ಸ್ವಾತಂತ್ರ‍್ಯೋತ್ಸವ ಅದ್ಧೂರಿ ಆಚರಣೆಗೆ ತೀರ್ಮಾನ

KannadaprabhaNewsNetwork |  
Published : Aug 09, 2024, 12:30 AM IST
3ಎಚ್‌ಆರ್‌ಆರ್2ಹರಿಹರದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶನಿವಾರ ಸ್ವಾತಂತ್ರೋತ್ಸವ ಆಚರಣೆಯ ಅಂಗವಾಗಿ ನಡೆದ ಪರ‍್ವಸಿದ್ಧತಾ ಸಭೆಯಲ್ಲಿ ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಿರಿಯರ ನಾಗರಿಕರು ಕರ‍್ಮಿಕ ಮುಖಂಡರು ಹಾಗೂ ತಾಲೂಕಿನ ಭಾಗವಹಿಸಿದ್ದರು. | Kannada Prabha

ಸಾರಾಂಶ

ಈ ಬಾರಿ ಸ್ವಾತಂತ್ರ‍್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲು ಹರಿಹರದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರ ನಾಗರಿಕರು, ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಹರಿಹರ

ಈ ಬಾರಿ ಸ್ವಾತಂತ್ರ‍್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲು ಹರಿಹರದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ತಹಸೀಲ್ದಾರ್ ಕೆ.ಎಂ. ಗುರುಬಸವರಾಜ್ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು. ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರ ನಾಗರಿಕರು, ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.

ಪ್ರಸ್ತುತ ಮಳೆಗಾಲ ಸನ್ನಿವೇಶವಿದೆ. ಈ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲಾ ಮಕ್ಕಳು ಹಾಗೂ ಅತಿಥಿಗಳಿಗೆ ಮಳೆಯಿಂದ ರಕ್ಷಣೆ ಒದಗಿಸಲು ಪೂರಕವಾಗಿ ವೇದಿಕೆ ಸಿದ್ಧಪಡಿಸಬೇಕು. ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುವುದು. ಈ ಬಾರಿ ಬಹುಮಾನ ಮೌಲ್ಯವರ್ಧನೆಗೊಳಿಸಿ ಉತ್ತಮ ಮೌಲ್ಯದ ಬಹುಮಾನ ನೀಡಲು ತೀರ್ಮಾನಿಸಲಾಯಿತು.

ಸಮಾಜದಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ಸನ್ಮಾನಿಸುವ ಬಗ್ಗೆಯೂ ಚರ್ಚೆ ನಡೆಯಿತು. ಆಯ್ಕೆ ಸಮಿತಿ ರಚಿಸಿ ಅತ್ಯುತ್ತಮ ಸಾಧಕರನ್ನು ಆಯ್ಕೆ ಮಾಡುವ ಸಲುವಾಗಿ ಸಭೆಯಲ್ಲಿ ಹಲವಾರು ಸೂಚನೆ ನೀಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಮ್ ಬಾಬು, ಕರುನಾಡ ಕದಂಬ ಸೇನೆಯ ಎಚ್.ಸುಧಾಕರ್ ಸೇರಿದಂತೆ ಹಲವು ಸಂಘ ಸಂಸ್ಥೆ ಮುಖಂಡರು ಸ್ವಾತಂತ್ರ‍್ಯೋತ್ಸವಕ್ಕೆ ಯಾವುದೇ ಲೋಪ ಬಾರದಂತೆ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ- ಸೂಚನೆ ನೀಡಿದರು.

ತಾಪಂ ಪ್ರಭಾರ ಇಒ ರಾಮಕೃಷ್ಣಪ್ಪ, ಪೌರಾಯುಕ್ತ ಕೆ.ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕೆ ಇಲಾಖೆ ಶಶಿಧರ ಸ್ವಾಮಿ, ಕೃಷಿ ಇಲಾಖೆ ಎ.ನಾರನಗೌಡ, ಪಶು ಸಂಗೋಪನಾ ಇಲಾಖೆ ಟಿ.ಕೆ.ಸಿದ್ದೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಪೂರ್ಣಿಮಾ, ಬಿಸಿಎಂ ಇಲಾಖೆ ಆಸ್ಮಾಬಾನು, ಗ್ರಾಮಾಂತರ ಪಿಎಸ್ಐ ಮಂಜುನಾಥ ಕುಪ್ಪೇಲೂರ್, ನಗರ ಠಾಣೆ ಪಿಎಸ್ಐ ಶ್ರೀಪತಿ ಗಿನ್ನಿ, ತಾಲೂಕು ಆರೋಗ್ಯ ಅಧಿಕಾರಿ ಅಬ್ದುಲ್ ಖಾದರ್, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ ವಿದ್ಯಾಶ್ರೀ, ನೀರಾವರಿ ಇಲಾಖೆಯ ಶ್ರೀಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಗಿರೀಶ್, ಶಿರಸ್ತೇದಾರ್ ದರ್ಶನ್, ಕೆಆರ್‌ಐಡಿಎಲ್‌ನ ಶಂಕರ್ ನಾಯಕ್, ಗ್ರಂಥಾಲಯದ ರವಿಕುಮಾರ್ ಗಣಪೂರ್, ನಗರದ ಹಲವಾರು ದಲಿತ ಹಾಗೂ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