ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಗೆಲ್ಲಿಸಿ : ಮರೀಗೌಡ

KannadaprabhaNewsNetwork | Updated : Apr 09 2024, 10:24 AM IST

ಸಾರಾಂಶ

ಎಂ. ಲಕ್ಷ್ಮಣ ಅವರು ಸಾಮಾನ್ಯ ಸರಳ ವ್ಯಕ್ತಿ, ಎಲ್ಲರ ಕಷ್ಟ ಸುಖಗಳಿಗೆ ಸ್ಪಂಧಿಸುವ ವ್ಯಕ್ತಿ, ಬಿಜೆಪಿಯ ಅಭ್ಯರ್ಥಿ ಸಾಮಾನ್ಯ ಜನರಿಗೆ ಸಿಗುವುದಿಲ್ಲ. ಆದ್ದರಿಂದ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು

 ಮೈಸೂರು:  ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಎಂಡಿಎ ಅಧ್ಯಕ್ಷ ಕೆ. ಮರೀಗೌಡ ಕರೆ ನೀಡಿದರು.

ರಾಮಕೃಷ್ಣ ನಗರದ 58ನೇ ವಾರ್ಡ್ ನಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಪರ ಮತಯಾಚಿಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿದ ಬಿ.ಜೆ.ಪಿ ಸರ್ಕಾರವನ್ನು ನಂಬಬೇಡಿ, ನುಡಿದಂತೆ ನಡೆದು 5 ಗ್ಯಾರೆಂಟಿಯನ್ನು ಅಧಿಕಾರಕ್ಕೆ ಬಂದ 9 ತಿಂಗಳಲ್ಲಿಯೇ ಜಾರಿಗೊಳಿಸಿದ ಸಿದ್ಧರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಎಲ್ಲರೂ ಬೆಂಬಲಿಸಬೇಕು ಎಂದರು.

ಎಂ. ಲಕ್ಷ್ಮಣ ಅವರು ಸಾಮಾನ್ಯ ಸರಳ ವ್ಯಕ್ತಿ, ಎಲ್ಲರ ಕಷ್ಟ ಸುಖಗಳಿಗೆ ಸ್ಪಂಧಿಸುವ ವ್ಯಕ್ತಿ, ಬಿಜೆಪಿಯ ಅಭ್ಯರ್ಥಿ ಸಾಮಾನ್ಯ ಜನರಿಗೆ ಸಿಗುವುದಿಲ್ಲ. ಆದ್ದರಿಂದ ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರೆಂಟಿಗಳು ಪ್ರತಿ ಮನೆಯನ್ನೂ ತಲುಪಿವೆ, ಶಕ್ತಿ ಯೋಜನೆಯಡಿ 170 ಕೋಟಿ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತೀ ಬಡ ಕುಟುಂಬದ ಮಹಿಳೆಗೆ ಮಹಾಲಕ್ಷ್ಮಿ ಯೋಜನೆಯಡಿ ವರ್ಷಕ್ಕೆ 1 ಲಕ್ಷ ರೂ ನೀಡುತ್ತೇವೆ, 2013 ರಿಂದ 2018ರವರೆಗೆ ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಮೈಸೂರಿಗೆ 8 ಆಸ್ಪತ್ರೆಗಳನ್ನು ನಿರ್ಮಾಣ ಮಾಡಿದ್ದಾಗಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ಉದ್ಯಮಿ ಕೃಷ್ಣಕುಮಾರ್ ಸಾಗರ್, ಡಿಸಿಸಿ ಸದಸ್ಯ ಬಿ. ರವಿ, ಬಿ.ಎಸ್.ಎನ್.ಎಲ್ ಮಾದೇಗೌಡ, ಕೊಪ್ಪಲ್ ರಾಜಣ್ಣ, ದಡದಹಳ್ಳಿ ಮಹದೇವ, ಕ್ಯಾತನಹಳ್ಳಿ ಪ್ರಕಾಶ್, ಮಹದೇವ್, ಮಲ್ಲೇಶ್, ಫರ್ಜಾನಾ, ಅನಂದೂರು ರಾಮೇಗೌಡ, ಯಧುಕುಮಾರ್, ಪ್ರಕಾಶ್, ಧನಗಳ್ಳಿ ಬಸವರಾಜು, ರಾಜೇಶ್, ಚಂದ್ರು ಇದ್ದರು.

Share this article