ಹಳ್ಳಿಗಳ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ಬದ್ಧ: ಶಾಸಕ ಅಲ್ಲಂಪ್ರಭು

KannadaprabhaNewsNetwork |  
Published : Sep 13, 2026, 01:15 AM IST
ಫೋಟೋ- ಅಲ್ಲ 1, 2 ಮತ್ತು 3 | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಜತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳ ಜಾರಿಗೆ ತಂದಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಔನ್ನತ್ಯ ಸಾಧಿಸಬೇಕೆಂದು ಶಾಸಕ ಅಲ್ಲಂಪ್ರಭು ಪಾಟೀಲ ಕರೆ‌ ನೀಡಿದರು. ಕಲಬುರಗಿ ತಾಲೂಕಿನ ತಾಜ ಸುಲ್ತಾನರದಲ್ಲಿ ಶನಿವಾರ ನಡೆದ ಹೋಬಳಿಮಟ್ಟದ ಪ್ರಜಾಸೇವೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಜತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳ ಜಾರಿಗೆ ತಂದಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಔನ್ನತ್ಯ ಸಾಧಿಸಬೇಕೆಂದು ಶಾಸಕ ಅಲ್ಲಂಪ್ರಭು ಪಾಟೀಲ ಕರೆ‌ ನೀಡಿದರು. ಕಲಬುರಗಿ ತಾಲೂಕಿನ ತಾಜ ಸುಲ್ತಾನರದಲ್ಲಿ ಶನಿವಾರ ನಡೆದ ಹೋಬಳಿಮಟ್ಟದ ಪ್ರಜಾಸೇವೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರ ಸಮಸ್ಯೆ ಆಲಿಸಬೇಕು ಮತ್ತು ಆಡಳಿತವನ್ನು ಮನೆ ಬಾಗಿಲಿಗೆ ಕೊಂಡೊಯ್ಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರಜಾಸೇವೆ ಆರಂಭಿಸಿದ್ದಾರೆ. ಕಳೆದ ವರ್ಷ ದಕ್ಷಿಣ ಕ್ಷೇತ್ರದಲ್ಲಿ ಬೆಳೆ‌ ವಿಮೆ‌ ಮಾಡಿಸಿಕೊಂಡ ರೈತರಿಗೆ 30.21 ಕೋಟಿ ರು. ಮತ್ತು ರಾಜ್ಯ ಸರ್ಕಾರದಿಂದ ಅತಿವೃಷ್ಠಿಗೆ 7.35 ಕೋಟಿ ರು. ಪರಿಹಾರ ಸಿಕ್ಕಿದೆ. ವಿಶೇಷವಾಗಿ ಸೈಯದ್‌ ಚಿಂಚೋಳಿ-ತಾಜ ಸುಲ್ತಾನಪುರ ಗ್ರಾಮದ ರೈತರಿಗೆ 5.57 ಕೋಟಿ ರು. ಪರಿಹಾರ ಸಿಕ್ಕಿದೆ ಎಂದರು.