-ಕೊಳ್ಳೇಗಾಲ ನಗರಸಭೆಯಲ್ಲಿ ಸದಸ್ಯನ ಕಾರುಬಾರು
-10 ವರ್ಷ ಕಂದಾಯ ಕಟ್ಟದೆ ವಂಚನೆ-ನೀರಿನ ಘಟಕದಲ್ಲಿ ಲೋಪ,14 ಮಂದಿ ವಿರುದ್ಧ ಕೈಗೊಳ್ಳದ ಬಗ್ಗೆ ಆಕ್ರೋಶ ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ನಗರಸಭಾ ಸದಸ್ಯರಾಗಿ ತಾವೇ ನಡೆಸುತ್ತಿರುವ ಅಂಗಡಿಯಲ್ಲಿ ನಗರಸಭೆಗೆ ಸಾಮಗ್ರಿ ಖರೀದಿಸುವಲ್ಲಿ ವಂಚಿಸಿ ಸಿಕ್ಕಿಬಿದ್ದಿರುವ ಸದಸ್ಯ ಜಿ ಪಿ ಶಿವಕುಮಾರ್ ಸದಸ್ಯತ್ವ ರದ್ದಾಗಬೇಕು, ಇದಕ್ಕೆ ಸಹಕಾರ ನೀಡಿದ ಹಿಂದಿನ ಅಧಿಕಾರಿ ರಾಜಣ್ಣ ಸೇರಿದಂತೆ ಇನ್ನಿತರರ ಮೇಲೂ ಕ್ರಮ ಆಗಬೇಕು ಎಂದು ಹಲವು ಸದಸ್ಯರೇ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದ ಘಟನೆ ಶನಿವಾರ ಜರುಗಿತಲ್ಲದೆ ಹಲವು ಸದಸ್ಯರು ತೆರಿಗೆ ವಂಚನೆ ನಗರಸಭಾ ಸದಸ್ಯ ಎಂದು ಫಲಕ ಪ್ರದರ್ಶಿಸಿ ಕ್ರಮಕ್ಕೆ ಆಗ್ರಹಿಸಿದರು.ಜಿಲ್ಲಾಧಿಕಾರಿ ಶಿಲ್ಪಾನಾಗ್ ನೇತೖತ್ವದಲ್ಲಿ ಶಾಸಕ ಎ.ಆರ್. ಕೃಷ್ಣಮೂತಿ೯ ಸಮ್ಮುಖದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಮತ್ತು ಹಲವು ಬಿಜೆಪಿ ಸದಸ್ಯರೇ ಜಿ .ಪಿ. ಶಿವಕುಮಾರ್ ಅವರು ಅಕ್ರಮ ಎಸಗಿರುವ ಕುರಿತು ದಾಖಲೆಗಳನ್ನು ಪ್ರದರ್ಶಿಸಿ ನಗರಸಭಾ ಸದಸ್ಯರಾಗಿ ಇವರು ನಿಯಮ ಉಲ್ಲಂಘಿಸಿರುವ ಹಿನ್ನೆಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
ಕೊಳ್ಳೇಗಾಲ ನಗರಸಭೆಗೆ 13 ವರ್ಷಗಳ ಕಂದಾಯ ಪಾವತಿಸಬೇಕಿದ್ದ ಜಿ.ಪಿ. ಶಿವಕುಮಾರ್ ಅವರು ನಗರಸಭೆಗೆ 2021, 2022, 2023ನೇ ಸಾಲಿಗೆ ಕೇವಲ 3 ವರ್ಷಗಳ ಕಂದಾಯ ಪಾವತಿಸಿ ಹತ್ತು ವರ್ಷಗಳ ಕಂದಾಯ ಪಾವತಿಸದೆ ವಂಚಿಸಿದ್ದಾರೆ. ಅವರು ಮನೆ ನಿರ್ಮಿಸಿದ 13 ವರ್ಷಗಳ ಕಾಲವೂ ಸತತ ಕಂದಾಯ ಪಾವತಿಸಿಕೊಳ್ಳದೆ ಕೇವಲ ಅಂತಿಮ ಮೂರು ವರ್ಷ ಕಂದಾಯ ಪಾವತಿಸಿಕೊಂಡಿದ್ದು ಇದಕ್ಕೆ ಸಹಕರಿಸಿದ ನೌಕರರುಗಳ ಮೇಲೂ ಶಿಸ್ತು ಕ್ರಮ ಆಗಬೇಕು ಎಂದು ಸದಸ್ಯರಾದ ರಾಮಕೖಷ್ಣ, ಎ ಪಿ ಶಂಕರ್, ಚಿಂತು ಪರಮೇಶ್ , ನಾಸೀರ್, ಪ್ರಕಾಶ್ ಇನ್ನಿತರ ಸದಸ್ಯರು ಗಂಬೀರ ಆರೋಪ ಮಾಡಿದರಲ್ಲದೆ, ಈಪ್ರಕರಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು ಎಡಿಸಿ ನೇತೖತ್ವದಲ್ಲಿ ತನಿಖಾ ತಂಡ ರಚಿಸಿ ತನಿಖೆ ನಡೆಸಿ ಸದಸ್ಯರ ಆರೋಪ ಸಾಬೀತಾದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.14 ಮಂದಿ ವಿರುದ್ಧ ಏಕೆ ಕ್ರಮವಿಲ್ಲ?
ಇದೆ ವೇಳೆ ಹಲವು ಸದಸ್ಯರು ಕಳೆದ ಮೂರು, ನಾಲ್ಕು ವರ್ಷಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ವಿಚಾರದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಈ ಪ್ರಕರಣದಲ್ಲಿ ಲೂಟಿ ಮಾಡಿದ 14 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಡಿಎಂಎ ಸೂಚಿಸಿದ್ದರೂ ಇನ್ನು ಏಕೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಲ್ಲ, ಈ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಪ್ರಶ್ನಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಕಡತ ತರಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರಾದರೂ ವ್ಯವಸ್ಥಾಪಕರು ತರುವುದಾಗಿ ಹೇಳುತ್ತಲೆ ಇದ್ದರು. ಆದರೆ ಇದಕ್ಕೊಪ್ಪದ ಸದಸ್ಯರು ತಪ್ಪಿತಸ್ಥರ ಮೇಲೆ ಕ್ರಮ ಆಗಲೇ ಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಕಡತ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದರು.ಆರೋಪ, ಪ್ರತ್ಯಾರೋಪ-
ಜಿಲ್ಲಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ರೇಣುಕಾ ಅವರು ನಗರಸಭೆಯಲ್ಲಿ ಕುಳಿತು ಕೆಲಸ ಮಾಡಲ್ಲ, ಹೊಟೇಲ್ ಸೇರಿದಂತೆ ಇತರೆಡೆ ಕುಳಿತುಫೈಲ್ ನೋಡಿ ಹೋಗುತ್ತಾರೆ, ಅವರು ನಗರಸಭೆ ಬಂದು ಸಾರ್ವಜನಿಕರ ಅನುಕೂಲಕ್ಕಾಗಿ ಕೆಲಸ ಮಾಡಲ್ಲ ಎಂದು ಮಾಜಿ ಅಧ್ಯಕ್ಷ ಶಾಂತರಾಜು
