ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಚಿಕ್ಕೋಡಿ ತಾಲೂಕಿನ ಕೆ.ಎಲ್.ಇ ಸಂಸ್ಥೆಯ ಅಂಕಲಿಯ ಶಾರದಾದೇವಿ ಕೋರೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಜರುಗಿದ ಶಾಲಾ ಶಿಕ್ಷಣ ಇಲಾಖೆಯ(ಪದವಿಪೂರ್ವ)ವಿದ್ಯಾರ್ಥಿಗಳ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಕ್ರೀಡಾಕೂಟ 2024-25ರಲ್ಲಿ ವೈಯಕ್ತಿಕವಾಗಿ 11 ವಿದ್ಯಾರ್ಥಿಗಳು ಒಟ್ಟು 17 ಪ್ರಶಸ್ತಿಗಳನ್ನು ಪಡೆದರು. ವಿದ್ಯಾರ್ಥಿ ಅಮಿತ ಮಾಳಗೆ 400 ಮೀ ಅಡೆತಡೆ ಓಟದಲ್ಲಿ ಪ್ರಥಮ, 100 ಮೀ ಓಟದಲ್ಲಿ ದ್ವಿತೀಯ, 110 ಮೀ ಅಡೆತಡೆ ಓಟದಲ್ಲಿ ತೃತೀಯ, ವರ್ಧಾ ಕಾಸಾರ 400 ಮೀ ಅಡೆತಡೆ ಓಟದಲ್ಲಿ ಪ್ರಥಮ, 100 ಮೀ ಅಡೆತಡೆ ಓಟದಲ್ಲಿ ದ್ವಿತೀಯ, ಉದ್ದಜಿಗಿತದಲ್ಲಿ ತೃತೀಯ ಸ್ಥಾನ ಪಡೆದರು. ನಿವೇದಿತಾ ಮಠಪತಿ 100ಮೀ ಅಡೆತಡೆ ಓಟದಲ್ಲಿ ಪ್ರಥಮ. ಕುಸ್ತಿ ಸ್ಪರ್ಧೆಯ 92 ಕೆ.ಜಿ ಗುಂಪಿನಲ್ಲಿ ಓಂಕಾರ ಡಾಂಗೆ ಪ್ರಥಮ, ಟೆಕ್ವಾಂಡೊ ಸ್ಪರ್ಧೆಯ 42 ಕೆಜಿ ಒಳಗಿನ ಗುಂಪಿನಲ್ಲಿ ಶ್ರದ್ಧಾ ಬಾಮನೆ ಪ್ರಥಮ, ಸಾಕ್ಷಿ ರಾನಗೆ 1500 ಮೀ ಓಟದಲ್ಲಿ ದ್ವಿತೀಯ, ಕ್ರಾಸ್‌ಕಂಟ್ರಿ ಸ್ಪರ್ಧೆಯಲ್ಲಿ ನಾಲ್ಕನೇಯ, ಜಯಶ್ರೀ ಶೇಂಡಗೆ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ, ಕ್ರಾಸ್‌ಕಂಟ್ರಿಯಲ್ಲಿ 6ನೇ ಸ್ಥಾನ ಪಡೆದರು. ನಂದಿನಿ ಕಾಂಬಳೆ 100 ಮೀ ಓಟದಲ್ಲಿ ತೃತೀಯ, ಸ್ವಾತಿ ಕೋಕನೆ 400 ಮೀ ಅಡೆತಡೆ ಓಟದಲ್ಲಿ ತೃತೀಯ, ಚೆಸ್‌ನಲ್ಲಿ ವೈಷ್ಣವಿ ಮಾನೆ ನಾಲ್ಕನೇಯ ಮತ್ತು ಕುಣಾಲ್ ಯಾದವ 5ನೇ ಸ್ಥಾನ ಪಡೆದರು. ಸಾಂಘಿಕವಾಗಿ 4/100 ಮೀ ರಿಲೇಯಲ್ಲಿ ಬಾಲಕಿಯರ ತಂಡ ಪ್ರಥಮ, ನೆಟಬಾಲ್‌ನಲ್ಲಿ ಬಾಲಕಿಯರ ಮತ್ತು ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡರು. 4/400 ಮೀ ರಿಲೇಯಲ್ಲಿ ಬಾಲಕಿಯರ ತಂಡ ತೃತೀಯ ಸ್ಥಾನ ಪಡೆಯಿತು. ಈ ಉನ್ನತ ಮಟ್ಟದ ಸಾಧನೆಗೆ ವಿಎಸ್‌ಎಂ ಜಿ.ಐ.ಬಾಗೇವಾಡಿ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯವು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಮಹಾವಿದ್ಯಾಲಯದ ಉಸ್ತುವಾರಿ ಸಮಿತಿಯ ಚೇರಮನ್ ರಾವಸಾಹೇಬ್ ಪಾಟೀಲ, ಸಂಚಾಲಕ ಸಂಜಯ ಮೊಳವಾಡೆ ಮಂಗಳವಾರ ಮಹಾವಿದ್ಯಾಲಯದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಉನ್ನತ ಸಾಧನೆಯೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಗೊಂಡ 24 ವಿದ್ಯಾರ್ಥಿಗಳ ಸಹಿತ ಯಶಸ್ವಿ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರ ದೈಹಿಕ ಶಿಕ್ಷಣ ಉಪನ್ಯಾಸಕಿ ಅಶ್ವಿನಿ ಬುಲಬುಲಿ ಅವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ, ವಿವಿಧ ವಿಭಾಗದ ಮುಖ್ಯಸ್ಥರಾದ ಅಜಿತರಾವ ಮೋರೆ, ಸಂಜಯ ಮುತ್ನಾಳೆ, ಪ್ರವೀನ ಪಾಯಮಲ್ಲೆ ಮೊದಲಾದವರು ಸಹಿತ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.