ಗ್ರಾಮಗಳಲ್ಲಿ ಕಿಶೋರಿಯರ ಸಭೆ ನಡೆಸಿ: ಅಪರ್ಣಾ

KannadaprabhaNewsNetwork | Published : Aug 24, 2024 1:18 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಫೋಕ್ಸೋ ಕಾಯ್ದೆಗಳು, ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳಾ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಇತ್ತೀಚಿನ ದಿನಗಳಲ್ಲಿ ಫೋಕ್ಸೋ ಕಾಯ್ದೆಗಳು, ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮಕ್ಕಳ ರಕ್ಷಣಾ ಸಮಿತಿಯ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಪೋಕ್ಸೋ ಕಾಯ್ದೆಯಡಿ ಪೊಲೀಸ್‌ ಅಧಿಕಾರಿಗಳು ಎಫ್.ಐ.ಆರ್. ಹೆಚ್ಚಿನ ಜನರ ಮೇಲೆ ಹಾಕಬೇಕು. ಪೋಕ್ಸೋ, ಬಾಲ್ಯವಿವಾಹ, ಶಾಲೆ ಬಿಟ್ಟ ಮಕ್ಕಳಿಗೆ ಜಾಗೃತಿ ಮೂಡಿಸಿದರೆ ಕೆಲಸ ಆಗುವುದಿಲ್ಲ ಅದರ ಜೊತೆಗೆ ತರಬೇತಿ ನೀಡುವುದು ಇದರ ಮುಖ್ಯ ಉದ್ದೇಶ ಎಂದರು.

ಜೇವರ್ಗಿಯ ಒಂದು ಶಾಲೆಗಳಿಗೆ ಭೇಟಿ ನೀಡಿದಾಗ ನೆಲದ ಮೆಲೆಯೇ ಕುಳಿತು ಪಾಠ ಸಾಗಿತ್ತು, ನೆಲದ ಮೇಲೆ ಕೂಡಿಸಿ ಪಾಠ ಹೇಳಕೂಡದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿಯೊಬ್ಬ ಸ್ಥಳೀಯ ಮುಖ್ಯೋಪಾಧ್ಯಯರು ಬಾಲ್ಯವಿವಾಹ ನಿಷೇಧ ಅಧಿಕಾರಿಯಾಗಿದ್ದು, ಬಾಲ್ಯವಿವಾಹದಲ್ಲಿ ಅವುಗಳ ಜವಾಬ್ದಾರಿಯಾಗಿರುತ್ತೀರಿ ಮಕ್ಕಳಿಗೆ ಶಾಲೆ ಬಿಡದ ಹಾಗೆ ನೋಡಿಕೊಳ್ಳಬೇಕು ಶಾಲೆಬಿಟ್ಟಲ್ಲಿ ಅವರ ಮನೆಹೋಗಿ ಅವರು ಕರೆತರುವ ಪ್ರಯತ್ನ ಮಾಡಬೇಕೆಂದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಮಕ್ಕಳಿಗೆ ಅಷ್ಟೇ ಅರಿವು ನೀಡಿದರೆ ಸಾಲದು ಪಾಲಕ-ಪೋಷಕರಿಗೆ ಅರಿವು ಮೂಡಿಸಬೇಕು, ತಾಯಂದಿರು, ಕಿಶೋರಿಯರ ಸಭೆ ಎಲ್ಲ ಗ್ರಾಮಗಳಲ್ಲಿ ಆಯೋಜಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಸಾರಿಗೆ ಇಲಾಖೆ ಶಿಕ್ಷಣ ಇಲಾಖೆಯ ಉಪನಿರ್ದೇಶರು ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ಮಕ್ಕಳಿಗೆ ಶಾಲಾ ಹೋಗಿ ಬರಲು ಬಸ್ಸು ಕೊರತೆ ಉಂಟಾದಲ್ಲಿ ಕೂಡಲೆ ಅಪರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಾರಿಗೆ ವ್ಯವಸ್ಥೆ ಕಲ್ಪಿಸಿಲು ತಿಳಿಸಿದರು.

ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪೊಲೀಸರು ಸ್ವಯಂ ಪ್ರೇರಿತ ದೂರ ದಾಖಲಿಸಿಕೊಳ್ಳಬಹುದು ಎಂದು ತಿಳಿಸಿದರು. ಶಾಲೆಯ ಮಕ್ಕಳಿಗೆ ಪೌಷ್ಟಿಕತೆಯ ಆಹಾರ ನೀಡದೆ ಇರುವುದು ಕಂಡು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಶ್ರೀನಿವಾಸ ನವಲೆ ಅವರು ಮಾತನಾಡಿ ಫೊಕ್ಸೋ ಕಾಯ್ದೆಯಡಿ ಒಂದು ಸಲ ಯಾರದರೂ ಒಂದು ಕೇಸನಲ್ಲಿ ಬಂಧನವಾದರೆ ಬಿಡುಗಡೆಯಾಗುವುದು ಅಷ್ಟು ಸುಲಭವಲ್ಲ. ಕೇಂದ್ರ ಕಾರಾಗೃಹದಲ್ಲಿ ಬಂಧಿತರಾದಂತ ವ್ಯಕ್ತಿಗಳಲ್ಲಿ ಅತಿ ಹೆಚ್ಚಿನವರು ಚಿಕ್ಕವಯಸಿನವರಾಗಿದ್ದಾರೆ. ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗಳು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿದೆಯಿದ್ದಲ್ಲಿ ಅಂತಹ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಆಗ ಮಾತ್ರ ಬೇರೆಯವರಿಗೆ ಒಂದು ಪಾಠವಾಗುತ್ತದೆ ಎಂದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ. ಎನ್. ಶ್ರೀನಿಧಿ, ಎ.ಎಸ್.ಪಿ. ಬಿಂದುಮಣಿ, ಎ.ಸಿ.ಪಿ. ಚಂದ್ರಶೇಖರ ಜಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಮದಾನೇಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕ ರಾಜಕುಮಾರ ರಾಠೋಡ, ಮುರಗೇಶ ಗುಣಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಕಾನೂನು ಅಧಿಕಾರಿ ಭರತೇಶ ಉಪಸ್ಥಿತರಿದ್ದರು.

Share this article