ಪೊಲೀಸ್ ಕ್ರೀಡಾಕೂಟ: ನಗರ ಉಪ ವಿಭಾಗಕ್ಕೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Dec 01, 2024, 01:30 AM IST
ಕ್ಯಾಪ್ಷನ 30ಕೆಡಿವಿಜಿ37 ದಾವಣಗೆರೆಯ ಜಿಲ್ಲಾ ಪೊಲೀಸ್ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದ ನಗರ ಉಪ ವಿಭಾಗ ತಂಡ | Kannada Prabha

ಸಾರಾಂಶ

ದಾವಣಗೆರೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ 2 ದಿನ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆಬಿದ್ದಿದ್ದು, ‘ನಗರ ಉಪ ವಿಭಾಗ’ವು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

- ಪೊಲೀಸ್ ಕವಾಯತು ಮೈದಾನದಲ್ಲಿ 2 ದಿನ ನಡೆದ ವಾರ್ಷಿಕ ಕ್ರೀಡೆಗಳು

- - - ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ 2 ದಿನ ನಡೆದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆಬಿದ್ದಿದ್ದು, ‘ನಗರ ಉಪ ವಿಭಾಗ’ವು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ನಗರ ಉಪ ವಿಭಾಗದ ಅಜೋಳ ಉಮೇಶ ಪುರುಷರ ವಿಭಾಗದಲ್ಲಿ ಚಾಂಪಿಯನ್‌, ಮಾಲತಿ ಬಾಯಿ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಗೌರವಕ್ಕೆ ಪಾತ್ರರಾದರು.

ಕಬಡ್ಡಿ, ವಾಲಿಬಾಲ್ ಹಾಗೂ ರಿಲೇ ಪಂದ್ಯಗಳಲ್ಲಿ ನಗರ ಉಪ ವಿಭಾಗದ ತಂಡ ವಿನ್ನರ್ ಆಗಿದೆ. ಹಗ್ಗಜಗ್ಗಾಟ ಪಂದ್ಯದಲ್ಲಿ ಡಿಎಆರ್, ಕ್ರಿಕೆಟ್‌ನಲ್ಲಿ ಡಿಪಿಒ ತಂಡಗಳು ಮೊದಲ ಸ್ಥಾನ ಗಳಿಸಿದವು. ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಗರ ಉಪವಿಭಾಗದ ತಂಡ ಪ್ರಥಮ ಸ್ಥಾನ ಪಡೆಯಿತು.

ಎಎಸ್‌ಪಿ ಮಂಜುನಾಥ (ಗುಂಡು ಎಸೆತದಲ್ಲಿ ಪ್ರಥಮ, ಷಟಲ್ ಡಬಲ್ಸ್‌ನಲ್ಲಿ ದ್ವಿತೀಯ), ಎಎಸ್‌ಪಿ ವಿಜಯಕುಮಾರ್ ಸಂತೋಷ್ (ಗುಂಡು ಎಸೆತದಲ್ಲಿ ದ್ವಿತೀಯ, 7.62 ಎಂಎಂ ರೈಫಲ್ ಗುರಿಯಲ್ಲಿ ದ್ವಿತೀಯ, ಷಟಲ್ ಡಬಲ್ಸ್‌ನಲ್ಲಿ ತೃತೀಯ), ಲೋಕಾಯುಕ್ತ ಎಸ್‌ಪಿ ಕೌಲಾಪುರೆ 7.62 ರೈಫಲ್ ಗುರಿಯಲ್ಲಿ ತೃತೀಯ, 9 ಎಂ.ಎಂ. ಪಿಸ್ತೂಲ್ ಗುರಿಯಲ್ಲಿ ತೃತೀಯ, ಎಎಸ್‌ಪಿ ಸ್ಯಾಮ್ ವರ್ಗೀಸ್ (ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ, 9 ಎಂ.ಎಂ. ಪಿಸ್ತೂಲ್ ಗುರಿಯಲ್ಲಿ ಪ್ರಥಮ, 7.62 ರೈಫಲ್ ಗುರಿಯಲ್ಲಿ ಪ್ರಥಮ), ಎಸ್‌ಪಿ ಉಮಾ ಪ್ರಶಾಂತ್ (9 ಎಂ.ಎಂ. ಪಿಸ್ತೂಲ್ ಗುರಿಯಲ್ಲಿ ದ್ವಿತೀಯ, ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ, ಟೆನಿಸ್‌ನಲ್ಲಿ ಪ್ರಥಮ) ಸಾಧನೆ ಮೆರೆದರು.