ಆರೋಪಿಸಿದರು. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ನೀವು ನಗರಸಭೆ ಬರುತ್ತಿಲ್ಲ ಎಂಬ ಗಂಭೀರ ಆರೋಪವಿದೆ ಏನು ಹೇಳುತ್ತಿರ? ಎಂದು ಪ್ರಶ್ನಿಸುತ್ತಿದ್ದಂತೆಪ್ರತಿಕ್ರಿಯಿಸಿದ ರೇಣುಕಾ ಅವರು ನಾನು ಬರುತ್ತಿಲ್ಲ ಎಂಬ ಆರೋಪ ಸರಿಯಲ್ಲ, ಅವರು ಸಾಕ್ಷಿ ನೀಡಲಿ ಎಂದರು. ಅಧಿಕಾರಿ ವರ್ತನೆಗೆ ಬೇಸತ್ತ ಶಾಂತರಾಜು ಅವರು ಅವರು ಕೆಲಸ ನಿರ್ವಹಿಸಿದ್ದಕ್ಕೆ ಸಾಕ್ಷಿ ತೋರಿಸಲಿ ಎಂದು ಸವಾಲು ಹಾಕುತ್ತಿದ್ದಂತೆ ತಮ್ಮ ತಪ್ಪು ಒಪ್ಪಿಕೊಳ್ಳದೆ ಸಮರ್ಥಿಸಿಕೊಂಡರು. ಈ ಹಿನ್ನೆಲೆ ನೀವು ಜಿಲ್ಲೆಯ 2 ನಗರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರಾ ಎಂಬುದರ ಕುರಿತು ಮಾಹಿತಿ ನೀಡಿ, 3 ತಿಂಗಳ ಕಾಲ ನಿಮ್ಮ ಕಾರ್ಯವೈಖರಿಯ ಡೈರಿ ಒದಗಿಸಿ ಎಂದು ತಾಕೀತು ಮಾಡಿದರು.
ಗ್ರಾಪಂ ವ್ಯಾಪ್ತಿಗೆ ಸೇರಿಸಿಬಿಡಿನಗರಸಭೆ ವ್ಯಾಪ್ತಿಯಲ್ಲಿ 30,40ವಷ೯ಗಳಿಂದಲೂ ವಾಸವಿರುವವರಿಗೆ ಕಂದಾಯ ಕಟ್ಟಿಸಿಕೊಂಡು ಇಸ್ವತ್ತು ನೀಡಲಾಗುತ್ತಿಲ್ಲ,ಮೊದಲು ನಾವು ವಾಸಿಸುವ ಸ್ಥಳ ಗ್ರಾಪಂ ವ್ಯಾಪ್ತಿಗಿತ್ತು. ನಂತರ ಪುರಸಭೆ ವ್ಯಾಪ್ತಿಗೆ ಬಂತು, ಈಗ ನಗರಸಭೆ ವ್ಯಾಪ್ತಿಗೆ ಬಂದ ಬಳಿಕ ಕಾನೂನು ಜಟಿಲವಾಗಿದೆ.
ತಮಗೆ ಮನೆ ಇದ್ದರೂ ಅದರ ಮಾಲೀಕ ಸಂಕಷ್ಟಗಳಿಗಾಗಿ ಬ್ಯಾಂಕ್ ಸಾಲ, ಸೌಲಭ್ಯ ಪಡೆಯಲಾಗುತ್ತಿಲ್ಲ, ಈ ಕಾನೂನು ತಿದ್ದುಪಡಿಯಾಗಬೇಕು, ಇಲ್ಲದಿದ್ದರೆ ನಗರಸಭೆಯ ವ್ಯಾಪ್ತಿಯ ನಮ್ನನ್ನು ಗ್ರಾಪಂ ವ್ಯಾಪ್ತಿಗೆ ಸೇರಿಸಿ ಎಂದು ಖಾತೆ ತೊಡಕುಗಳ ಕುರಿತು ಬಸ್ತಿಪುರ ಶಾಂತು, ಜಯಂತ್, ಶಂಕರ್ ಇನ್ನಿತರರು ಅಸಮಾಧಾನ ಹೊರಹಾಕಿದರು.ಈ ಸಂದರ್ಭದಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಉಪವಿಭಾಗಾಧಿಕಾರಿ ಮಹೇಶ್, ಎಂಜಿನಿಯರ್ ನಾಗೇಂದ್ರ, ಪುರುಷೋತ್ತಮ್, ಚೇತನ್, ಪ್ರದೀಪ್, ಶಿವು ಇನ್ನಿತರಿದ್ದರು.