ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನಿಂದ ನೂತನವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಎಚ್.ಸಿ.ಪುಟ್ಟಸ್ವಾಮೀಗೌಡ, ವಿಜಯೇಂದ್ರಮೂರ್ತಿ ಹಾಗೂ ಕರ್ನಾಟಕ ಸರ್ಕಾರದಿಂದ ನೀಡಲಾದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ, ಟಿಎಪಿಸಿಎಂಎಸ್ ನಿರ್ದೇಶಕ ವಿ.ಎಸ್.ನಿಂಗೇಗೌಡ ಅವರನ್ನು ಟಿಎಪಿಸಿಎಂಎಸ್ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್ ಮಾತನಾಡಿ, ಎಚ್.ಡಿ.ಪುಟ್ಟಸ್ವಾಮೀಗೌಡ, ವಿಜಯೇಂದ್ರಮೂರ್ತಿ ಹಾಗೂ ವಿ.ಎಸ್.ನಿಂಗೇಗೌಡ ಅವರನ್ನು ಆಡಳಿತ ಮಂಡಳಿಯಿಂದ ಅಭಿನಂದಿಸಲಾಗಿದೆ. ನೂತನ ನಿರ್ದೇಶಕರು ಮುಂದಿನ ದಿನಗಳಲ್ಲಿ ತಾಲೂಕಿನ ಸಹಕಾರ ಸಂಘ ಅಭಿವೃದ್ಧಿಗೆ ಶ್ರಮಿಸಬೇಕು. ಜೊತೆಗೆ ಟಿಎಪಿಸಿಎಂಎಸ್ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಟಿಎಪಿಸಿಎಂಎಸ್ ಉಪಾಧ್ಯಕ್ಷೆ ಪ್ರೇಮ ಪುಟ್ಟೇಗೌಡ, ನಿರ್ದೇಶಕರಾದ ಸಿ.ಎಸ್.ಗೋಪಾಲಗೌಡ, ಪಿ.ಎಲ್.ಆದರ್ಶ, ಸಿ.ಎಂ.ಕಿರಣ್,ಎಂ.ಸ್ವಾಮಿ, ಎ.ಕೃಷ್ಣ, ಎಚ್.ಎನ್.ಚಿಟ್ಟಿಬಾಬು, ಹಾಳಯ್ಯ,ಸುನಂದಮ್ಮ, ಸಹಕಾರ ಇಲಾಖೆಯ ಎ.ಆರ್. ನಾಗಭೋಷಣ್ , ಮುಖಂಡ ಅರಳಕುಪ್ಪೆ ಮಹದೇವು, ಕಾರ್ಯದರ್ಶಿ ನವೀನ್ ಸೇರಿದಂತೆ ಅಧಿಕಾರ ವರ್ಗ, ಸಿಬ್ಬಂದಿ ಹಾಜರಿದ್ದರು.ವಸತಿ ಶಾಲೆ ವಿದ್ಯಾರ್ಥಿನಿಯರ ಸಾಧನೆ
ಪಾಂಡವಪುರ: ಮೇಲುಕೋಟೆ ಹೋಬಳಿಯ ಮಹದೇಶ್ವರಪುರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರು ಪ್ರತಿಭಾ ಕಾರಂಜಿಯಲ್ಲಿ ವಿಜೇತರಾಗಿದ್ದಾರೆ.ತಾಲೂಕಿನಲ್ಲಿ ಎಲೆಕೆರೆ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಖವಾಲಿ, ಘಜಲ್, ಕವನ ವಾಚನ, ಹಿಂದಿ ಕಂಠಪಾಠ, ಜನಪದ ಗೀತೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಪ್ರೌಢಶಾಲಾ ವಿಭಾಗದ ಕ್ವಿಜ್‌ನಲ್ಲಿ ದ್ವಿತೀಯ ಸ್ಥಾನ ಹಾಗೂ ಭರತನಾಟ್ಯ, ಚರ್ಚಾ ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಈ ಎಲ್ಲಾ ಪ್ರತಿಭಾವಂತರಿಗೂ ವಸತಿ ಶಾಲೆಯ ಪ್ರಾಂಶುಪಾಲರಾದ ಎಂ.ಎಸ್.ದಿಲೀಪ್‌ಕುಮಾರ್ ಅಭಿನಂದಿಸಿದರು.ಚಿಕ್ಕಅಂಕನಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರಶ್ರೀರಂಗಪಟ್ಟಣ:
ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಪಂಗೆ ಪ್ರತಿಷ್ಠಿತ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಡಿ.1ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗ್ರಾಪಂನ ಉತ್ತಮ ಕಾರ್ಯನಿರ್ವಹಣೆ ಮತ್ತು ಪ್ರಗತಿಪರ ಸಾಧನೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮತ್ತು 5ನೇ ಹಣಕಾಸು ಆಯೋಗದ ಅಧ್ಯಕ್ಷ ಎಂ.ಆರ್.ನಾರಾಯಣಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.ಗ್ರಾಪಂ ಪರವಾಗಿ ಪಿಡಿಒ ಗರಕಹಳ್ಳಿ ದೇವೇಗೌಡ ಕೆ., ಅಧ್ಯಕ್ಷೆ ಚನ್ನಮ್ಮ ಹಾಗೂ ಮಾಜಿ ಅಧ್ಯಕ್ಷ ರಾಮು ಪುರಸ್ಕಾರ ಸ್ವೀಕರಿಸಿದರು. ಗ್ರಾಮದ ಸಮಗ್ರ ಅಭಿವೃದ್ಧಿ, ಪಂಚಾಯತ್ ವ್ಯಾಪ್ತಿಯಲ್ಲಿ ಉತ್ತಮ ಆಡಳಿತ ಹಾಗೂ ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ತಿಳಿಸಿದ್ದಾರೆ.