ದರ್ಗಾದಲ್ಲಿ ಹರಕೆ ತೀರಿಸಲು ಹೊರಟ ಕಾಂಗ್ರೆಸ್ ಮುಖಂಡರು

KannadaprabhaNewsNetwork |  
Published : Jul 15, 2025, 11:45 PM IST
ವಿಜೆಪಿ ೧೪ವಿಜಯಪುರ ಪಟ್ಟಣದ ಪರೀಕ್ಷಾ ಮಂದಿರದ ಪರಿವಿಕ್ಷಣ ಮಂದಿರದ ಬಳಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮಂಜುನಾಥ್ ರವರ ನೇತೃತ್ವದಲ್ಲಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ದರ್ಗಗೆ ಹರಕೆ ತೀರಿಸಲು ಹೊರಟ ಕಾಂಗ್ರೆಸ್ ಮುಖಂಡರುಗಳು | Kannada Prabha

ಸಾರಾಂಶ

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಕಾರಣ ಅಮೀನ್ ಪೀರ್ ದರ್ಗಾದಲ್ಲಿ ಹರಕೆ ತೀರಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಿ.ಮಂಜುನಾಥ್ ನೇತೃತ್ವದಲ್ಲಿ ೨೦೦ ಜನ ಎಲ್ಲಾ ಸಮುದಾಯದ ಮುಖಂಡರು ಹೊರಟರು.

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಕಾರಣ ಅಮೀನ್ ಪೀರ್ ದರ್ಗಾದಲ್ಲಿ ಹರಕೆ ತೀರಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ವಿ.ಮಂಜುನಾಥ್ ನೇತೃತ್ವದಲ್ಲಿ ೨೦೦ ಜನ ಎಲ್ಲಾ ಸಮುದಾಯದ ಮುಖಂಡರು ಹೊರಟರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ, ಆಂಧ್ರಪ್ರದೇಶದ ಕಡಪದ ದರ್ಗಾದಲ್ಲಿ ಕೃತಜ್ಞತಾ ಪೂರ್ವಕ ಹರಕೆ ಸಲ್ಲಿಸಲು ಪಟ್ಟಣದ ೨೩ ವಾರ್ಡ್ ಗಳ ಎಲ್ಲಾ ಜನಾಂಗ ಮತಬಾಂಧವರು ಹೊರಟಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಸಚಿವರಿಂದ ಕ್ಷೇತ್ರಕ್ಕೆ ದೊರಕುವಂತಾಗಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಬಾರಕ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿಎಂ ನಾಗರಾಜ್, ಕಾರ್ಯದರ್ಶಿ ಮಂಜುನಾಥ್, ಪುರಸಭಾ ಸದಸ್ಯರಾದ ಹನೀಫುಲ್ಲಾ, ರಾಜಣ್ಣ, ಇಕ್ಬಾಲ್, ಎಂ ನಾರಾಯಣಸ್ವಾಮಿ, ಮಾಜಿ ಸದಸ್ಯ ಜೆಎನ್ ಶ್ರೀನಿವಾಸ್, ಮುಖಂಡರುಗಳಾದ ಮಧು, ವಲ್ಲಿ ಜಾನ್, ಮಹೇಶ್, ಮುನಿ ನಾರಾಯಣ್, ಬಿವಿ ಕೃಷ್ಣಪ್ಪ, ವೇಣು, ಚಿಕ್ಕನಹಳ್ಳಿ ವೆಂಕಟೇಶ್, ಅಫ್ಜಲ್, ಮೌಲಾನ ಬೇಗ್, ಬಾಬು ಮತ್ತಿತರರು ಉಪಸ್ಥಿತರಿದ್ದರು. ೩೦ಕ್ಕೂ ಹೆಚ್ಚು ವಾಹನಗಳಲ್ಲಿ ೨೦೦ ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಹರಕೆ ತೀರಿಸಲು ಹೊರಟಿದ್ದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರ ಪಟ್ಟಣದ ಪರಿವೀಕ್ಷಣ ಮಂದಿರದ ಬಳಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಮಂಜುನಾಥ್ ನೇತೃತ್ವದಲ್ಲಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ದರ್ಗಕ್ಕೆ ಹರಕೆ ತೀರಿಸಲು ಹೊರಟ ಕಾಂಗ್ರೆಸ್ ಮುಖಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