ಕನ್ನಡಪ್ರಭ ವಾರ್ತೆ ಆಲಮೇಲ
ಕಳೆದ ಒಂದೂವರೆ ತಿಂಗಳಿನಿಂದ ಕುತೂಹಲ ಕೆರಳಿಸಿದ್ದ ಆಲಮೇಲ ಪಟ್ಟಣ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಬಿಜೆಪಿ ದೋಸ್ತಿಯಾಗುವ ಮೂಲಕ ಸ್ಥಾನಗಳನ್ನು ಹಂಚಿಕೊಂಡಿವೆ. ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದ್ದು, ಉಪಾಧ್ಯಕ್ಷ ಸ್ಥಾನ ಬಿಜೆಪಿಯ ಪಾಲಾಗಿದೆ. ಮಂಗಳವಾರ ಪಟ್ಟಣದ ಪಟ್ಟಣ ಪಂಚಾಯತಿ ಕಚೇರಿಯಲ್ಲಿ 11ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಸಾಧಿಕ್ ಸುಂಬಡ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ 4ನೇ ವಾರ್ಡ್ ಸದಸ್ಯೆ ಸುಮಾ ಕತ್ತಿ ಮಾತ್ರ ನಾಮಪತ್ರ ಸಲ್ಲಿಸಿದರು. ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವರನ್ನೇ ಅವಿರೋಧವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಚುನಾವಣಾಧಿಕಾರಿ ಆಲಮೇಲ ತಹಸೀಲ್ದಾರ್ ಕೆ.ವಿಜಯಕುಮಾರ ಘೋಷಿಸಿದರು.ಒಟ್ಟು 19 ಜನ ಸದಸ್ಯ ಬಲದ ಆಲಮೇಲ ಪಟ್ಟಣ ಪಂಚಾಯತಿಯಲ್ಲಿ 18 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ವಾರ್ಡ್ 5ರ ಪಕ್ಷೇತರ ಸದಸ್ಯ ಗೈರಾಗಿದ್ದರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬ ಮೀಸಲಾತಿ ಬಂದಿತ್ತು. ಆಲಮೇಲ ಪಪಂ ಒಟ್ಟು 19 ಜನ ಸದಸ್ಯರ ಪೈಕಿ 9 ಬಿಜೆಪಿ, 7 ಕಾಂಗ್ರೆಸ್ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಈ ಬಾರಿ ಬದ್ದ ರಾಜಕೀಯ ವೈರಿಗಳು ಒಂದಾಗಿ ಜನರಲ್ಲಿ ಅಚ್ಚರಿಯನ್ನು ಮೂಡಿಸಿದ್ದಾರೆ.ಪಟ್ಟಣದ ಹಿರಿಯರ, ಮುಖಂಡರ ಹಾಗೂ ಜನಪ್ರತಿನಿಧಿಗಳ ಆಶಯದಂತೆ ಅಭಿವೃದ್ಧಿಗಾಗಿ ಪಕ್ಷ ಭೇದ ಮರೆತು ಶಾಸಕ ಅಶೋಕ ಮನಗೂಳಿ ಅವರ ನೇತೃತ್ವದಲ್ಲಿ ಎಲ್ಲ ಸದಸ್ಯರ ಒಮ್ಮತದ ಮೇರೆಗೆ ಅಧಿಕಾರ ಹಿಡಿದಿದ್ದಾಗಿ ಕಾಂಗ್ರೆಸ್ ಸದಸ್ಯ ಅಶೋಕ ಕೊಳಾರಿ ತಿಳಿಸಿದರು.ನೂತನ ಅಧ್ಯಕ್ಷ ಸಾಧಿಕ ಸುಂಬಡ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಅವಿರೋಧವಾಗಿ ಆಯ್ಕೆ ಮಾಡಿದ್ದಾರ. ಎಲ್ಲ ಪಕ್ಷದವರನ್ನು ವಿಶ್ವಾಸ ತೆಗೆದುಕೊಂಡು ಶಾಸಕ ಅಶೋಕ ಮನಗೂಳಿ ಮಾರ್ಗದರ್ಶನದಲ್ಲಿ ಅಭಿವೃದ್ಧಿಗೆ ಶ್ರಮಿಸುವೆ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಆಭಾರಿಯಾಗಿದ್ದಾಗಿ ಹೇಳಿದರು.