ಆ.೨೮ರಂದು ಕಾಂಗ್ರೆಸ್ ಹಟಾವೋ, ದಲಿತ್ ಬಚಾವೋ ಸಮಾವೇಶ

KannadaprabhaNewsNetwork | Published : Aug 21, 2024 12:42 AM

ಸಾರಾಂಶ

ಸಂವಿಧಾನ ಪರ, ಸಂವಿಧಾನ ರಕ್ಷಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಯಾವ ಆಶಯವನ್ನೂ ಪಾಲಿಸುತ್ತಿಲ್ಲ, ಬದಲಿಗೆ ಈ ದೇಶದ ಕಟ್ಟಕಡೆಯ ಸಮುದಾಯವಾದ ದಲಿತರಿಗೆ ಸೌಲಭ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ದಲಿತರಿಗೆ ಮೀಸಲಿಟ್ಟಿದ್ದ ಎಸ್ಸಿ, ಎಸ್ಪಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ ೨೬ ಸಾವಿರ ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟದಿಂದ ಕಾಂಗ್ರೆಸ್ ಹಟಾವೋ ದಲಿತ್ ಬಚಾವೋ’ ಎಂಬ ಪ್ರತಿಭಟನಾ ಸಮಾವೇಶವನ್ನು ಆ.೨೮ರಂದು ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದು, ಮಂಡ್ಯ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಒಕ್ಕೂಟದ ರಾಜ್ಯ ಸಂಚಾಲಕ ಮೋಹನ್ ದಾಸರಿ ಮನವಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ದಲಿತರ ಪರ ಎಂದು ಹೇಳಿ ವಂಚಿಸಿದೆ, ಮುಖ್ಯಮಂತ್ರಿ ಅವರು ದಲಿತ ರಾಮಯ್ಯ ಎನ್ನುತ್ತಿದ್ದರು. ಈಗ ಅಧಿಕಾರ ಸಿಕ್ಕ ಕೂಡಲೇ ದಲಿತ ವಿರೋಧಿಯಾಗಿದ್ದಾರೆ, ಇದನ್ನು ವಿರೋಧಿಸಿ ಅಂದು ಬೆಳಗ್ಗೆ ೧೧ ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಂವಿಧಾನ ಪರ, ಸಂವಿಧಾನ ರಕ್ಷಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಸಂವಿಧಾನದ ಯಾವ ಆಶಯವನ್ನೂ ಪಾಲಿಸುತ್ತಿಲ್ಲ, ಬದಲಿಗೆ ಈ ದೇಶದ ಕಟ್ಟಕಡೆಯ ಸಮುದಾಯವಾದ ದಲಿತರಿಗೆ ಸೌಲಭ್ಯ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜೊತೆಗೆ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಆಡಳಿತ ವಿರುದ್ಧ ಪ್ರತಿಭಟಿಸುವ ನಡೆಯೇ ಕಾಂಗ್ರೆಸ್ ಹಟಾವೋ ದಲಿತ್ ಬಚಾವೋ ಎಂಬ ಸಮಾವೇಶದಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ, ಇದರ ಬಗ್ಗೆ ಭೇಟಿಗೆಂದು ಕಳೆದು ಆರು ತಿಂಗಳಿಂದಲೂ ಸಮಯ ಕೇಳಿದರೂ ನೀಡಿಲ್ಲ, ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗೆ ಪ್ರಬುದ್ಧ ಯೋಜನೆ ರದ್ದು ಮಾಡಿರುವುದು, ಒಳ ಮೀಸಲಾತಿ ಜಾರಿ ತರುವುದಕ್ಕೂ ಹಿಂದುಮುಂದು ನೋಡುತ್ತಿರುವುದು ಸೇರಿದಂತೆ ಒಟ್ಟು ಒಂಭತ್ತು ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ರಾಜ್ಯ ಸಂಚಾಲಕರಾದ ಸಿದ್ದಾಪುರ ಮಂಜುನಾಥ್, ದಲಿತ ರಮೇಶ್, ಮುಖಂಡರಾದ ಸಿ.ಕೆ.ಪಾಪಯ್ಯ, ಶಂಕರರಾಮಲಿಂಗಯ್ಯ, ಪ್ರಸನ್ನ ಚಕ್ರವರ್ತಿ ಗೋಷ್ಠಿಯಲ್ಲಿದ್ದರು.

Share this article