ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಜಿಲ್ಲಾ ಅಮೆಚೂರ್ ಕುಸ್ತಿ ಸಂಘ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕುಸ್ತಿ ತರಬೇತಿ ನೀಡಿದ ಶ್ರೀನಿವಾಸ್‌ಗೌಡ ಮಾತನಾಡಿ, ವಿವಿಧ ಗ್ರಾಮಗಳಿಂದ ಕಳೆದ 12 ದಿನಗಳಿಂದ ಬಾಲಕರು, ಬಾಲಕಿಯರು ಸೇರಿದಂತೆ ಹಲವು ಯುವ ಕುಸ್ತಿ ಪಟುಗಳಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪೋಶಕಾಂಶ ನೀಡುವ ಆಹಾರ, ಮೊಟ್ಟೆ ಸೇರಿದಂತೆ ಇತರ ದೇಹಕ್ಕೆ ಪುಷ್ಠಿಯಾಗುವ ಆಹಾರ ನೀಡಿ ಉತ್ತಮ ತರಬೇತಿ ಕೊಡಲಾಗಿದೆ ಎಂದರು.
ತರಬೇತಿ ಪಡೆದವರು ಈಗಾಗಲೇ ಹಲವು ಗ್ರಾಮಗಳಲ್ಲಿ ನಡೆಯುವ ಕುಸ್ತಿ ಪಂದ್ಯಗಳಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. ಮುಂದಿನ ಅವರ ಭವಿಷ್ಯ ಉತ್ತಮ ಕ್ರೀಡಾ ಪಟುಗಳಾಗಿ ಹೆಸರು ತರಲಿ ಎಂದು ಹಾರೈಸಿದರು.ಇದೇ ವೇಳೆ ತರಬೇತಿ ಪೋಷಕರು ಹಾಗೂ ಸಮಾಜ ಸೇವಕರಾದ ಡಾ.ಕೆ.ವೈ.ಶ್ರೀನಿವಾಸ್ಸ ಕ್ಯಾತನಹಳ್ಳಿ, ಶೀಲಾನಂಜುಂಡಯ್ಯ, ಎನ್. ಸರಸ್ವತಮ್ಮ, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕೂಡಲಕುಪ್ಪೆ ಹೆಚ್. ಮಮತಾ ಮಹದೇವು ಅವರನ್ನು ಗೌರವಿಸಿಸಲಾಯಿತು.
ಶ್ರೀಮಹದೇಶ್ವರ ದೇಗುಲದಲ್ಲಿ ಸ್ವಚ್ಛತಾ ಕಾರ್ಯ
ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತರು ನಗರದ ಹಾಲಹಳ್ಳಿ ಬಡಾವಣೆಯಲ್ಲಿರುವ ಶ್ರೀ ಮಹದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ, ಸರ್ಕಾರವೇ ಹಿಂದೂ ಮದಿರಗಳನ್ನು ಗುಂಡಿ ತೋಡುತ್ತಿರುವಾಗ ಅವುಗಳನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಸಮಾಜದ್ದೇ ಆಗಿದೆ. ಹಾಗೆಯೇ ಇದೊಂದು ಪುಟ್ಟ ಪ್ರಯತ್ನವಾಗಿ ನಾವು ಸ್ವಚ್ಛತಾ ಕಾರ್ಯವನ್ನು ಕೈಗೊಂಡಿದ್ದೇವೆ ಎಂದರು.
ಇದೇ ರೀತಿಯಲ್ಲಿ ಎಲ್ಲ ದೇವಾಲಯಗಳನ್ನೂ ಸ್ವಚ್ಚಗೊಳಿಸುವ ಕಾರ್ಯವನ್ನು ಕೈಗೊಂಡಿದ್ದೇವೆ. ಎಲ್ಲರೂ ನಮ್ಮೊಡನೆ ಕೈಜೋಡಿಸಬಹುದು ಎಂದು ಮನವಿ ಮಾಡಿದರಲ್ಲದೆ, ತಾಲೂಕಿನ ದೇವಾಲಯದ ಸ್ವಚ್ಚತಾ ಕಾರ್ಯಕ್ಕೆ ನಮ್ಮನ್ನು ಸಂಪರ್ಕಿಸುವಂತೆ ಕೋರಿದ್ದಾರೆ.