ಕಾಂಗ್ರೆಸ್ ಸರ್ಕಾರದಿಂದ ಬಡವರ ಪರವಾದ ಯೋಜನೆಗಳ ಜಾರಿಗೆ

KannadaprabhaNewsNetwork |  
Published : Jun 28, 2026, 03:00 AM IST
ಚಿತ್ರದುರ್ಗ ಶಾಸಕ | Kannada Prabha

ಸಾರಾಂಶ

ಚಳ್ಳಕೆರೆ ತಾಲೂಕಿನ ದೊಡ್ಡ ಚೆಲ್ಲೂರು ಗ್ರಾಪಂ ವ್ಯಾಪ್ತಿಯ ದೊಡ್ಡ ಬೀರನಹಳ್ಳಿ ಗ್ರಾಮದ ದೌರ್ಬಲ್ಯದಡಿ ಸಂತ್ರಸ್ಥರಾದ ಫಲಾನುಭವಿಗಳಿಗೆ ರಾಜೀವ್‌ಗಾಂಧಿ ವಸತಿ ನಿಗಮದ ವತಿಯಿಂದ ಮಂಜೂರಾದ ನಿವೇಶನದ ಹಕ್ಕು ಪತ್ರಗಳನ್ನು ಶಾಸಕ ಟಿ.ರಘುಮೂರ್ತಿ ಶನಿವಾರ ವಿತರಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸದಾ ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತರುವ ಮಹತ್ತರ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ದೌರ್ಜನ್ಯ ಪ್ರಕರಣದಡಿ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ಮಂಜೂರಾದ ನಿವೇಶನದ ಹಕ್ಕುಪತ್ರಗಳನ್ನು ಶನಿವಾರ ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ವಿತರಿಸಿ ಅವರು ಮಾತನಾಡಿದರು.

ತಾಲೂಕಿನ ದೊಡ್ಡಚೆಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಿ.ಸರ್ವೇ ನಂ. 50ರಲ್ಲಿ ರಚಿಸಿರುವ ನಿವೇಶನಗಳನ್ನು ದೊಡ್ಡಬೀರನಹಳ್ಳಿ ಗ್ರಾಮದ 31 ಫಲಾನುಭವಿಗಳಿಗೆ ಹಕ್ಕುಪತ್ರಗಳು ಮಂಜೂರಾಗಿವೆ.

ಬಡವರು, ನಿರ್ಗತಿಕರು, ಸೌಲಭ್ಯಗಳನ್ನು ಪಡೆಯದೇ ಇರುವವರು ಮತ್ತು ಯಾವುದೇ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ಥರಾಗಿರುವವರಿಗೆ ಸರ್ಕಾರ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿವೇಶನ ಮಂಜೂರು ಮಾಡಲಾಗುತ್ತಿರುವುದು ನೊಂದಿರುವ ಸಮುದಾಯದ ಜನರಿಗೆ ಆಸರೆಯಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಮುನಿವೆಂಕಟಪ್ಪ, ಪರಶುರಾಂಪುರ ರಾಜಸ್ವ ನಿರೀಕ್ಷಕರಾದ ಎಸ್.ಆರ್. ರಾಜೇಶ್, ಶೀರಸ್ತೇದಾರರಾದ ಗಿರೀಶ್, ಮುಖಂಡರಾದ ಎಸ್.ಡಿ.ಜಯಣ್ಣ, ತಿಪ್ಪೇಸ್ವಾಮಿ, ಗಿರಿಯಪ್ಪ, ಶಿವಲಿಂಗಪ್ಪ, ಮಹಾಲಿಂಗಪ್ಪ, ಮಂಜುನಾಥ್, ತಿಪ್ಪೇಸ್ವಾಮಿ, ಮುಖಂಡರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆಟ್ರೋಲ್‌ ಆಯ್ತು, ಈಗ ಜನೌಷಧಿ ಅಂಗಡಿಗಳ ಔಷಧವೂ ಕಳಪೆ: ರಾಜ್ಯ
ಪುಸ್ತಕ ಜಪ್ತಿ ಮಾಡಿದರೆ ಸರ್ಕಾರದ ವಿರುದ್ಧ ಕೇಸ್‌ ಹಾಕ್ತೀನಿ : ರವಿ ಹಂಜ್‌