ಕನ್ನಡಪ್ರಭ ವಾರ್ತೆ ಸಾಗರ
ತಾಲೂಕಿನ ಮಂಕಳಲೆಯಲ್ಲಿ ನೈಋತ್ಯ ಪದವೀಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿ ಮಾತನಾಡಿ, ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಡಾ.ಧನಂಜಯ ಸರ್ಜಿ ಮತ್ತು ಭೋಜೇಗೌಡರನ್ನು ಮತದಾರರು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಆಡಳಿತದಲ್ಲಿ ಆರ್ಥಿಕ ಶಿಸ್ತು ಇಲ್ಲವಾಗಿದೆ. ಹೊಸ ಕಾಮಗಾರಿಗಳು ಯಾವುದೂ ನಡೆಯುತ್ತಿಲ್ಲ. ಗುತ್ತಿಗೆದಾರರಿಗೆ ಬಿಲ್ ಪಾವತಿ ಅಗುತ್ತಿಲ್ಲ. ಇದೊಂದು ಅಪರಾಧಿಗಳಿಗೆ ರಕ್ಷಣೆ ನೀಡುವ ಸರ್ಕಾರವಾಗಿದೆ.ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟ:
ಶಿಕ್ಷಣ ಸಚಿವರಿಗೆ ಈ ಖಾತೆಯ ಮಹತ್ವ ತಿಳಿದಿಲ್ಲ. ಸಾರ್ವಜನಿಕ ಜೀವನದ ಕನಿಷ್ಟ ಮಾಹಿತಿ ಇಲ್ಲದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ಜರಿದರು.ಶಿಕ್ಷಣ ಕ್ಷೇತ್ರದಲ್ಲಿ ಸಾಮರ್ಥ್ಯ ಕಡಿಮೆ ಆಗುತ್ತಿದೆ. ಸಿಇಟಿ ಗೊಂದಲ, 5 ಮತ್ತು 8, 9ನೇ ತರಗತಿ ಮಕ್ಕಳ ಭವಿಷ್ಯದ ಜೊತೆ ಸರ್ಕಾರ ಆಟವಾಡಿದೆ. ತುಷ್ಟೀಕರಣ ನೀತಿ ಅನುಸರಿಸಿ ಕಾನೂನನ್ನು ಗಾಳಿಗೆ ತೂರಿದೆ. ಲೋಕಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬಿಜೆಪಿ ಪರವಾಗಿ ಬರಲಿದೆ ಎಂದು ಹೇಳಿದರು.
ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ, ಪ್ರಮುಖರಾದ ಪ್ರಸನ್ನ ಕೆರೆಕೈ, ರಾಜೇಶ್ ಮಾವಿನಸರ, ವ.ಶಂ.ರಾಮಚಂದ್ರ ಭಟ್, ಕೆ.ಎನ್.ಶ್ರೀಧರ್ ಇನ್ನಿತರರಿದ್ದರು. ಗಿರೀಶ್ ಎನ್.ಹೆಗಡೆ ಸ್ವಾಗತಿಸಿದರು. ರಮೇಶ್ ಹಾರೆಗೊಪ್ಪ ವಂದಿಸಿದರು. ಹು.ಭಾ.ಅಶೋಕ್ ನಿರೂಪಿಸಿದರು.