ಮುದ್ರಣ ಮಾಧ್ಯಮದ ಮೇಲೆ ವಿಶ್ವಾಸ ಹೆಚ್ಚು: ಡಾ.ಎಚ್.ಬಿ.ಮಂಜುನಾಥ

KannadaprabhaNewsNetwork | Published : Jul 2, 2024 1:37 AM

ಸಾರಾಂಶ

21ನೇ ಶತಮಾತನದಲ್ಲಿ ಆಧುನಿಕ ದೃಶ್ಯ ಮಾಧ್ಯಮ ಎಷ್ಟೇ ಜನಪ್ರಿಯವಾದರೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಂದಿಲ್ಲ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಅಭಿಪ್ರಾಯಪಟ್ಟರು.

- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಕನ್ನಡಪ್ರಭ ವಾರ್ತೆ ದಾವಣಗೆರೆ

21ನೇ ಶತಮಾತನದಲ್ಲಿ ಆಧುನಿಕ ದೃಶ್ಯ ಮಾಧ್ಯಮ ಎಷ್ಟೇ ಜನಪ್ರಿಯವಾದರೂ ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಕುಂದಿಲ್ಲ ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ.ಮಂಜುನಾಥ ಅಭಿಪ್ರಾಯಪಟ್ಟರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಸೋಮವಾರ ಲಕ್ಷ್ಮಿ ವೃತ್ತದ ಬಳಿ ಇರುವ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ದೃಶ್ಯ ಮಾಧ್ಯಮಗಳು ಜನರನ್ನು ಆಕರ್ಷಿತರನ್ನಾಗಿ ಮಾಡಿವೆ. ಇದರಿಂದ ದೃಶ್ಯ ಮಾಧ್ಯಮಗಳ ಜನಪ್ರಿಯತೆ ಹೆಚ್ಚಿದೆ. ಆದರೂ ಮುದ್ರಣ ಮಾಧ್ಯಮದ ಮೇಲೆ ಜನರು ಇನ್ನೂ ವಿಶ್ವಾಸ ಇಟ್ಟುಕೊಂಡಿದ್ದಾರೆ. ಇದನ್ನು ಹೀಗೇ ಉಳಿಸಿಕೊಳ್ಳುವ ಸಂಕಲ್ಪ ಮಾಡುವ ಪವಿತ್ರ ದಿನವಿದು. ಜತೆಗೆ ಪತ್ರಿಕೆಯ ಆಕರ್ಷಣೆ ಅಲಂಕಾರಕ್ಕೆ ಆದ್ಯತೆ ಕೊಡುವುದಕ್ಕಿಂತ ವರದಿಗಳ ಅಂತಃಸತ್ವದ ಕಡೆ ಹೆಚ್ಚು ಗಮನ ಕೊಡಬೇಕು. ಇದರಿಂದ ವಿಶ್ವಾಸಾರ್ಹತೆ ಮತ್ತಷ್ಟು ವೃದ್ಧಿಸುತ್ತದೆ. ರಾಜಕೀಯ ವ್ಯವಸ್ಥೆಯು ಕರ್ತವ್ಯ ವಿಮುಖವಾಗದಂತೆ ಪತ್ರಿಕೆಗಳು ಸದಾ ಎಚ್ಚರಿಸುತ್ತವೆ. ಆದ್ದರಿಂದ ಹಗಲಿರುಳು ಸಮಾಜಕ್ಕಾಗಿ ದುಡಿಯುವ ಪತ್ರಕರ್ತರಿಗೆ ಶುಭಾಶಯಗಳನ್ನು ಹೇಳುತ್ತೇನೆ ಎಂದರು.

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ನಗರ ಪಾಲಿಕೆಯ ಸಾರ್ವಜನಿಕ ಆದೇಶಗಳು ಹಾಗೂ ಸೂಚನೆಗಳು ನಾಗರಿಕರಿಗೆ ಸರಿಯಾಗಿ ತಲುಪುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರವಾಗಿದೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಅಧ್ಯಕ್ಷತೆ ವಹಿಸಿ, ಇಂದು ಹರ್ಡೇಕರ್ ಮಂಜಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಪತ್ರಿಕಾ ದಿನಾಚರಣೆ ಆಚರಿಸಿದ್ದೇವೆ. ಈ ತಿಂಗಳ ಅಂತ್ಯದೊಳಗೆ ವಿಶೇಷವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಖಜಾಂಚಿ ಬದರಿನಾಥ್ ಎನ್.ವಿ, ಹಿರಿಯ ಪತ್ರಕರ್ತರಾದ ಬಕ್ಕೇಶ್ ನಾಗನೂರ್, ಎ.ಎಲ್.ತಾರಾನಾಥ, ಮಂಜುನಾಥ ಗೌರಕ್ಕಳವರ್, ಮಂಜುನಾಥ ಕಾಡಜ್ಜಿ, ಓ.ಎನ್.ಸಿದ್ದಯ್ಯ ಒಡೆಯರ್, ನಿಂಗೋಜಿರಾವ್, ಚನ್ನವೀರಯ್ಯ, ಚನ್ನಬಸವ ಶೀಲವಂತ್, ಸೋಮಶೇಖರ, ವೇದಮೂರ್ತಿ, ಮಹಮ್ಮದ್ ರಫಿ, ಅರ್.ಎಸ್. ತಿಪ್ಪೇಸ್ವಾಮಿ, ಎನ್.ಆರ್. ರವಿ, ವಿ.ಬಿ.ಅನಿಲ್ ಕುಮಾರ್, ರಾಜಶೇಖರ, ಜೈಮುನಿ, ಇಂದುಧರ ನಿಶಾನಿಮಠ್, ಹನುಮಂತಪ್ಪ, ನರೇಂದ್ರ, ನಿಂಗರಾಜ್, ದಾನೇಶ್ ಮತ್ತಿತರರಿದ್ದರು.----1ಕೆಡಿವಿಜಿ31

ದಾವಣಗೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.

----

1ಕೆಡಿವಿಜಿ32

ದಾವಣಗೆರೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಹಾಪೌರರಾದ ಬಿ.ಎಚ್.ವಿನಾಯಕ ಪೈಲ್ವಾನ್ ಹರ್ಡೇಕರ್ ಮಂಜಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

Share this article