಮತ್ತು ವಾರ್ಷಿಕ ಮಹಾಮಂಡಳಿ ಸಭೆ ನ. ೧೪ರಂದು ನಡೆಯಿತು.
ಕುಂದರಗಿ ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಎಫ್‌ಸಿ ಅಧ್ಯಕ್ಷ ರವಿ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮಂಚೀಕೇರಿ ವಲಯಾರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ವಿಎಫ್‌ಸಿ ಸದಸ್ಯರಿಗೆ ಸಾಂಕೇತಿಕವಾಗಿ ಬೇವಿನ ಸಸಿ ವಿತರಿಸಿ, ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸಿ, ಪರಿಸರವನ್ನು ಸಂರಕ್ಷಿಸುವ ಮೂಲಕ ಅರಣ್ಯ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು. ಅಂತರ್ಜಲ ಮಟ್ಟ ಹೆಚ್ಚಿಸಲು, ಚೆಕ್ ಡ್ಯಾಂ, ಕೆರೆಗಳ ನಿರ್ಮಾಣ ಕಾಮಗಾರಿಗಳನ್ನು ಅರಣ್ಯ ಇಲಾಖೆ ವತಿಯಿಂದ ಹೆಚ್ಚಾಗಿ ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದರು.ಪಾರ್ವತಿ ಹರಿಜನ ಸ್ವಾಗತಗೀತೆ ಹಾಡಿದರು. ಮಂಜುನಾಥ ಶಾಸ್ತ್ರಿ ಸ್ವಾಗತಿಸಿದರು. ವಿಎಫ್‌ಸಿ ಅಧ್ಯಕ್ಷ ರವಿ ಶಾಸ್ತ್ರಿ ತಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಪವಲಯಾರಣ್ಯಾಧಿಕಾರಿ, ಗ್ರಾ.ಅ. ಸಮಿತಿ ಕಾರ್ಯದರ್ಶಿ ಜಗದೀಶ ಪಾಲಕನವರ ವರದಿ ವಾಚಿಸಿ, ನಿರ್ವಹಿಸಿದರು. ಅತಿಥಿಗಳಾಗಿದ್ದ ಗ್ರಾಪಂಸದಸ್ಯ ಮಾಸ್ತ್ಯಪ್ಪ ಮಡಿವಾಳ, ಗ್ರಾಮಸ್ಥ ಮಂಜುನಾಥ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ಬೈಚಗೋಡು ಗಸ್ತು ಅರಣ್ಯ ಪಾಲಕ ವಿಶ್ವನಾಥ ಗೊರಗುಂಡಗಿ ವಂದಿಸಿದರು.