ಬಡಜನರ ನೋವಿಗೆ ಕಾಂಗ್ರೆಸ್‌ ಸರ್ಕಾರ ಸ್ಪಂದನೆ: ಶಾಸಕ ಯು.ಬಿ. ಬಣಕಾರ

KannadaprabhaNewsNetwork |  
Published : Sep 08, 2025, 01:01 AM IST
ಅಬಲೂರು ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಯು.ಬಿ. ಬಣಕಾರ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ನಾಡಿಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಮಹಾನ್ ಪುರುಷರಾದ ಸರ್ಕಾರ ಡಾ. ಬಿ.ಆರ್. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಡಾ. ಬಾಬುಜಗಜೀವನ್‌ರಾಂ ಅವರ ಹೆಸರಿನಲ್ಲಿ ಭವನಗಳನ್ನು ನಿರ್ಮಾಣ ಅವರ ಆದರ್ಶಗಳನ್ನು ನೆನೆಯುವಂತ ಕಾರ್ಯ ಮಾಡುತ್ತಿದೆ.

ಹಿರೇಕೆರೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬಡಜನತೆಯ ನೋವಿಗೆ ಸ್ಪಂದಿಸುವ ಜತೆಗೆ ರಾಜ್ಯದ ಅಭಿವೃದ್ಧಿಗೂ ನಿರಂತರ ಬದ್ಧವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ತಾಲೂಕಿನ ಅಬಲೂರು ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ನಾಡಿಗೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ ಮಹಾನ್ ಪುರುಷರಾದ ಸರ್ಕಾರ ಡಾ. ಬಿ.ಆರ್. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಡಾ. ಬಾಬುಜಗಜೀವನ್‌ರಾಂ ಅವರ ಹೆಸರಿನಲ್ಲಿ ಭವನಗಳನ್ನು ನಿರ್ಮಾಣ ಅವರ ಆದರ್ಶಗಳನ್ನು ನೆನೆಯುವಂತ ಕಾರ್ಯ ಮಾಡುತ್ತಿದೆ ಎಂದರು.

ಅಬಲೂರು ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಭವನ ನಿರ್ಮಾಣಕ್ಕೆ ಚಾಲನೆ ದೊರಕಿದ್ದು, ಈ ಭವನ ನಿರ್ಮಾಣದಿಂದ ಅನೇಕ ವಿಚಾರಗಳಿಗೆ ವೇದಿಕೆಯಾಗುವ ಜತೆಗೆ ಸಭೆ ಸಮಾರಂಭ ನಡೆಸಲು ಅನುಕೂಲವಾಗುತ್ತದೆ. ಉತ್ತಮ ಭವನ ನಿರ್ಮಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಭವನ ನಿರ್ಮಾಣದ ಉದ್ದೇಶ ಈಡೇರಿಸಬೇಕು ಎಂದರು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ಹರಿಜನ, ಸದಸ್ಯರಾದ ಉಜ್ಜನಗೌಡ ಮಳವಳ್ಳಿ, ವಿನಯ ದಳವಾಯಿ, ಮನೋಹರ ಕಮ್ಮಾರ, ಉಮಾ ಚಕ್ರಸಾಲಿ, ಗೀತಾ ಇಂಗಳಗೊಂದಿ, ಯಲ್ಲಮ್ಮ ಆಡೂರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೀರಿಶ ಮುಡಿಯಮ್ಮನವರ, ಬಸವರಾಜ ಮಳವಳ್ಳಿ, ಮಹಾಲಿಂಗಪ್ಪ ಗುಳಲಕಾಯಿ, ಶಂಕ್ರಪ್ಪ ಗೌಡ್ರ, ಸುರೇಶ ಕುರುವತ್ತೇರ, ಉಜ್ಜಪ್ಪ ಮುದಗೋಳ, ಬಸವಂತಪ್ಪ ಹರಿಜನ, ಮುತ್ತಪ್ಪ ಹರಿಜನ, ಶೇಕಪ್ಪ ಹರಿಜನ, ಸುರೇಶ ಹರಿಜನ, ಗ್ರಾಪಂ ಕಾರ್ಯದರ್ಶಿ ಆರ್.ಬಿ. ಕಾಳೇರ ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಇದ್ದರು. ನಾಗರಾಜ ಸುತ್ತಕೋಟಿ ಸ್ವಾಗತಿಸಿದರು. ಸುರೇಶ ಪೂಜಾರ ನಿರೂಪಿಸಿ, ವಂದಿಸಿದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