ಸಂಭ್ರಮಾಚರಣೆ:ಉಪಾಧ್ಯಕ್ಷರ ಬೆಂಬಲಿಗರು ಗುಲಾಲ ಎರಚಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾಧಿಕಾರಿ ಕೆ.ವಿಜಯಕುಮಾರ, ಪ.ಪಂ ಮುಖ್ಯಾಧಿಕಾರಿ ಸುರೇಶ ನಾಯಕ, ಕಂದಾಯ ಅಧಿಕಾರಿ ಎಂ.ಎ.ಅತ್ತಾರ, ಬಿ.ಜಿ.ನಾರಾಯಣಕರ, ಸಿಪಿಐ ನಾನಾಗೌಡ ಪೋಲೀಸಪಾಟೀಲ, ಪಿಎಸ್ಐ ಅರವಿಂದ ಅಂಗಡಿ, ಸಿಂದಗಿ ಪಿಎಸ್ಐ ಆಶೀಫ್ ಮುಶಾಫೀರೆ, ಕಲಕೇರಿ ಪಿಎಸ್ಐ ಸುರೇಶ ಮಂಟೂರ, ಪಪಂ ಸದಸ್ಯರಾದ ಸಂಜೀವಕುಮಾರ ಎಂಟಮಾನ, ಬಿಸ್ಮಿಲ್ಲಾ ಮೈಬೂಬ ಮಸಳಿ, ವಿಜಯಲಕ್ಷ್ಮಿ ಸಂತೋಷ ಜರಕರ, ಹನುಮಂತ ಹೂಗಾರ್, ರೇಣುಕಾ ಶ್ರೀಶೈಲ ಭೋವಿ, ಜುಬೇದಾ ಸುಂಬಡ, ಅಶೋಕ ಕೊಳಾರಿ, ಶಾರದಾ ಈರಣ್ಣ ಕಲ್ಲೂರ, ಶ್ರೀಶೈಲಸಿಂಗ್ ರಜಪೂತ, ಭಾಗ್ಯವಂತ ಆಲಮೇಲಕರ, ಪ್ರೇಮಾ ಬೊಮ್ಮನಹಳ್ಳಿ, ಯಲ್ಲಮ್ಮ ನಾಯ್ಕೋಡಿ, ಮುಕ್ತಾಬಾಯಿ ನಾರಾಯಣಕರ, ರಾಹುಲ್ ಯಂಟಮಾನ, ಚಂದ್ರಕಾಂತ ಕಾಂಬಳೆ, ಚಂದ್ರಶೇಖರ ಹಳಿಮನಿ, ಜಿಪಂ ಮಾಜಿ ಸದಸ್ಯ ಬಿ.ಆರ್.ಎಂಟಮಾನ, ಸೋಮು ಮೇಲಿನಮನಿ, ವಹಾಬ್ ಸುಂಬಡ, ಶಶಿ ಗಣಿಯಾರ, ಮಹಿಬೂಬ್ ಮುಲ್ಲಾ, ಬಾಬು ಕೊತ್ತಂಬರಿ ಮುಂತಾದವರು ಇದ್ದರು.ಕೋಟ್‌ಪ.ಪಂನ ಪಕ್ಷೇತರ ಸದಸ್ಯರು ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವ ನಿರೀಕ್ಷೆಯಲ್ಲಿದ್ದೇವು. ಆದರೆ ಅವರು ಬೆಂಬಲಿಸದ ಕಾರಣ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಆದರೆ, ನಮ್ಮ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ.ರಮೇಶ ಭೂಸನೂರ, ಮಾಜಿ ಶಾಸಕಕೋಟ್‌ಆಲಮೇಲ ಪಟ್ಟಣ ನೂತನ ತಾಲೂಕಾಗಿದ್ದು ಮಾದರಿ ಪಟ್ಟಣವನ್ನಾಗಿ ಮಾಡುವುದು ನನ್ನ ಉದ್ದೇಶ. ಚುನಾವಣೆಯಲ್ಲಿ ಹೀಗಾಗಿ ಪಕ್ಷ ಭೇದ ಮರೆತು ಕಾಂಗ್ರೆಸ್‌ಗೆ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪಟ್ಟಣದ ಉನ್ನತಿಗಾಗಿ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು.ಅಶೋಕ ಮನಗೂಳಿ, ಸಿಂದಗಿ ಶಾಸಕ