ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಿವೇಶನ, ಜನರಿಗೆ ಕುಡಿಯುವ ನೀರು ಪೂರೈಸುವ ಕೆಲಸಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಮಾಡುತ್ತೇವೆ. ನೀವೆಲ್ಲರೂ ಸೋಲಿನಿಂದ ಎದೆಗುಂದದೆ ಜನರ ವಿಶ್ವಾಸವನ್ನು ಗಳಿಸುವ ಕೆಲಸ ಮಾಡಿ ಎಂದರು.
ಮಂಚನಬೆಲೆ ಜಲಾಶಯಕ್ಕೆ ನೀರು ತಂದಿದ್ದು, ಅರ್ಕಾವತಿ ನದಿಗಳಿಗೆ ಸೇತುವೆ, ಚೆಕ್ ಡ್ಯಾಂ ನಿರ್ಮಾಣಕ್ಕೆ ಹಣ ತಂದಿದ್ದು, ಕೈಲಾಂಚ ಕೆರೆಗಳಿಗೆ ನೀರು ತುಂಬಿಸಿದ್ದು, ಕಾಳೇಗೌಡನದೊಡ್ಡಿ ಯೋಜನೆ ಸಾಕಾರ ಮಾಡಿದ್ದು, ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದು ಕ್ಷೇತ್ರದ ಜನರಿಗಾಗಿಯೇ ಹೊರತು ನನ್ನ ವೈಯಕ್ತಿಕ ಲಾಭಕ್ಕಲ್ಲ ಎಂದು ಸುರೇಶ್ ಹೇಳಿದರು.ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಈ ಸೋಲು ಡಿ.ಕೆ.ಸುರೇಶ್ ಸೋಲಲ್ಲ, ಅದು ನಮ್ಮೆಲ್ಲರ ಸೋಲಾಗಿದೆ. ಡಿ.ಕೆ.ಸುರೇಶ್ ಅವರು ಅಭಿವೃದ್ಧಿಯ ಕನಸುಗಾರರಾಗಿ, ಕಾರ್ಯಕರ್ತರ ಆಶಾಕಿರಣವಾಗಿದ್ದವರು. ಕ್ಷೇತ್ರದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ಆರೋಗ್ಯ, ಶಿಕ್ಷಣ, ವಸತಿ, ಕೃಷಿ ಕ್ಷೇತ್ರಗಳಲ್ಲಿ ಹೊಸ ಬದಲಾವಣೆ ತಂದು ಜನರ ಬದುಕನ್ನು ಹಸನು ಮಾಡಲು ಮುಂದಾದವರು. ಆದರೆ, ಜನರೇ ಅವರ ಕೈ ಹಿಡಿಯಲಿಲ್ಲ ಎಂಬ ನೋವಿದೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಸೈಯದ್ ಜಿಯಾವುಲ್ಲಾ ಮಾತನಾಡಿ, ನರೇಗಾದಂತಹ ಹತ್ತಾರು ಅಭಿವೃದ್ಧಿ ಶಾಶ್ವತ ಕೆಲಸಗಳು, ಕೊರೋನಾ ಸಂಕಷ್ಟದಲ್ಲಿ ಜನರಿಗೆ ಆರೋಗ್ಯ ಸೇವೆ ಮತ್ತು ಮೂಲಭೂತ ಸೌಕರ್ಯಗಳನ್ನು ಸಾಕಾರಗೊಳಿಸಿದ ಡಿ.ಕೆ.ಸುರೇಶ್ ಅವರಿಗೆ ಮತದಾರರು ಚುನಾವಣೆಯಲ್ಲಿ ತಿರಸ್ಕರಿಸಿದ್ದು ಏಕೆ ಎಂಬ ಪ್ರಶ್ನೆ ನಮ್ಮೆಲ್ಲರ ಮುಂದಿದೆ. ನಿಮ್ಮ ಜೊತೆ ನಾವೆಲ್ಲರೂ ಇದ್ದೇವೆ ಎಂದರು.
ಕೆ.ರಮೇಶ್, ಪಿ.ನಾಗರಾಜು, ಹರೀಶ್ ಕುಮಾರ್, ರಾಜಶೇಖರ್, ಸಿಎನ್ ಆರ್ ವೆಂಕಟೇಶ್, ವಿಜಯಕುಮಾರಿ, ಅನಿಲ್ ಜೋಗಿಂದರ್, ಶ್ರೀನಿವಾಸ್, ವಸೀಂ, ಸಮದ್ ಮತ್ತಿತರರು ಉಪಸ್ಥಿತರಿದ್ದರು.