ತಾಜ ಸುಲ್ತಾನಪುರ-ಬೇಲೂರ ಸಂಪರ್ಕ ಕಲ್ಪಿಸುವ 2 ಕೋಟಿ ರು. ರಸ್ತೆ ಕಾಮಗಾರಿ ಕಲ್ಯಾಣ ಪಥದಲ್ಲಿ ಕೈಗೆತ್ತಿಕೊಂಡಿದೆ‌. ಸುಲ್ತಾನಪುರ-ಗಣಜಲಖೇಡ್ ರಸ್ತೆ 50 ಲಕ್ಷ ರು. ವೆಚ್ಚದಲ್ಲಿ ಪೂರ್ಣಗೊಳಿಸಿದೆ. 20 ಲಕ್ಷ ರು. ಗ್ರಾಮದ ರುದ್ರಭೂಮಿಗೆ, ಹನುಮಾನ‌ ದೇವಸ್ಥಾನದ ಜೀರ್ಣೋದ್ಧಾರಕ್ಕೆ 7 ಲಕ್ಷ ರು. ಹಾಗೂ 3 ಲಕ್ಷ ರು. ಬೀರಲಿಂಗೇಶ್ವರ ದೇವಸ್ಥಾಕ್ಕೆ ನೀಡಿದೆ. ಅಂಬೇಡ್ಕರ್ ಸಮುದಾಯ‌ ಭವನಕ್ಕೂ ಅನುದಾನ‌ ನೀಡಲಾಗುವುದು ಹಾಗೂ ಗ್ರಾಮಾಭಿವೃದ್ಧಿಗೆ ನಮ್ಮ ಸರ್ಕಾರ ಬದ್ದ ಎಂದು ಹೇಳಿದರು.ಜಿಲ್ಲಾಧಿಕಾರಿ ಇಕ್ರಂ ಶರೀಫ್ ಮಾತನಾಡಿ, ಒಟ್ಟು 6 ಕೌಂಟರ್ ಇಲ್ಲಿ ತೆರೆಯಲಾಗಿದೆ. ಗ್ರಾಮಸ್ಥರು ತಮ್ಮ‌ ಏನೇ ಸಮಸ್ಯೆ ಗಳಿದಲ್ಲಿ ಕೌಂಟರ್‌ನಲ್ಲಿ ಲಿಖಿತ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು‌. ಅರ್ಜಿ‌ ಸಲ್ಲಿಸದೆ ಕೇವಲ ನಮ್ಮಲಿ‌ ಬಂದು ಮೌಖಿಕವಾಗಿ ತಿಳಿಸಿದರೆ‌ ಸಮಸ್ಯಡ ಬಗೆಹರಿಯುವುದಿಲ್ಲ. ಇಡೀ ದಿನ‌ ನಿಮಗಾಗಿ ಆಡಳಿತ ವರ್ಗ ಇಲ್ಲಿರಲಿದೆ. ನಿಮ್ಮ ಸಮಸ್ಯೆ ಆಲಿಸಲಿದೆ ಎಂದರು.ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಪ್ರಸ್ತುತ ವರ್ಷ ಬರಗಾಲದ ಚಾಯೆ ಆವರಿಸಿದೆ. ಬೆಳೆ‌ ದರ್ಶಕ ತಂತ್ರಾಂಶದ‌ ಮೂಲಕ ಬೆಳೆಯನ್ನು ದಾಖಸಲಾಗುವುದು. ಈ ವರ್ಷ 4.53 ಲಕ್ಷ ರೈತರು ಬೆಳೆ‌ ವಿಮೆ‌ ನೋಂದಣಿ ಮಾಡಿಸಿ 5.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ 585 ಕೋಟಿ ರು. ಬೆಳೆ ಪರಿಹಾರ ರೈತರಿಗೆ ನೀಡಲಾಗಿದೆ. ಸರ್ಕಾರ ರೈತರಿಗೆ ಕೃಷಿ ಯಂತ್ರೋಪಕರಣ ಬಾಡಿಗೆ ಪಡೆಯಲು, ಬೀಜ, ಔಷದ ಸಿಂಪಡಣೆ ಡ್ರೋನ್ ಸೌಲಭ್ಯ ಪಡೆಯುವ ಅನೆಕ ಸವಲತ್ತು ಕಲ್ಪಿಸಿದ್ದು, ರೈತರು ಸೌಲಭ್ಯ ಪಡೆಯಬೇಕು ಎಂದರು.

