ಕಲೆ ಉಳಿಯಲು ಸಮ್ಮೇಳನಗಳ ಅವಶ್ಯವಿದೆ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಕಲಾವಿದರ ತವರು ಶಕ್ತಿ ಕೇಂದ್ರ, ಕರ್ಮಭೂಮಿ, ಮಹಾಲಿಂಗಪುರ. ಇಲ್ಲಿ ಎಲ್ಲ ರೀತಿಯ ಕಲಾವಿದರಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ; ಸಿದ್ದು ಸವದಿ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಲಾವಿದರ ತವರು ಶಕ್ತಿ ಕೇಂದ್ರ, ಕರ್ಮಭೂಮಿ, ಮಹಾಲಿಂಗಪುರ. ಇಲ್ಲಿ ಎಲ್ಲ ರೀತಿಯ ಕಲಾವಿದರಿದ್ದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಲೆ ಉಳಿಯಲು ಸಮ್ಮೇಳನಗಳ ಅವಶ್ಯಕತೆ ಇದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

ನಗರದ ಶ್ರೀ ಬನಶಂಕರಿ ದೇವಸ್ಥಾನದ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಕಲಾವಿದರು ಕೇವಲ ಮಾಸಾಶನಕ್ಕೆ ಸೀಮಿತವಾಗದೆ ತಮಗಾಗಿ ನಡೆಯುವ ಸಮ್ಮೇಳನಗಳಲ್ಲಿ ಕಡ್ಡಾಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಈ ಮೂಲಕ ತಮ್ಮ ಕಲೆ ಪ್ರದರ್ಶಿಸಿ ಸಮ್ಮೇಳನಗಳು ಯಶಸ್ವಿಗೊಳಿಸಬೇಕು.ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಕರ್ಣಕುಮಾರ ಮಾತನಾಡಿ, ನಾಡಿನ ಹೆಸರಾಂತ ಕಲಾವಿದರನ್ನು ಹೊಂದಿರುವ ನಗರ ಹೃದಯ ಶ್ರೀಮಂತಿಕೆ ಮೆರೆದಿದೆ. ಮುಂದಿನ ದಿನಗಳಲ್ಲಿ ಇಲ್ಲಿ ನಮ್ಮ ಇಲಾಖೆಯಿಂದ ಪಾರಿಜಾತ ಸಮ್ಮೇಳನ ನಡೆಸಲು ಉದ್ದೇಶಿಸಿದ್ದೇವೆ. ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದ ಅವರು, ಇಂತಹ ಸಮ್ಮೇಳನದಲ್ಲಿ ಬಹಳಷ್ಟು ಕಲಾವಿದರು ಭಾಗವಹಿಸದಿರುವುದು ವಿಷಾದಕರ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಮಾತನಾಡಿ, ಕಲೆ ಉಳಿಯಲು ಇಂತಹ ಸಮ್ಮೇಳನಗಳನ್ನು ಮೇಲಿಂದ ಮೇಲೆ ನಡೆಸುವ ಅಗತ್ಯ ಇದೆ. ನಿಜವಾದ ಕಲಾವಿದರು ಇಂತಹ ಸಮ್ಮೇಳನಗಳಲ್ಲಿ ಸ್ವಯಂಪ್ರೇರಿತರಾಗಿ ಬಂದು ಭಾಗವಹಿಸಬೇಕು. ಸಮ್ಮೇಳನಗಳು ನಡೆವುದೇ ಕಲಾವಿದರ ಗೋಸ್ಕರ ಹೆಚ್ಚಿನ ಸಂಖ್ಯೆಯಲ್ಲಿ ಬರದೇ ಇರುವುದು ಖೇದಕರ ಎಂದರು.ಸರ್ಕಾರ ಕಲಾವಿದರ ಮಾಶಾಸನ ಕೊಡುವಾಗ ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಶೀಲಿಸಬೇಕು. ಸಮ್ಮೇಳನ ನಡೆಯುವಾಗ ಎಲ್ಲವನ್ನು ಬಿಟ್ಟು ಕಡ್ಡಾಯವಾಗಿ ಭಾಗವಹಿಸಲೇಕೆಂದು ಕಲಾವಿದರಿಗೆ ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಇದ್ದರು. ಮಂಜುಳಾ ಸಂಬಳದ ಅವರು ನಡೆಸಿಕೊಟ್ಟ ಸುಗಮ ಸಂಗೀತ, ಕುಮಾರ ಬಡಿಗೇರ ಅವರ ಶಾಸ್ತ್ರೀಯ ಸಂಗೀತ, ಭಾರ್ಗವಿ ಮೋರಟಗಿ ನೇತೃತ್ವದ ಅವರ ತಂಡ ಸಮೂಹ ನೃತ್ಯ ಜನಮನ ಸೆಳೆಯಿತು. ಎಂ.ಡಿ.ಆನಂದ ಅವರ ಜನಪದ ಗೀತೆ, ಶರಣ ಬಸವ ಶಾಸ್ತ್ರಿಗಳು ನಡೆಸಿದ ಗಮಕ ಕಥಾ ಕೀರ್ತನೆ, ಚನಮಲ್ಲಪ್ಪ ಕರಡಿಯವರ ಕರಡಿ ಮಜಲು, ಮುರೆಪ್ಪ ಬೆಳಗಲಿ ಅವರ ಗೊಂಬೆ ಕುಣಿತ, ಕೆಂಚಪ್ಪ ಬಡಿಗೇರ ಕೀಲು ಕುಣಿತ ರುದ್ರಯ್ಯ ರಾಚಯ್ಯ ಸಾಲಿಮಠ ಅವರ ಹಳ್ಳಿಯಿಂದ ದಿಲ್ಲಿಯವರೆಗೆ ನಾಟಕ ನೋಡುಗರನ್ನು ಗಮನ ಸೆಳೆಯಿತು. ಸ್ಥಳೀಯ ಕಲಾವಿದ ಯಮನಪ್ಪ ಗಾಡೀಕರವರ ಖನಿ ವಾದನ ಎಲ್ಲರೂ ಎದ್ದು ಕುಣಿಯುವ ಹಾಗೆ ಮಾಡಿತು.

ಪುರಸಭೆ ಅಧಿಕಾರಿಗಳಾದ ಸಿ.ಎಸ್.ಮಠಪತಿ, ಮುಖಂಡರಾದ ಶ್ರೀಶೈಲಪ್ಪ ಉಳ್ಳೆಗಡ್ಡಿ, ರಮೇಶ ಸಬಕಾಳೆ, ಬಿ.ಬಿ.ಕೌಜಲಗಿ, ವೀರೇಶ ಆಸಂಗಿ, ಶಿವಲಿಂಗ ಟಿಕರ, ಪಂಡಿತ ಬಡಿಗೇರ, ಮನು ಕರಡಿ, ನಿಜಾಮ ಅಲ್ಲಾಖಾನ, ಮಲ್ಲಪ್ಪಾ ಪಟ್ಟಣಶೆಟ್ಟಿ, ಗಂಗಪ್ಪಾ ಕರಡಿ ಸೇರಿ ಹಲವರು ಇದ್ದರು. ಶಿಕ್ಷಕ ಬಸವರಾಜ್ ಮೇಟಿ ನಿರೂಪಿಸಿದರು. ಜಿ.ಎಸ್.ಗೊಂಬಿ ವಂದಿಸಿದರು.

Share this article