ಡಾ. ಮಂತರ್ ಗೌಡಗೆ ಸಚಿವ ಸ್ಥಾನ ನೀಡಲು ಕಾಂಗ್ರೆಸ್ ಮುಖಂಡರ ಒತ್ತಾಯ

KannadaprabhaNewsNetwork |  
Published : Jun 09, 2026, 02:45 AM IST
ಸುದ್ದಿಗೋಷ್ಠಿ ಸಂದರ್ಭ | Kannada Prabha

ಸಾರಾಂಶ

ಮಡಿಕೇರಿ ಕ್ಷೇತ್ರದ ಜನಾನುರಾಗಿ ಶಾಸಕರಾದ ಡಾ. ಮಂತರ್ ಗೌಡ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ತಂದಿದ್ದು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲಿ ಸಚಿವರಾಗಿ ನೇಮಕವಾಗಬೇಕು ಎಂದು ಕುಶಾಲನಗರ ತಾಲೂಕು ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾಗಿ ಕಾಂಗ್ರೆಸ್ ಮುಖಂಡ ಕೆ ಎಸ್ ಕೃಷ್ಣೇಗೌಡ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಮಡಿಕೇರಿ ಕ್ಷೇತ್ರದ ಜನಾನುರಾಗಿ ಶಾಸಕರಾದ ಡಾ. ಮಂತರ್ ಗೌಡ ಅವರು ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಕಳೆದ ಮೂರು ವರ್ಷಗಳಿಂದ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ತಂದಿದ್ದು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದ ಎರಡನೇ ಪಟ್ಟಿಯಲ್ಲಿ ಸಚಿವರಾಗಿ ನೇಮಕವಾಗಬೇಕು ಎಂದು ಕುಶಾಲನಗರ ತಾಲೂಕು ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾಗಿ ಕಾಂಗ್ರೆಸ್ ಮುಖಂಡ ಕೆ ಎಸ್ ಕೃಷ್ಣೇಗೌಡ ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಫೀನಿಕ್ಸ್ ಪಕ್ಷಿಯಂತೆ ಗೆಲುವು ಸಾಧಿಸಿ ಬಿಜೆಪಿಯ ಪ್ರಬಲ ಅಭ್ಯರ್ಥಿಯನ್ನು ಸೋಲಿಸಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ತಂದು ಜನಾನುರಾಗಿರುವ ಡಾ. ಮಂತರ್ ಗೌಡ ಅವರಿಗೆ ಕೊಡಗು ಜಿಲ್ಲೆಯ ಮಂತ್ರಿಯಾಗಿ ಪ್ರಾತಿನಿಧ್ಯ ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರನ್ನು ಒತ್ತಾಯಿಸುತ್ತಿದ್ದೇವೆ ಎಂದರು.ಮತ್ತೊಬ್ಬ ಕಾಂಗ್ರೆಸ್ ಮುಖಂಡ ಲೋಕೇಶ್ ಟಿ.ಜಿ. ಮಾತನಾಡಿ, ಯುವ ನೇತಾರ ಉತ್ತಮ ಸಂಘಟಕರು ಆಗಿರುವ, ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ಅವರನ್ನು ಕ್ಷೇತ್ರದ ಕೆಲವು ಬಿಜೆಪಿ ಕಾರ್ಯಕರ್ತರು ದಕ್ಷತೆಯ ಕೆಲಸಗಳಿಗಾಗಿ ಮೆಚ್ಚಿಕೊಂಡಿದ್ದಾರೆ. ಕ್ಷೇತ್ರದ ಉದ್ದಗಲಕ್ಕೆ ಓಡಾಡಿ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಶಾಸಕ ಮಂತರ್ ಗೌಡ ಅವರಿಗೆ ಮಂತ್ರಿ ಸ್ಥಾನ ಸಿಗಲೇಬೇಕು ಎಂದು ಒತ್ತಾಯಿಸಿದರು.ತಾಲೂಕು ಪಂಚಾಯಿತಿಯ ಮಾಜಿ ಉಪಾಧ್ಯಕ್ಷ, ಮಾಜಿ ಕಾಂಗ್ರೆಸ್ ಮುಖಂಡ ಟಿ ಕೆ ಪಾಂಡುರಂಗ ಮಾತನಾಡಿ, ಡಾ ಮಂತರ್ ಗೌಡ ಅವರು ಕ್ಷೇತ್ರದ ಎಲ್ಲೆಡೆ ಸಂಚರಿಸಿ ಯುವ ಪಡೆಯನ್ನು ಸಂಘಟಿಸಿ ಉತ್ತಮ ಕೆಲಸಗಳನ್ನು ಸರ್ಕಾರದ ಅನುದಾನದ ಮೂಲಕ ಮಾಡುತ್ತಿದ್ದಾರೆ. ಇಂತಹ ಸ್ಪಟಿಕದಂತಹ, ಚುರುಕಾಗಿ ಕೆಲಸ ಮಾಡುವ ಶಾಸಕರಿಗೆ ಕೊಡಗು ಜಿಲ್ಲೆಗೆ ಕೊಡ ಮಾಡುವ ಸಚಿವ ಸ್ಥಾನದಲ್ಲಿ ಅವಕಾಶ ಕಲ್ಪಿಸಬೇಕೆಂದು, ಈ ಕ್ಷೇತ್ರದ ಬಹು ಸಂಖ್ಯಾತ ಕಾರ್ಯಕರ್ತರ, ಸಾರ್ವಜನಿಕ ಪಕ್ಷಾತೀತರ ಅಭಿಪ್ರಾಯವಾಗಿದೆ. ಆ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಅವರ ಸಚಿವಾಕಾಂಕ್ಷಿಗಳ ಎರಡನೇ ಪಟ್ಟಿಯಲ್ಲಿ ಅವಕಾಶ ಕಲ್ಪಿಸುವ ಮೂಲಕ ಕೊಡಗಿನ ಅಭಿವೃದ್ಧಿಗಾಗಿ ಹೈಕಮಾಂಡ್ ಮಟ್ಟದ ನಾಯಕರು ಸಹಕರಿಸಬೇಕು ಎಂದು ಗೋಷ್ಠಿಯಲ್ಲಿ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೂರ್ತಿ ಎಚ್ ಸಿ, ಮೋಹನ್ ಕುಮಾರ್, ರವಿಚಂದ್ರ ಟಿ.ಎ, ಮತ್ತು ಸಂಜೀವ್ ಮೂರ್ತಿ ಟಿ.ಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗೂರು ಪ್ರೌಢಶಾಲೆ: ಕಿಚನ್‌ ಗಾರ್ಡನ್‌ಗೆ ಚಾಲನೆ
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ರಾಜೇಂದ್ರ ಕುಮಾರ್‌ಗೆ ಸನ್ಮಾನ