ಬಂದ್‌ ವೇಳೆ ಕಾಂಗ್ರೆಸ್‌ ಮುಖಂಡರ ದೌರ್ಜನ್ಯ ಅಕ್ಷಮ್ಯ

KannadaprabhaNewsNetwork |  
Published : Nov 21, 2025, 01:00 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ1. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ನಿವಾಸದಲ್ಲಿ ಗುರುವಾರ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ  ಸುದ್ದಿಗೋಷ್ಠಿಯಲ್ಲಿ ಮಂಗಳವಾರ ನಡೆಸಿದ ಪ್ರತಿಭಟನೆ ಮತ್ತು ಬಂದ್ ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿ, ಬಂದ್ ವೇಳೆ ಕಾಂಗ್ರೇಸ್ ಮುಖಂಡರ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ  ಮಾತನಾಡಿದರು.  | Kannada Prabha

ಸಾರಾಂಶ

ರೈತರ ಹಿತಕ್ಕಾಗಿ ಹಾಗೂ ಅಭಿವೃದ್ಧಿ ಪರವಾಗಿ ಸರ್ಕಾರದ ವಿರುದ್ಧ ನ.18ರಂದು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿ, ಬಂದ್ ಆಚರಿಸಲಾಗಿದೆ. ಆದರೂ ಕಾಂಗ್ರೆಸ್‌ನ ಕೆಲವರು ಏಕಾಏಕಿಯಾಗಿ ಆಗಮಿಸಿ ಪ್ರತಿಭಟನಾಕಾರರಿಗೆ ಅವಾಚ್ಯ ಶಬ್ಧಗಳ ಬಳಸಿ, ಬಿಜೆಪಿ ಮುಖಂಡ ಎಂ.ಎಸ್. ಪಾಲಾಕ್ಷಪ್ಪ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.

- ಶಾಸಕ ಶಾಂತನಗೌಡ ಬೀದಿ ಸಂಘರ್ಷಕ್ಕೆ ಇಳಿಯಬಾರದಿತ್ತು: ರೇಣುಕಾಚಾರ್ಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರೈತರ ಹಿತಕ್ಕಾಗಿ ಹಾಗೂ ಅಭಿವೃದ್ಧಿ ಪರವಾಗಿ ಸರ್ಕಾರದ ವಿರುದ್ಧ ನ.18ರಂದು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿ, ಬಂದ್ ಆಚರಿಸಲಾಗಿದೆ. ಆದರೂ ಕಾಂಗ್ರೆಸ್‌ನ ಕೆಲವರು ಏಕಾಏಕಿಯಾಗಿ ಆಗಮಿಸಿ ಪ್ರತಿಭಟನಾಕಾರರಿಗೆ ಅವಾಚ್ಯ ಶಬ್ಧಗಳ ಬಳಸಿ, ಬಿಜೆಪಿ ಮುಖಂಡ ಎಂ.ಎಸ್. ಪಾಲಾಕ್ಷಪ್ಪ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

ಗುರುವಾರ ಹೊನ್ನಾ‍‍ಳಿಯ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಮಂಗಳವಾರ ಬಿಜೆಪಿ ಪ್ರತಿಭಟನೆ, ಬಂದ್ ಆಚರಿಸಿದ ಸಂದರ್ಭ ಹಾಲಿ ಶಾಸಕ ಡಿ.ಜಿ,. ಶಾಂತನಗೌಡರು ತಮ್ಮ ಬಗ್ಗೆ ಏಕವಚನ ಬಳಸಿ, ಹಗುರವಾಗಿ ಮಾತನಾಡಿದ್ದಾರೆ. ಅವರು ಹಿರಿಯರೆಂಬ ಕಾರಣಕ್ಕೆ ಗೌರವವಿದೆ. ಅವರೇ ಶಾಸಕರಿದ್ದಾರೆ. ಅವರದ್ದೇ ಸರ್ಕಾರವಿದೆ. ಬೀದಿಗಿಳಿಯದೇ ಪ್ರತಿಭಟನಾಕಾರರು ತಪ್ಪು ಮಾಡಿದ್ದರೆ ಪೊಲೀಸ್ ಮೂಲಕ ಕ್ರಮ ಕೈಗೊಳ್ಳಬೇಕಾಗಿತ್ತು. ಇದನ್ನು ಬಿಟ್ಟು ಅವರೇ ಬೀದಿಗಿಳಿದು ಅವಾಚ್ಯ ಶಬ್ದ ಬಳಿಸಿದ್ದು, ಕಾಂಗ್ರೆಸ್ ಜಿಲ್ಲಾ ಮುಖಂಡ ಎಚ್.ಬಿ.ಮಂಜಪ್ಪ ಏಕಾಏಕಿಯಾಗಿ ಬಿಜೆಪಿ ಮುಖಂಡ ಪಾಲಾಕ್ಷಪ್ಪ ಮೇಲೆ ಹಲ್ಲೆ ಮಾಡಿದ್ದು ದಬ್ಬಾಳಿಕೆ ವರ್ತನೆ ಎಂದು ದೂರಿದರು.

ಶಾಸಕರು ತಮ್ಮ ವಯಸ್ಸಿಗೆ, ಅನುಭವಕ್ಕೆ ತಕ್ಕಂತೆ ವರ್ತಿಸಬೇಕು. ಇದನ್ನು ಬಿಟ್ಟು ಬೀದಿ ಸಂಘರ್ಷಕ್ಕೆ ಇಳಿಯಬಾರದು. ಮಂಗಳವಾರ ನಡೆದ ಎಲ್ಲ ಘಟನೆಗಳನ್ನು ಸರಿಯಾಗಿ ನಿಭಾಯಿಸದೇ ಫೊಲೀಸರು ಅಸಹಾಯಕರಂತೆ, ಮೂಕ ಪ್ರೇಕ್ಷಕರಂತೆ ವರ್ತಿಸಿದ್ದಾರೆ. ಮುಂದೆ ಜಿಲ್ಲಾ ಕೇಂದ್ರದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಬಿಜೆಪಿ ಮುಖಂಡ ಎಂ.ಎಸ್. ಪಾಲಾಕ್ಷಪ್ಪ ಮಾತನಾಡಿ, ಪ್ರತಿಭಟನೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಏಕಾಎಕಿಯಾಗಿ ತನ್ನ ಮೇಲೆ ದೌರ್ಜನ್ಯ ನಡೆಸಿದ್ದು ಸತ್ಯ. ತಾನು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಬಾಬು ಹೋಬಳದಾರ, ಮಂಜುನಾಥ ಇಂಚರ, ಕುಂದೂರು ಅನಿಲ್, ಬಡಾವಣೆ ರಂಗಪ್ಪ, ಮಹೇಶ್ ಹುಡೇದ್, ಬಿಜೆಪಿ ಮುಖಂಡರು ಇದ್ದರು.

- - -

(ಕೋಟ್‌) ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಮತ್ತು ಬಂದ್‌ಗೆ ಅವಳಿ ತಾಲೂಕುಗಳ ಬಸ್, ಆಟೋ ಚಾಲಕರು- ಮಾಲೀಕರು, ಅಂಗಡಿ, ಹೋಟೆಲ್‌ಗಳ ಮಾಲೀಕರು, ವರ್ತಕರು ಎಲ್ಲರೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಇವರೆಲ್ಲರಿಗೂ ಬಿಜೆಪಿ ವಂದನೆಗಳು.

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.

- - -

-20ಎಚ್.ಎಲ್.ಐ1.ಜೆಪಿಜಿ:

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

50% ಮುಗಿದ ವಾರಾಹಿ ಏತ ನೀರಾವರಿಗೆ ತಡೆ : ಕಿಚ್ಚು
ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!