ಹೊಸಕೋಟೆ: ಮೇ 25ರಂದು ನಡೆಯಲಿರುವ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಗೆ ಹೊಸಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಬಿ.ವಿ.ಸತೀಶ್‌ಗೌಡ ಹಾಗೂ ಪೂರ್ವ ತಾಲೂಕಿನ ಅಭ್ಯರ್ಥಿಯಾಗಿ ಕೆಎಂಎಂ ಮಂಜುನಾಥ್ ನಾಮಪತ್ರ ಸಲ್ಲಿಸಿದರು.
ಬೆಂಗಳೂರಿನ ಡೇರಿ ಸರ್ಕಲ್ ಬಳಿ ಇರುವ ಬಮುಲ್ ಕೇಂದ್ರ ಕಚೇರಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಬಿ.ವಿ.ಸತೀಶ್‌ಗೌಡರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಸೂಲಿಬೆಲೆ ಎಸ್‌ಎಫ್‌ಸಿಎಸ್ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದು, ಈಗ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಹೊಸಕೋಟೆ ತಾಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಬಿ.ವಿ.ಸತೀಶ್‌ಗೌಡರ ಸೇವೆ ಗುರುತಿಸಿ ಅವರಿಗೆ ಮತ ಹಾಕಬೇಕು ಎಂದು ಹೇಳಿದರು.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಬಿ.ವಿ.ಸತೀಶ್ ಗೌಡ ಮಾತನಾಡಿ, ಹೊಸಕೋಟೆ ತಾಲೂಕಿನಲ್ಲಿ ದಶಕಗಳಿಂದ ಮಾಜಿ ಸಂಸದ ಬಚ್ಚೇಗೌಡರು ಸಹಕಾರ ಕ್ಷೇತ್ರವನ್ನು ಉತ್ತಮವಾಗಿ ಕಟ್ಟಿ ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಜೊತೆಗೆ ತಾಲೂಕಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೂ ಅವಿರತ ಶ್ರಮಿಸಿದ್ದಾರೆ. ಬಚ್ಚೇಗೌಡರ ಪ್ರೇರಣೆಯೊಂದಿಗೆ ತಾಲೂಕಿನಲ್ಲಿ ಅವರು ಬುನಾದಿ ಹಾಕಿದ ಸಹಕಾರ ಕ್ಷೇತ್ರದ ಜೊತೆಗೆ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗೆ ಶ್ರಮಿಸಲು ನನ್ನನ್ನ ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಪೂಜೇನ ಅಗ್ರಹಾರ ಕೃಷ್ಣಮೂರ್ತಿ, ನಿರ್ದೇಶಕರಾದ ಕೋಡಿಹಳ್ಳಿ ಸುರೇಶ್, ಬಾಬುರೆಡ್ಡಿ, ಹೊಸಕೋಟೆ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಬೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯರಾದ ಡಾ.ಎಚ್.ಎಂ.ಸುಬ್ಬರಾಜು, ಕೊರಳೂರು ಸುರೇಶ್, ಬಮೂಲ್ ನಿರ್ದೇಶಕ ಕೆಎಂಎಂ ಮಂಜುನಾಥ್, ನಾಮನಿರ್ದೇಶಿತ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ವಹ್ನಿಕುಲ ತಿಗಳ ಸಂಘದ ಮಾಜಿ ಅಧ್ಯಕ್ಷ ಸಿ.ಜಯರಾಜ್ ಸೇರಿದಂತೆ ಹಲ ಗಣ್ಯರು ಹಾಜರಿದ್ದರು.
ಬಾಕ್ಸ್..........ಪೂರ್ವ ತಾಲೂಕಿಂದ ಕೆಎಂಎಂ ಮಂಜುನಾಥ್ ನಾಮಪತ್ರಬೆಂಗಳೂರು ಪೂರ್ವ ತಾಲೂಕಿನ ಬಮೂಲ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಕೆಎಂಎಂ ಮಂಜುನಾಥ್ ಅವರು ಮತ್ತೊಮ್ಮೆ ಆಯ್ಕೆ ಬಯಸಿ ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು. ಪೂರ್ವ ತಾಲೂಕಿಗೆ ಬಿದರಹಳ್ಳಿ ಹೋಬಳಿ ಸೇರಿದಂತೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘಗಳು ಸೇರಲಿದ್ದು, ಕಳೆದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಈಗ ಮತ್ತೊಮ್ಮೆ ಆಯ್ಕೆ ಬಯಸಿದ್ದು ಶಾಸಕ ಶರತ್ ಬಚ್ಚೇಗೌಡರ ನೇತೃತ್ವದಲ್ಲಿ ಮತ್ತೊಮ್ಮೆ ಗೆಲುವು ಲಭಿಸಲಿದೆ ಎಂದು ಅಭ್ಯರ್ಥಿ ಕೆಎಂಎಂ ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
(ಫೋಟೋ: 15 ಹೆಚ್‌ಎಸ್‌ಕೆ 3 -ಬೆಂಗಳೂರು ಪೂರ್ವ ತಾಲೂಕಿನಿಂದ ಕೆಎಂಎಂ ಮಂಜುನಾಥ್ ನಾಮಪತ್ರ ಸಲ್ಲಿಸಿದರು.)
(ಫೋಟೋ ಕ್ಯಾಪ್ಷನ್)ಹೊಸಕೋಟೆ ಕ್ಷೇತ್ರದಿಂದ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಬಿ.ವಿ ಸತೀಶ್‌ಗೌಡರೊಂದಿಗೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಅಭಿಮಾನಿಗಳು ಹಾಜರಿದ್ದರು.