ಕನ್ನಡಪ್ರಭ ವಾರ್ತೆ ಭಾರತೀನಗರ
ಶಾಲೆ ಸಂಸ್ಥಾಪಕ ಅಧ್ಯಕ್ಷ ಎ.ಟಿ.ಬಲ್ಲೇಗೌಡ ಮಾತನಾಡಿ, ತಮ್ಮ ಜೀವ ಪಣಕಿಟ್ಟು ರೋಗಿಗಳನ್ನು ಉಳಿಸುವಲ್ಲಿ ವೈದ್ಯರು ಹೋರಾಟ ನಡೆಸಿದ್ದಾರೆ. ವೈದ್ಯರಿಗೆ ಎಷ್ಟು ಬಾರಿ ಕೃತಜ್ಞತೆ ಸಲ್ಲಿಸಿದರೂ ಸಾಲದು. ಹಾಗಾಗಿ ವಿಶ್ವವೈದ್ಯರ ದಿನಾಚರಣೆಯ ಅಂಗವಾಗಿ ಅಭಿನಂದಿಸಲಾಗಿದೆ ಎಂದರು.
ಈ ವೇಳೆ ವಿದ್ಯಾರ್ಥಿಗಳು ವೈದ್ಯರಿಗೆ ಸಿಹಿ ವಿತರಿಸಿದರು. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ್, ಡಾ.ಅರ್ಜುನ್, ಡಾ.ರಮ್ಯ, ಡಾ.ಮಧುರ, ಡಾ.ಸೌಮ್ಯ, ಡಾ.ರವೀಶ್ ಸೇರಿದಂತೆ ಹಲವರಿಗೆ ಹೂಗುಚ್ಚ ಮತ್ತು ಅಭಿನಂದನಾ ಪತ್ರ ನೀಡಿ ಗೌರವಿಸಿದರು.ಕೇಂಬ್ರಿಡ್ಜ್ ಶಾಲೆ ಟ್ರಸ್ಟಿ ನಾಗರತ್ನಬಲ್ಲೇಗೌಡ, ಮುಖ್ಯಶಿಕ್ಷಕಿ ಆಯಶ, ಶಿಕ್ಷಕರಾದ, ನವೀನ್, ಗೌರಮ್ಮ, ವಿಶ್ವ, ತಾರಾ, ಕರುಣಾಮೂರ್ತಿ, ನಟರಾಜು, ನಿರ್ಮಲ, ಲೀಲಾವತಿ, ದಿವ್ಯ, ಮಂಜುನಾಥ್, ಗೌತಮಿ, ನೇತ್ರಾವತಿ, ವಿಶಾಲಾಕ್ಷಿ, ಆಶಾ, ದಿವ್ಯ, ದಿನೇಶ್, ರಾಣಿ, ಸಿದ್ದರಾಮು ಇದ್ದರು.
ಬನ್ನಿಮಂಟಪ ಬಳಿ ರಾಷ್ಟ್ರೀಯ ಹೆದ್ದಾರಿಗೆ ಉಬ್ಬು, ಟ್ರಾಫಿಕ್ ಸಿಗ್ನಲ್ ಅಳವಡಿಸಲು ಆಗ್ರಹಿಸಿ ಪ್ರತಿಭಟನೆಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಐತಿಹಾಸಿಕ ಬನ್ನಿಮಂಟಪ ಬಳಿಯ ಮೈಸೂರು- ಬೆಂಗಳೂರು ಹೆದ್ದಾರಿಗೆ ರಸ್ತೆ ಉಬ್ಬು ಹಾಗೂ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಆಗ್ರಹಿಸಿ ತಾಲೂಕಿನ ಕಿರಂಗೂರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ರಾಷ್ಟ್ರಪತಿ ವಿಜೇತ ಡಾ.ರಾಘವೇಂದ್ರ ಮಾತನಾಡಿ, ಕಿರಂಗೂರು ಗ್ರಾಮದ ಐತಿಹಾಸಿಕ ಬನ್ನಿಮಂಟಪ ಬಳಿ ದಿನೇ ದಿನೇ ಅಪಘಾತಗಳು ಸಂಭವಿಸಿ ಸಾವು ನೋವು ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಾಂಡವಪುರ- ಬೆಂಗಳೂರು- ಮೈಸೂರು- ಶ್ರೀರಂಗಪಟ್ಟಣ ಸಂಪರ್ಕಿಸುವ ಈ ರಸ್ತೆಯು ಅವೈಜ್ಞಾನಿಕವಾಗಿದೆ. ಯಾವುದೇ ಟ್ರಾಫಿಕ್ ಸಿಗ್ನಲ್ ಅಥವಾ ರಸ್ತೆ ಹುಬ್ಬುಗಳಿಲ್ಲದ ಕಾರಣ ಬಹುತೇಕ ವಾಹನಗಳು ವೇಗವಾಗಿ ಹಾದು ಹೋಗುವುದರಿಂದ ಅಪಘಾತಗಳು ಸಂಭವಿಸುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆಗೆ ಉಬ್ಬು ಹಾಗೂ ಟ್ರಾಫಿಕ್ ಸಿಗ್ನಲ್ ಅವಳಡಿಸುವ ಮೂಲಕ ಜನರ ಜೀವ ಉಳಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಕೆಂಪೇಗೌಡ ಯುವಶಕ್ತಿ ವೇದಿಕೆ ಅಧ್ಯಕ್ಷ ಕಾಳೇನಹಳ್ಳಿ ಮಹೇಶ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಜಗದೀಶ್, ಲೋಕೇಶ್, ದಿವಿತ್, ವಿನಯ್, ಶ್ರೀಧರ್, ಗುರುಪ್ರಸಾದ್, ಸತೀಶ್ ಸೇರಿದಂತೆ ಇತರರು ಇದ್ದರು.