ಕನ್ನಡಪ್ರಭ ವಾರ್ತೆ, ಜೇವರ್ಗಿ/ಯಡ್ರಾಮಿ
ಮಳ್ಳಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಹುರಿಯಾಳು ರಾಧಾಕೃಷ್ಣ ಪರವಾದ ಮತ ಯಾಚನೆಯ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಬಂದಾಗಿನಿಂದ ನಿಮೆಲ್ಲರ ತೆರಿಗೆ ಹಣ ನಿಮಗೇ ಸೇರುತ್ತಿದೆ. ತೆರಿಗೆ ಹಣ ಗ್ಯಾರಂಟಿ ರೂಪದಲ್ಲಿ ಮತ್ತೆ ಜನರಿಗೆ ತಲುಪುತ್ತಿದೆ. ಆದರೆ, ನಮ್ಮ ಗ್ಯಾರಂಟಿಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಗ್ಯಾರಂಟಿ ಹಣದಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದೆಯೇ ಹೊರತು ಅವರ್ಯಾರು ದಾರಿ ತಪ್ಪಿಲ್ಲ. ಇಂತಹ ಕೀಳು ಹೇಳಿಕೆ ಕೊಡಲು ಬಿಜೆಪಿ, ಜೆಡಿಎಸ್ ಮೈತ್ರಿ ನಾಯಕರಿಗೆ ಸಾಮಾನ್ಯ ಜ್ಞಾನವೂ ಇಲ್ಲದಂತಾಗಿದೆ, ಸೋಲಿನ ಹತಾಶೆಯಿಂದ ಅವರು ಹೀಗೆ ಮಾತನಾಡುತ್ತಿದ್ದಾರೆಂದು ದೂರಿದರು.ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ನೀಡುವ ಮೂಲಕ ನಿಮ್ಮೆಲ್ಲರ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ ಡಾ. ಅಜಯ್ ಸಿಂಗ್ ಮುಂದಿನ ನಾಲ್ಕು ವರ್ಷದಲ್ಲಿ ಜೇವರ್ಗಿ ಸರ್ವತೋಮುಖ ಪ್ರಗತಿ ತಮ್ಮ ಜವಾಬ್ದಾರಿ ಎಂದರು.
ನಂತರ ಹರವಾಳ , ಯಡ್ರಾಮಿ ತಾಲೂಕಿನ ಅರಳಗುಂಡಗಿ ಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ಪರವಾಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಬೃಹತ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಲಾಯಿತು
15 ಸಾವಿರಕ್ಕೂ ಹೆಚ್ಚು ಲೀಡ್: ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಅಜಯ್ ಸಿಂಗ್ ಈ ಬಾರಿ ಜೇವರ್ಗಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆಯಲ್ಲಿ 15 ಸಾವಿರಕ್ಕೂ ಹೆಚ್ಚು ಲೀಡ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಜೇವರ್ಗಿ ವ್ಯಾಪ್ತಿಯಲ್ಲಿ 4 ಬೃಹತ್ ಸಮಾವೇಶಗಳಾಗಿವೆ. ಜಿಪಂ ಕ್ಷೇತ್ರ ಹಂತದಲ್ಲಿಯೂ ಪ್ರಚಾರಗಲು ಸಾಗಿವೆ. ಅಭ್ಯರ್ಥಿ ಜೊತೆಗೂ ಜೇವರ್ಗಿಯಲ್ಲಿ ಪ್ರಚಾರ ಬಿರುಸಿನಿಂದ ಸಾಗಿದೆ. ಜೇವರ್ಗಿ ಜನತೆ ಈ ಬಾರಿ ಖರ್ಗೆಯವರ ಕೈ ಬಲಪಡಿಸಲು ನಿರ್ಧರಿಸಿದ್ದಾರೆ. ಹೆಚ್ಚಿನ ಲೀಡ್ ಜೇವರ್ಗಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದೆ ಎಂದು ವಶ್ವಾಸ ವ್ಯಕ್ತಪಡಿಸಿದರು.