ಡಿಎಸ್‌ಪಿ ಅಧಿಕಾರಿಗಳ ವಿಭಾಗದಲ್ಲಿ ವಿಜೇತರಾದ ಮಲ್ಲೇಶ ದೊಡ್ಡಮನಿ, ರುದ್ರೇಶ್, ಬಿ.ಎಸ್.ಬಸವರಾಜ (ತಟ್ಟೆ ಎಸೆತ), ಮಲ್ಲೇಶ ದೊಡ್ಡಮನಿ, ಬಿ.ಎಸ್. ಬಸವರಾಜ, ರುದ್ರೇಶ್ (ಭರ್ಚಿ ಎಸೆತ), ಮಲ್ಲೇಶ ದೊಡ್ಡಮನಿ, ಬಿ.ಎಸ್.ಬಸವರಾಜ (ಗುಂಡು ಎಸೆತ), ಬಿ.ಎಸ್.ಬಸವರಾಜ, ಆರ್.ಎಸ್. ಉಜ್ಜಿನಕೊಪ್ಪ, ಪಿ.ಬಿ.ಪ್ರಕಾಶ (7.62 ರೈಫಲ್ ಗುರಿ), ಪಿ.ಪಿ.ಮಂಜುನಾಥ ಸಿಂಗಲ್ಸ್ ಷಟಲ್ ಹಾಗೂ ಷಟಲ್ ಡಬಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದರು.

ಮಧುರಾ, ಉಷಾ, ಸಂಗೀತಾ (400 ಮೀ. ಒಟ), ಮಾಲತಿಬಾಯಿ, ಮಧುರಾ, ಉಷಾ (200 ಮೀ. ಓಟ), ಲಕ್ಷ್ಮಿದೇವಿ, ಮಾಲತಿ ಬಾಯಿ (7.62 ರೈಫಲ್ ಗುರಿ), ಕೆ.ಎಸ್.ರಂಗ, ವೆಂಕಟೇಶ, ಮಲ್ಲಿಕಾರ್ಜುನ (ಚಕ್ರ ಎಸೆತ), ಸಿದ್ದೇಶ, ಮಂಜುನಾಥ್, ಕೆ.ಎಸ್.ರಂಗ (ಭರ್ಚಿ ಎಸೆತ), ಸಂತೋಷ್ ರಾಠೋಡ್, ತಿಮ್ಮರಾಜು, ಚಂದ್ರಪ್ಪ (7.62 ರೈಫಲ್ ಗುರಿ), ಧೃವ, ಪ್ರದೀಪ್ ಚೌಹಾಣ್, ಏಕಾಂತ್ (800 ಮೀ. ಓಟ), ಅಜೋಳ ಉಮೇಶ್, ಮಹಾಂತೇಶ ಬಿದರಿ, ರಾಘವೇಂದ್ರ (100 ಮೀ. ಓಟ).

45 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ಸ್ಪೀಡ್‌ವಾಕ್ ಸ್ಪರ್ಧೆಯಲ್ಲಿ ಮಂಜುಳಾ, ವೀಣಾ, ಹೇಮಾವತಿ, ಮಂಗಳಾ ಪ್ರಶಸ್ತಿ ಪಡೆದರು. 45 ವರ್ಷದೊಳಗಿನ ಮಹಿಳಾ ವಿಭಾಗದಲ್ಲಿ 100 ಮೀ. ಓಟದ ಸ್ಪರ್ಧೆಯಲ್ಲಿ ಚನ್ನಮ್ಮ, ಭವ್ಯಾ, ಚಂದ್ರಕಲಾ ಪ್ರಶಸ್ತಿ ಪಡೆದರು. ಷಟಲ್ ಡಬಲ್ಸ್‌ನಲ್ಲಿ ರೇಣುಕಾ ರೋಣದ್, ಐಶ್ವರ್ಯ, ಭವ್ಯಾ ಹಾಗೂ ಸಿಂಗಲ್ಸ್‌ನಲ್ಲಿ ಶೃತಿ, ಅಮೃತಾ ವಿಜೇತರಾದರು.

- - - -30ಕೆಡಿವಿಜಿ37:

ದಾವಣಗೆರೆಯ ಜಿಲ್ಲಾ ಪೊಲೀಸ್ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದ ನಗರ ಉಪ ವಿಭಾಗ ತಂಡ ಸದಸ್ಯರ ಸಂಭ್ರಮ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!