ಲಕ್ಷ್ಮೇಶ್ವರ: ಇಂದು ಎಲ್ಲ ಕಚೇರಿ,ಸಾರ್ವಜನಿಕ ಸ್ಥಳ ಸೇರಿದಂತೆ ಎಲ್ಲೇಡೆ ಅವಶ್ಯಕ ಸೇವೆಯಾಗಿದೆ.ಸಾರ್ವಜನಿಕ ಹಿತದೃಷ್ಟಿಯಿಂದ ಗ್ರಾಪಂ ನೀಡುತ್ತಿರುವ ಯಶಸ್ವಿ ಸೇವೆಗೆ ಕಂಪ್ಯೂಟರ್ ಆಪರೇಟರ್‌ಗಳ ಕೊಡುಗೆ ಅಪಾರ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಜನ್ಮ ದಿನವನ್ನು ಗ್ರಾಪಂ ಕಂಪ್ಯೂಟರ್ ಆಪರೇಟರ್‌ಗಳ ದಿನವೆಂದು ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಎಂದು ಹೇಳಿದರು.
ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ, ಗಣಕಯಂತ್ರ ನಿರ್ವಾಹಕರು ಪಾತ್ರ ಪ್ರಸಕ್ತ ಕೆಲಸದಲ್ಲಿ ಹೆಚ್ಚು ಆಸಕ್ತಿ ವಹಿಸಿ ನಿರ್ವಹಿಸುತ್ತಿರುವರಿಂದ ಎಲ್ಲ ಯೋಜನೆಗಳು ತಾಲೂಕಿನಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಇದೇ ರೀತಿ ನೀವು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಂಡು ಎಲ್ಲ ಯೋಜನೆಗಳಲ್ಲಿ ಲಕ್ಷ್ಮೇಶ್ವರ ತಾಲೂಕು ಹೆಚ್ಚು ಪ್ರಗತಿ ಸಾಧಿಸಲು ಕಾರ್ಯ ನಿರತರಾಗಬೇಕೆಂದು ಕರೆ ನೀಡಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಇಓ ಕೃಷ್ಣಪ್ಪ ಧರ್ಮರ, ಇಂದಿನ ಆಧುನಿಕ ಜಗತ್ತಿನತ್ತ ದಾಪುಗಾಲು ಇಡುತ್ತಿರುವ ಇಂದಿನ ಸುಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಹಾಗೂ ಜ್ಞಾನ ಅಗತ್ಯವಾಗಿದೆ. ಗ್ರಾಮೀಣ ಜನರ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮಗಳು ಹಾಗು ಗ್ರಾಪಂ ಕಚೇರಿಗಳಲ್ಲಿ ಸಿಗುವ ಸೌಲಭ್ಯ ಸಾರ್ವಜನಿಕರ ಸನಿಹಕ್ಕೆ ತೆಗೆದುಕೊಂಡು ಹೋಗುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳು ಎಂದು ಹೇಳಿದರು.
ದೊಡ್ದುರ ಗ್ರಾಪಂ ಪಿಡಿಓ ಎಸ್.ಎಫ್. ಮಾಳವಾಡ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಎಸ್.ಕೆ. ವಾಲಿ, ವಿವಿಧ ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಯು.ಬಳೂಟಗಿ, ಎಸ್.ಕೆ.ಕಡೂರ, ಎಂ.ಎನ್. ಮಲ್ಲೂರ, ಬಿ.ಬಿ. ತಳವಾರ, ಸವಿತ ಸೋಮಣ್ಣವರ, ಮಂಜುನಾಥ ಮಾದರ ಹಾಗೂ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಬಸವರಾಜ ಅರ್ಕಸಾಲಿ, ನಾಗರಾಜ ಪೂಜಾರ ಇದ್ದರು.