ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಮುಲ್ ಒಕ್ಕೂಟಕ್ಕೆ ಮೊದಲ ಚುನಾವಣೆ ಎದುರಾಗಿದ್ದು, ನಿರ್ದೇಶಕರಾಗಲು ಹಲವರು ತುದಿಗಾಲಲ್ಲಿದ್ದಾರೆ. ಜಿಲ್ಲೆಯ ಬಹುಪಾಲು ಕುಟುಂಬಗಳು ಹೈನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ವಿಮೆ, ಸಬ್ಸಿಡಿ ದರದಲ್ಲಿ ವಿವಿಧ ಸಲಕರಣೆಗಳ ವಿತರಣೆ, ಸಾಲ ಸೌಲಭ್ಯ ತಲುಪಿಸುವ ಜತೆಗೆ ಸಂಘಗಳಲ್ಲಿ ಕೆಲಸ ನಿರ್ವಹಿ ಸುತ್ತಿರುವ ನೌಕರರ ಹಿತ ಕಾಪಾಡುವ ಹಾಗೂ ಒಕ್ಕೂಟದ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮಹತ್ವದ ಜವಾಬ್ದಾರಿ ನಿರ್ದೇಶಕರದ್ದಾಗಿದೆ.
ಈ ಬಾರಿ ಶತಾಯ ಗತಾಯ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಅಧಿಕಾರ ಹಿಡಿಯಬೇಕೆಂದು ಹಠಕ್ಕೆ ಬಿದ್ದಿರುವ ಸ್ಥಳೀಯ ಮುಖಂಡರು, ಶಾಸಕರು ಹಾಗೂ ಸಂಸದರು ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ, ಆಕಾಂಕ್ಷಿಗಳ ಹಿನ್ನೆಲೆ, ವರ್ಚಸ್ಸು ಹಾಗೂ ಆರ್ಥಿಕ ಶಕ್ತಿಯನ್ನು ನೋಡಿ ಅಳೆದು ತೂಗಿ ಸೂಕ್ತ ಅಭ್ಯರ್ಥಿ ಅಂತಿಮಗೊಳಿಸಲು ಹಲವು ಸುತ್ತಿನ ಸಭೆಗಳನ್ನು ಮಾಡುತ್ತಿದ್ದಾರೆ.ಒಕ್ಕೂಟದ ನಿರ್ದೇಶಕ ಸ್ಥಾನಗಳಿಗೆ 2026 ರ ಫೆ.1 ರಂದು ಚುನಾವಣೆ ನಡೆಯಲಿದೆ. ಆಡಳಿತ ಮಂಡಳಿ ಚುನಾವಣೆಗೆ ಸಂಬಂಧಿಸಿದಂತೆ ಚಿಮುಲ್ ಅರ್ಹ ಮತ್ತು ಅನರ್ಹ ಮತದಾರರ ಕರಡು ಮತದಾರರ ಪಟ್ಟಿ ಪ್ರಕಟಿಸಿದೆ. ಈಗ ನಮ್ಮ ಜಿಲ್ಲೆಯಲ್ಲಿ ಒಟ್ಟು 996 ಹಾಲು ಉತ್ಪಾದಕರ ಸಹಕಾರ ಸಂಘಗಳು ಕೆಲಸ ಮಾಡುತ್ತಿದು ಅವುಗಳ ಪೈಕಿ 125 ಮಹಿಳಾ ಸಂಘಗಳು ಕೆಲಸ ಮಾಡುತ್ತಿವೆ ಜಿಲ್ಲೆಯಲ್ಲಿ ಒಟ್ಟು 913 ಅರ್ಹ ಮತ್ತು 83 ಅನರ್ಹ ಮತದಾರರು ಇದ್ದು, ಶೀಘ್ರದಲ್ಲೆ ಚುನಾವಣೆಗೆ ಜಿಲ್ಲಾಧಿಕಾರಿಗಳು ಅಧಿಸೂಚಿ ಹೊರಡಿಸಲಿದ್ದಾರೆ ಎಂದು ಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಸಿ.ಶ್ರೀನಿವಾಸಗೌಡ ತಿಳಿಸಿದ್ದಾರೆ.ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ 13 ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಮಾಡಿದ್ದು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿಗೆ ತಲಾ 2 ನಿರ್ದೇಶಕ ಸ್ಥಾನ, ಉಳಿದಂತೆ ಬಾಗೇಪಲ್ಲಿ, ಗುಡಿಬಂಡೆ, ಚೇಳೂರು, ಮಂಚೇನಹಳ್ಳಿ, ಗೌರಿಬಿದನೂರಿಗೆ ತಲಾ 1 ಸ್ಥಾನ ಹಾಗೂ 2 ಮಹಿಳಾ ನಿರ್ದೇಶಕ ಸ್ಥಾನಗಳು ಸೇರಿ ಒಟ್ಟು 13 ಹಾಗೂ 5 ನಾಮ ನಿರ್ದೇಶನ ನಿರ್ದೇಶಕ ಸ್ಥಾನ ಸೇರಿದಂತೆ 18 ನಿದೇರ್ಶಕ ಸ್ಥಾನಗಳು ಇರಲಿವೆ.
ಬಿಜೆಪಿ ಸರ್ಕಾರದಲ್ಲಿ ಹಾಲು ಒಕ್ಕೂಟವನ್ನು ಅವೈಜ್ಞಾನಿಕವಾಗಿ ಪ್ರತ್ಯೇಕಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಒಕ್ಕೂಟಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ತೋಟಗಾರಿಕೆ ಇಲಾಖೆಯ ಭೂಮಿ, ಹಾಲು ಪಾಕೆಟ್ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಸ್ವಾವಲಂಬಿಯಾಗಿ ಮಾಡಿದೆ. ಇದರ ಬಗ್ಗೆ ಜನರಿಗೆ ಅರಿವಿದೆ ಎನ್ನುವುದು ಕಾಂಗ್ರೇಸಿಗರ ವಾದ ವಾಗಿದೆ.ಪ್ರತ್ಯೇಕ ಹಾಲು ಒಕ್ಕೂಟ ರಚನೆಗಾಗಿ ನಾವು ಎಷ್ಟು ಶ್ರಮ ಪಟ್ಟಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರತ್ಯೇಕ ಒಕ್ಕೂಟದ ಮಣ್ಣನೆ ಪಡೆಯಲು ಏನೇನೋ ಮಾಡಿದರು. ಆದರೆ ಹಾಲು ಉತ್ಪಾದಕರಿಗೆ ಎಲ್ಲರಿಗೂ ಪ್ರತ್ಯೇಕ ಒಕ್ಕೂಟ ಯಾರು ಮಾಡಿದ್ದರು ಎಂಬುದರ ಅರಿವಿದೆ. ಡೆಲಿಗೇಟ್ಸ್ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮತ ಹಾಕಲು ನಾನು ಮನವಿ ಮಾಡುತ್ತೇನೆ. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವುದರಿಂದ ಚಿಮುಲ್‌ನಲ್ಲಿ ಮೀಲುಗೈ ನಮ್ಮದೇ ಎನ್ನುತ್ತಾರೆ ಸಂಸದ ಡಾ.ಕೆ.ಸುಧಾಕರ್.
ಸಿಕೆಬಿ-2 ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಿಮುಲ್) ನ ಮೆಗಾಡೈರಿ