ಭಾರತ್‌ ಜೋಡೋ ನೋಂದಣಿಗೆ ಕಾಂಗ್ರೆಸ್‌ನಿಂದ ಆಂದೋಲನ: ಐವನ್‌ ಡಿಸೋಜಾ

KannadaprabhaNewsNetwork |  
Published : Sep 01, 2026, 03:15 AM IST
ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ನೇತೃತ್ವದಲ್ಲಿ ಸಭೆ ನಡೆಯಿತು | Kannada Prabha

ಸಾರಾಂಶ

ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್‌ನಲ್ಲೂ ಭಾರತ್‌ ಜೋಡೋ ಯುವ ಸಂಘಟನೆಯನ್ನು ರಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನೋಂದಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ರೂಪದ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ ಪಕ್ಷದ ಯುವ ಸಂಘಟನೆಯ ಉಸ್ತುವಾರಿ ಐವನ್‌ ಡಿಸೋಜಾ ತಿಳಿಸಿದ್ದಾರೆ.

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್‌ನಲ್ಲೂ ಭಾರತ್‌ ಜೋಡೋ ಯುವ ಸಂಘಟನೆಯನ್ನು ರಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನೋಂದಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ರೂಪದ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ ಪಕ್ಷದ ಯುವ ಸಂಘಟನೆಯ ಉಸ್ತುವಾರಿ ಐವನ್‌ ಡಿಸೋಜಾ ತಿಳಿಸಿದ್ದಾರೆ.ಅವರು ಮನಪಾದ ತಮ್ಮ ಕಚೇರಿಯಲ್ಲಿ 203ನೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋ-ಆರ್ಡಿನೇಟರ್‌ಗಳನ್ನು ಉದ್ದೇಶಿಸಿ ಮಾತನಾಡಿದರು.ಪ್ರತಿಯೊಂದು ವಾರ್ಡ್‌ನಲ್ಲೂ ಯುವ ಸಂಘಟನೆಗಳನ್ನು ಶೀಘ್ರವಾಗಿ ರಚಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಆಫ್‌ಲೈನ್‌ ಮೂಲಕ ಯುವಕರ ಅರ್ಜಿಗಳನ್ನು ಭರ್ತಿ ಮಾಡಿಸಿ, ಎಲ್ಲಾ ಸಮುದಾಯಗಳ ಯುವಕರನ್ನು ಒಳಗೊಂಡ ಭಾರತ್‌ ಜೋಡೋ ಯುವ ಸಂಘಟನೆಗಳನ್ನು ರಚಿಸಬೇಕು. ಮುಂದಿನ ಪೀಳಿಗೆಯಲ್ಲಿ ಯುವ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಈ ಸಂಘಟನೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಶಂಶುದ್ದೀನ್ ಕುದ್ರೋಳಿ, ಕೇಶವ ಮರೋಳಿ, ಅಶೋಕ್ ಕುಮಾರ್ ಡಿ.ಕೆ., ಭಾಸ್ಕರ್ ರಾವ್, ಸತೀಶ್ ಪೆಂಗಲ್, ತನ್ವೀರ್ ಶಾ, ಚೇತನ್ ಕುಮಾರ್, ಹೇಮಂತ್ ಗರೋಡಿ, ತರಬೇತುದಾರರಾದ ದುರ್ಗಾ ಪ್ರಸಾದ್, ಅಮಿತಾ ಅಶ್ವಿನ್, ಕೋ-ಆರ್ಡಿನೇಟರ್‌ಗಳಾದ ನೀತು ಡಿಸೋಜಾ, ಹಬೀಬುಲ್ಲಾ ಕಣ್ಣೂರು, ಹರ್ಬರ್ಟ್ ಡಿಸೋಜಾ, ನವಾಜ್ ಜಪ್ಪು, ದಿನೇಶ್ ರಾವ್, ಕವಿತಾ ವಾಸು, ನೆಲ್ಸನ್ ರೋಚೆ, ಓಸ್ವಾಲ್ಡ್ ಫುರ್ಟಾಡೋ, ಅಶ್ರಫ್ ಬೆಂಗ್ರೆ, ರಿತೇಶ್ ಅಂಚನ್, ವೆಲ್ವಿನ್ ಕ್ಯಾಸ್ಟೆಲೀನೋ, ವಹಾಬ್ ಕುದ್ರೋಳಿ, ಕ್ಲೈಡ್, ಲಾನ್ಸಿ ರಸ್ರಾಡೋ, ಅಮೃತ್ ಕದ್ರಿ, ಆಶಾಲತಾ, ಗಿರೀಶ್ ಶೆಟ್ಟಿ, ಶಂಶುದ್ದೀನ್, ನಾಯಕರಾದ ಜೇಮ್ಸ್ ಪ್ರವೀಣ್, ಶಾಂತಲ ಗಟ್ಟಿ, ನ್ಯಾನ್ಸಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಮೂಲನಂದೀಶ್ವರ ಜಾತ್ರೆಯ ಪಲ್ಲಕ್ಕಿ ಮಹೋತ್ಸವ
ಅಜೆಕಾರು: ಸಾರಥಿ ಆಂಬುಲೆನ್ಸ್ ಲೋಕಾರ್ಪಣೆ