ಬೇಡಿಕೆಗಳ ಸರಮಾಲೆ: ಪ್ರಜಾಸೇವೆ‌ ಸಭೆಗೆ ಗ್ರಾಮದ ಮಹಿಳೆಯರು ದಂಡೆ ಅಗಮಿಸಿತ್ತು. ಗೃಹಲಕ್ಷ್ಮೀ‌ ಹಣ ಬಂದಿಲ್ಲ, ವಿಬಿ-ಜಿ-ರಾಮ್ ಜಿ ಯೋಜನೆಯಡಿ ಕೆಲಸ ನೀಡಿಲ್ಲ, ವೃದ್ಧಾಪ್ಯ ವೇತನ ಸ್ಥಗಿತಗೊಂಡಿದೆ‌ ಸಹಿತ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಶಾಸಕರು ಬಳಿ ಬೇಡಿಕೆ ಇಟ್ಟರು.

ಜಿಪಂ ಸಿಇಓ ರಾಹುಲ‌ ಸಂಕನೂರ, ಡಿಸಿಪಿ ಶಾಲೂ, ಸಹಾಯಕ ಆಯುಕ್ತೆ ರಿತಿಕಾ ವರ್ಮಾ, ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಡಿ.ಡಿ.ಪಿ.ಐ ಶಂಕ್ರಮ ಢವಳಗಿ, ಡಿ.ಎಚ್.ಓ ಡಾ.ಶರಣಬಸಪ್ಪ‌ ಕ್ಯಾತನಾಳ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸಂಗಮೇಶ, ಜಿಲ್ಲಾ‌ ಉದ್ಯೋಗ ಅಧಿಕಾರಿ ಭಾರತಿ, ತಾಲೂಕು ಪಂಚಾಯಿತಿ ಇ.ಓ ಮಾನಪ್ಪ ಕಟ್ಟಿಮನಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು‌ ಮಟ್ಟದ ಅಧಿಕಾರಿಗಳು ಗ್ರಾಮಸ್ಥರು ಬಾಗಿಯಾಗಿದ್ದರು. ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ ಪ್ರಸ್ತಾವಿಕ ಮಾತನಾಡಿ, ಪ್ರಜಾ ಸೇವೆ ಸಭೆಯ ಉದ್ದೇಶ ವಿವರಿಸಿದರು.

ಪ್ರಸ್ತುತ ಬರಗಾಲವಿರುವ ಕಾರಣ ತಾಜಸುಲ್ತಾನಪೂರ ಸೈಯದ್ ಚಿಂಚೋಳಿ ಗ್ರಾಮಕ್ಕೆ ಕುಡಿಯುವ‌ ನೀರಿನ ಸಮಸ್ಯೆ ಹೆಚ್ಚಿದ್ದು, ಭೋಸಗಾ ಕೆರೆ‌ ಮೂಲಕ ಹಳ್ಳಕ್ಕೆ ನೀರು ಬಿಟ್ಟದಲ್ಲಿ ದನಕರುಗಳಿಗೆ ನೀರು ದೊರೆಯುವುದಲ್ಲದೆ ಗ್ರಾಮದಲ್ಲಿ ಬಾವಿಗಳು ರಿಚಾರ್ಜ್ ಆಗಿ ಕುಡಿಯುವ ನೀರು ಲಭ್ಯವಾಗಲಿವೆ ಎಂದು ತಾಜಸುಲ್ತಾನಪೂರದ ಚಂದ್ರಶೇಖರ ಪಾಟೀಲ ಹೇಳಿದರು.

ವಿದ್ಯುತ್‌ ಸಮಸ್ಯೆಗೆ ಶಾಸಕ ಸ್ಪಂದನೆ: 7 ಗಂಟೆ‌ ವಿದ್ಯುತ್ ಬದಲು ಕೇವಲ‌ 2 ಗಂಟೆ ನೀಡುತ್ತಿರುವುದರಿಂದ ನೀರಿಲ್ಲದೆ ಬೆಳೆದ‌ ಕಬ್ಬು ಒಣಗಿವೆ. ಗ್ರಾಮಕ್ಕೆ ನಿರಂತರ ವಿದ್ಯುತ್ ಒದಗಿಸಿ ಎಂದು ಶಾಸಕರಲ್ಲಿ ಯುವಕ ಗುರು ಸುಲ್ತಾನಪುರ ಬೇಡಿಕೆ ಇಟ್ಟಾಗ ಸ್ಪಂದಿಸಿದ ಶಾಸಕರು ಸಮಸ್ಯೆ ಬಗೆಹರಿಸುವಂತೆ ಜೆಸ್ಕಾಂ ಕಿರಿಯ ಇಂಜಿನೀಯರ್ ರಾಹುಲದೇವ್‌ಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋಲಕಪಳ್ಳಿ ತಾಂಡಾದಲ್ಲಿ ಶ್ರಾವಣ ಮಾಸದ ಪೂಜೆ
ಕೋಡಿಮಠದಲ್ಲಿ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳಿಗೆ ತೆರೆ