ಒಬಿಸಿ ಮೀಸಲು ಕಸಿದು ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್‌ ಅಜೆಂಡಾ : ವೀರಣ್ಣ ಚರಂತಿಮಠ

KannadaprabhaNewsNetwork |  
Published : Apr 29, 2024, 01:40 AM ISTUpdated : Apr 29, 2024, 10:14 AM IST
ವಿದ್ಯಾಗಿರಿಯ 32ನೇ ವಾರ್ಡ್‌ನ  11 ರಿಂದ 16ನೇ ರಸ್ತೆಯಲ್ಲಿ  ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ: ಎಸ್ಸಿ, ಎಸ್ಟಿ ಮತ್ತು ಒಬಿಸಿಯವರ ಹಕ್ಕುಗಳನ್ನು ಕಸಿದು ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್‌ ಹಾಗೂ ಇಂಡಿಯಾ ಮೈತ್ರಿಕೂಟದ ಗುಪ್ತ ಅಜೆಂಡಾ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಆರೋಪಿಸಿದರು.

 ಬಾಗಲಕೋಟೆ :  ಎಸ್ಸಿ, ಎಸ್ಟಿ ಮತ್ತು ಒಬಿಸಿಯವರ ಹಕ್ಕುಗಳನ್ನು ಕಸಿದು ಮುಸ್ಲಿಮರಿಗೆ ನೀಡುವುದು ಕಾಂಗ್ರೆಸ್‌ ಹಾಗೂ ಇಂಡಿಯಾ ಮೈತ್ರಿಕೂಟದ ಗುಪ್ತ ಅಜೆಂಡಾ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಆರೋಪಿಸಿದರು.

ನಗರದ ವಿದ್ಯಾಗಿರಿಯಲ್ಲಿ ಶನಿವಾರ ಲೋಕಸಭಾ ಚುನಾವಣೆ ಪ್ರಚಾರದ ನಿಮಿತ್ತ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.

ನರೇಂದ್ರ ಮೋದಿ ಬಡವರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಇದೆ ಎಂದು ಹೇಳಿದರೆ, ಕಾಂಗ್ರೆಸ್‌ ಹಾಗೂ ಇಂಡಿಯಾ ಮೈತ್ರಿಕೂಟ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳುತ್ತಿರುವ ಉದ್ದೇಶವೇನು ?, ಕಾಂಗ್ರೆಸ್‌ ಎಸ್ಸಿ,ಎಸ್ಟಿ ಮತ್ತು ಒಬಿಸಿಯನ್ನು ದ್ವೇಷಿಸುತ್ತಿದೆ. ಅವರ ಪ್ರಣಾಳಿಕೆಯಲ್ಲಿಯೂ ತುಷ್ಟೀಕರಣದ ರಾಜಕಾರಣ ಸ್ಪಷ್ಟವಾಗಿ ಗೋಚರಿಸುತ್ತಿದೆ, ಮುಸ್ಲಿಂ ಸಮುದಾಯಕ್ಕೆ ಒಬಿಸಿ ಮಿಸಲಾತಿ ಕಲ್ಪಿಸಿರುವರುವುದು ದುರದೃಷ್ಟಕರವಾಗಿದ್ದು, ಮುಸ್ಲಿಂ ಸಮುದಾಯಕ್ಕೆ ಒಬಿಸಿ ಮಿಸಲಾತಿ ಕಲ್ಪಿಸಿರುವ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸಮನ್ಸ್ ಕಳಿಸಿರುವ ಬಗ್ಗೆ ನಿನ್ನೆಯ ಪತ್ರಿಕೆಗಳಲ್ಲಿ ವರಿದಿಯಾಗಿದೆ, ಈ ಕುರಿತು ಜನರು ಎಚ್ಚರದಿಂದರಬೇಕು, ಭಾರತದಲ್ಲಿ ಎಲ್ಲ ಧರ್ಮಿಯರು ಭಾವ್ಯಕ್ಯತೆಯಿಂದ ಜೀವನ ನಡೆಸಿದ್ದು, ಎಲ್ಲ ವರ್ಗಗಳ ಹಿತ ಕಾಯೋದು ಸರ್ಕಾರಗಳ ಜವಾಬ್ದಾರಿ ಎಂದರು.

ಸಂವಿಧಾನದ ಮೂಲ ಆಶಯದಂತೆ ಸರ್ವರಿಗೂ ಸಮಬಾಳು,ಸರ್ವರಿಗೂ ಸಮಪಾಲು ಎಂಬ ತತ್ವದಲ್ಲಿ ಬಿಜೆಪಿ ಮುನ್ನೆಡೆದಿದ್ದು, ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಗುತ್ತಿದ್ದು, ದೇಶದ ಹಿತವೇ ಎಲ್ಲರ ಹಿತವಾಗಿದೆ. ಪ್ರಧಾನಿ ಮೋದಿಯನ್ನು ಬೆಂಬಲಿಸಿ ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಪಾದಯಾತ್ರೆಯಲ್ಲಿ ಬಸವರಾಜ ಯಂಕಂಚಿ, ಲಕ್ಷ್ಮೀ ನಾರಾಯಣ ಕಾಸಟ್, ಮಹೇಶ ಕಕರೆಡ್ಡಿ, ಈರಣ್ಣ ಅಥಣಿ, ಮಹಾಂತೇಶ ಶೆಟ್ಟರ, ರುದ್ರು ಅಕ್ಕಿಮರಡಿ, ಮಹೇಶ ಅಂಗಡಿ, ಗುರುಬಸವ ಸೂಳಿಭಾವಿ, ಶಂಕರಣ್ಣ ಯಾದವಾಡ, ಪಂಡಿತ ಅರೆಬ್ಬಿ, ಎಂ.ಎಂ.ಹಂಡಿ, ಬಸವರಾಜ ಪರ್ವತಿಮಠ, ಮುತ್ತಣ್ಣ ಬೆಣ್ಣೂರ, ನಗರಸಭೆ ಸದಸ್ಯೆ ಭುವನೇಶ್ವರಿ ಕುಪ್ಪಸ್ತ, ಶೋಭಾ ರಾವ್, ಭಾಗ್ಯಶ್ರೀ ಹಂಡಿ, ಯಮುನಾ ಜೋಷಿ, ಭಾರತಿ ಪಾಟೀಲ, ದ್ಯಾಮಣ್ಣ ಜಲಗೇರಿ, ಸುರೇಶ ವಸ್ತ್ರದ, ಸುರೇಂದ್ರ ಜೋಷಿ, ಬನಪ್ಪ ಮಡಿವಾಳರ, ಪ್ರಕಾಶ ಹಾಲವಾರ, ಶಿವಾನಂದ ಕುಂಬಾರ, ಲಕ್ಷ್ಮಣ ಹಡಪದ, ಸೇರಿದಂತೆ ನಗರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಟಲ್‌ ಬಿಹಾರಿ ವಾಜಪೇಯಿ ನವಭಾರತದ ಶಿಲ್ಪಿ: ವಿಪ ಸದಸ್ಯ ಸಿ.ಟಿ. ರವಿ
ಸತ್ಕರ್ಮ,ಸದ್ವಿಚಾರದಿಂದ ಮೋಕ್ಷ: ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