ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಕಾಂಗ್ರೆಸ್ ವಿರೋಧವಿಲ್ಲ. ಮಹಿಳಾ ಮೀಸಲಾತಿ ಜೊತೆಗೆ ಲೋಕಸಭೆ ಮತಕ್ಷೇತ್ರ ವಿಂಗಡಣೆ ಕೈ ಹಾಕಿರುವುದು ಸರಿಯಲ್ಲ ಎಂದರು.ಲೋಕಸಭಾ ಮತಕ್ಷೇತ್ರ ವಿಂಗಡಣೆಯಲ್ಲಿ ಕೇಂದ್ರವು ತಾರತಮ್ಯ ಮಾಡಿದ್ದು, ಅದನ್ನು ಸರಿಪಡಿಸಬೇಕು. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷವು ಎಂದೆದಿಗೂ ವಿರೋಧಿಸಲ್ಲ. ಅದನ್ನು ನಾವು ಜಾರಿಗೆ ತಂದಿದ್ದೇವೆ. ಎನ್‌ಡಿಎ ಸರ್ಕಾರ ಮಹಿಳಾ ಮೀಸಲಾತಿಯಲ್ಲಿ ತಾರತಮ್ಯ ಮಾಡಿ ಈಗ ನಮ್ಮ ಮೇಲೆ ಗೂಬೆ ಕೂರಿಸುವಂತಹ ಕೆಲಸ ಮಾಡುತ್ತಿದೆ ಎಂದು ದೂರಿದರು.ಈ ಮಸೂದೆ ಜಾರಿಯಿಂದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಲಾಭ ಪಡೆಯಬೇಕೆಂದು ಕೇಂದ್ರ ಹುನ್ನಾರ ನಡೆಸಿತ್ತು. ಚುನಾವಣೆ ಬಳಿಕ ಕೇಂದ್ರ ಸರ್ಕಾರ ಮತ್ತೆ ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಮಾಡಿದ್ದು, ಇದು ಜನಸಾಮಾನ್ಯರ ಮೇಲೆ ಹೊರೆ ಬಿದ್ದಂತಾಗಿದೆ ಎಂದು ಕಿಡಿಕಾರಿದರು.ಗೋಷ್ಠಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮಿತ್ರಾ ಗುಳಬಾಳ, ರೇಣುಕಾ ನ್ಯಾಮಗೌಡ, ಮೇನಕಾ ಲಮಾಣಿ, ವಿಜಯಲಕ್ಷ್ಮೀ ಪೂಜಾರ, ಅನುರಾಧ ದೊಡಮನಿ ಮತ್ತಿತರರು ಇದ್ದರು.ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಾನು ಅಖಾಡದಲ್ಲಿ ಇರುತ್ತೇನೆ.2028ರಲ್ಲಿ ನಡೆಯುವ ವಿಧಾನಸಭೆ, 2029ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಖಚಿತ. ಅದರ ಬಗ್ಗೆ ಮುಂದೆ ಮಾತನಾಡುವೆ.
-ವೀಣಾ ಕಾಶಪ್ಪನವರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ.