ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ವಾಪಸಂದ್ರ ಪ್ರಾಂತ್ಯ ರೈತ ಸಂಘದ ಕಚೇರಿ ಬಳಿ ತಾಲೂಕು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಡೆದ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ದ 90ನೇ ವಾರ್ಷಿಕೋತ್ಸವ ಹಿನ್ನೆಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಿಸಾನ್ ಸಭಾ ಚಳುವಳಿಯು ಬಿಹಾರದಲ್ಲಿ ಪ್ರಾರಂಭವಾಯಿತು, ಸಹಜಾನಂದ ಸರಸ್ವತಿ ಅವರು 1929 ರಲ್ಲಿ ಬಿಹಾರ ಪ್ರಾಂತೀಯ ಕಿಸಾನ್ ಸಭಾ (ಬಿಪಿಕೆಎಸ್) ಅನ್ನು ಸ್ಥಾಪಿಸಿದರು. ಇದು ಭಾರತದ ರೈತರ ಚಳುವಳಿಯ ಕಿಚ್ಚನ್ನು ಹೊತ್ತಿಸಿತು. ಇದು ಅವರ ಒಕ್ಕಲುತನ ಹಕ್ಕುಗಳ ಮೇಲಿನ ಜಮೀನ್ದಾರಿ ದಾಳಿಯ ವಿರುದ್ಧ ರೈತರ ಕುಂದುಕೊರತೆಗಳನ್ನು ಸಜ್ಜುಗೊಳಿಸಲು ಕಾರಣವಾಯಿತು ಎಂದರು.
ರೈತ ಚಳವಳಿ ಕ್ರಮೇಣ ಬಲಗೊಂಡು ಭಾರತದ ಉಳಿದ ಭಾಗಗಳಾದ್ಯಂತ ಹರಡಿತು. ಈ ಎಲ್ಲಾ ಆಮೂಲಾಗ್ರ ರೈತ ಬೆಳವಣಿಗೆಗಳು ಏಪ್ರಿಲ್ 1936 ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಲಕ್ನೋ ಅಧಿವೇಶನದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಚನೆಯಲ್ಲಿ ಪರಾಕಾಷ್ಠೆಯಾದವು, ಸ್ವಾಮಿ ಸಹಜಾನಂದ ಸರಸ್ವತಿ ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆಯಾದರು ಎಂದರು.ಆಗಸ್ಟ್ 1936ರಲ್ಲಿ ಹೊರಡಿಸಲಾದ ಕಿಸಾನ್ ಪ್ರಣಾಳಿಕೆಯು ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸಲು ಮತ್ತು ಗ್ರಾಮೀಣ ಸಾಲಗಳನ್ನು ರದ್ದುಗೊಳಿಸಲು ಒತ್ತಾಯಿಸಿತು. ಅಕ್ಟೋಬರ್ 1937 ರಲ್ಲಿ, ಅದು ಕೆಂಪು ಧ್ವಜವನ್ನು ತನ್ನ ಧ್ವಜವಾಗಿ ಅಳವಡಿಸಿಕೊಂಡಿತು. ಶೀಘ್ರದಲ್ಲೇ, ಅದರ ನಾಯಕರು ಕಾಂಗ್ರೆಸ್‌ನಿಂದ ಹೆಚ್ಚು ದೂರವಾದರು ಮತ್ತು ಬಿಹಾರ ಮತ್ತು ಸಂಯುಕ್ತ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳೊಂದಿಗೆ ಘರ್ಷಣೆ ನಡೆಸಿದರು.
ದುಡಿಯುವ ಜನರ ಬದುಕನ್ನು ರಕ್ಷಣೆ ಮಾಡಬೇಕಾದ ಸರ್ಕಾರಗಳು ಇವತ್ತು ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತವೆ. ರೈತ ಕೂಲಿಕಾರ ಕಾರ್ಮಿಕರು ಸಂಘಟನೆ ಕಟ್ಟುವ ಮೂಲಕ ಒಂದಾಗಿ ಹೋರಾಟ ಮಾಡುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗಿ ರೈತ ಸಂಘಟನೆ ದೊಡ್ಡ ಶಕ್ತಿಯಾಗಿ ಬೆಳೆಯಬೇಕಾಗಿದೆ ಎಂದು ತಿಳಿಸಿದರು.
ಸಿಕೆಬಿ-1 ನಗರದ ವಾಪಸಂದ್ರ ಪ್ರಾಂತ್ಯ ರೈತ ಸಂಘದ ಕಚೇರಿ ಬಳಿ ನಡೆದ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ದ 90ನೇ ವಾರ್ಷಿಕೋತ್ಸವ ಹಿನ್ನೆಲೆ ಬಿ.ಎನ್ ಮುನಿಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು.